ಬೆಂಗಳೂರು: ಕಬ್ಬು ಹೋರಾಟಗಾರರ ಪರವಾಗಿ ಕೀಳಾಗಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹಾಗೂ ಸಂಸದ ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ.
ರೈತರ ಸಮಸ್ಯೆಗೆ ಬಗ್ಗೆ ಮಾತನಾಡಿದ ಬಿಎಸ್‍ವೈ ಅವರು, “ಮಾತು ಎತ್ತಿದ್ದರೆ ಅವರಿಗೆ ವೋಟ್ ನೀಡಿ. ನನಗೆ ಏಕೆ ಕೇಳುತ್ತೀರಾ ಎಂದು ಹೇಳುತ್ತೀರಿ. ನಿಮಗೆ ವೋಟ್ ಕೊಟ್ಟಿಲ್ಲ ತಾನೇ. 124 ಸೀಟ್‍ನಲ್ಲಿ ನೀವು ಗೆದ್ದಿರುವುದು ಕೇವಲ 37 ಸೀಟ್. ಹಾಗಾದ್ರೆ ಮುಖ್ಯಮಂತ್ರಿ ಸ್ಥಾನ ಏಕೆ ಒಪ್ಪಿಕೊಂಡಿದ್ದೀರಿ” ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದ್ದಾರೆ.
Advertisement
Advertisement
ನಿಮಗೆ ಸಿಎಂ ಕುರ್ಚಿ ಬೇಕು. ಆದರೆ ರೈತರ ಸಮಸ್ಯೆ ಬಗ್ಗೆಹರಿಸಲು ನೀವು ಸಿದ್ಧರಿಲ್ಲ. ಇಂದು ಬೆಳಗಾವಿಯಲ್ಲಿರುವಂತಹ ರೈತರಿಗೆ ಬೆಂಬಲ ಬೆಲೆ ಬೇಕು ಎಂದು ಅನೇಕ ಹೋರಾಟಗಾರರಿಗೆ ನಾನೇ ಬೆಳಗಾವಿಗೆ ಬಂದು ರೈತರ ಸಮಸ್ಯೆಯನ್ನು ಬಗೆ ಹರಿಸುತ್ತೇನೆ ಎಂದು ಹೇಳಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ಮುಖ್ಯಮಂತ್ರಿಯಾಗಿ ಪ್ರತಿ ತಿಂಗಳು ರೈತರ ಸಭೆ ನಡೆಸುತ್ತೇನೆ ಎಂದು ಹೇಳಿದ್ದೀರಿ. ಆದರೆ ಇದೂವರೆಗೂ ನೀವು ಸಭೆ ಮಾಡಲಿಲ್ಲ. ರೈತರ ಉತ್ಪನ್ನಗಳನ್ನು ಖರೀದಿಸಲು ನಿಮಗೆ ಯೋಗ್ಯತೆಯಿಲ್ಲ. ರೈತರಿಗೆ ಕಬ್ಬಿನ ಬೆಲೆ ಬಗ್ಗೆ ಕೇಂದ್ರ ಸರ್ಕಾರ ಕಬ್ಬಿನ ಕಾರ್ಖಾನೆಗೆ ಅನೇಕ ಸಹಕಾರ ನೀಡಿದರೂ ಸಹ ಸರಿಯಾದ ಬೆಂಬಲ ಬೆಲೆ ನಿರ್ಧಾರ ಮಾಡಿ ಬಾಕಿ ಹಣ ಪಾವತಿಸುವ ಕೆಲಸಕ್ಕೆ ನೀವು ಸಿದ್ಧರಿಲ್ಲ ಬಿಎಸ್‍ವೈ ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿ, ನಿಮ್ಮ ಗುಪ್ತಚರ ಇಲಾಖೆಯಲ್ಲಿ ನಿಮಗೆ ಸಾಕ್ಷಿ ಆಧಾರವಿದ್ದರೆ ಕೈವಾಡ ಮಾಡಿದ್ದವರನ್ನು ಅರೆಸ್ಟ್ ಮಾಡಿ. ಸಾಮಾನ್ಯ ರೈತರನ್ನು ಯಾಕೆ ಬಂಧಿಸುತ್ತಿದ್ದೀರಿ. ನೀವು ಸಾಲಮನ್ನಾ ಮಾಡುತ್ತೇವೆ ಎಂದು ಹೇಳುತ್ತಿದ್ದೀರಿ. ಆದರೆ ಟಿಪ್ಪು ಜಯಂತಿಗೆ ತೋರಿಸಿದ ಆಸಕ್ತಿಯನ್ನು ನೀವು ಯಾಕೆ ರೈತರ ಸಾಲಮನ್ನಾ ಬಗ್ಗೆ ಏಕೆ ತೋರಿಸುತ್ತಿಲ್ಲ. ಇದುವರೆಗೂ ರೈತರಿಗೆ ನೋಟಿಸ್ ನೀಡುವವರಿಗೆ ಏಕೆ ನೋಟಿಸ್ ನೀಡಿಲ್ಲ. ಸುಳ್ಳು ಹೇಳುವುದು ಅವರ ರಕ್ತದಲ್ಲೇ ಬಂದಿದೆ. ರಾಜಕೀಯ ವಿರೋಧಿಗಳನ್ನು ಸಿಸಿಬಿ ಮೂಲಕ ಹೆದರಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews