ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರು ಬುಲೆಟ್ ಪ್ರೂಫ್ ಬಕೆಟ್ ಧರಿಸಿ ಕೋರ್ಟ್‍ಗೆ ಹಾಜರಾದರು.
ಲಾಹೋರ್‌ನ (Lahore) ನ್ಯಾಯಾಲಯಕ್ಕೆ ಇಮ್ರಾನ್ ಖಾನ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೈಡ್ರಾಮವನ್ನು ಸೃಷ್ಟಿಸಿದ್ದಾರೆ. ಇಮ್ರಾನ್ ಖಾನ್ ವಿಚಾರಣೆಗೆ ಆಗಮಿಸಿದ್ದು, ಬಿಗಿ ಭದ್ರತೆಯ ಮೂಲಕ ನ್ಯಾಯಾಲಯದ ಕೊಠಡಿ ಪ್ರವೇಶಿಸಿದ್ದಾರೆ. ಭಯೋತ್ಪಾದನಾ ನಿಗ್ರಹ ನ್ಯಾಯಾಲಯಕ್ಕೆ ಬಂದ ಅವರು, 3 ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದಾರೆ.
ಇಮ್ರಾನ್ ಬುಲೆಟ್ ಪ್ರೂಫ್ ಬಕೆಟ್ ಧರಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಬುಲೆಟ್ ಪ್ರೂಫ್ ಹೆಲ್ಮೆಟ್‍ನಿಂದಾಗಿ ನೋಡುವುದು ಕಷ್ಟವಾಗಿದೆ. ಇದರಿಂದಾಗಿ ಸಹಾಯಕರೊಬ್ಬರು ಇಮ್ರಾನ್ ಖಾನ್‍ಗೆ ನ್ಯಾಯಾಲಯದ ಕಡೆಗೆ ಮಾರ್ಗದರ್ಶನ ನೀಡಿದರು. ಇದನ್ನೂ ಓದಿ: ವರನ ಕೊಲೆಗೆ ಸ್ಕೆಚ್ ಹಾಕಿ ಸ್ಫೋಟಕ ತುಂಬಿ ಗಿಫ್ಟ್ ಕೊಟ್ಟ ವಧುವಿನ ಮಾಜಿ ಲವ್ವರ್!
2022ರ ನವೆಂಬರ್‌ನಲ್ಲಿ ವಜೀರಾಬಾದ್‍ನಲ್ಲಿ ನಡೆದ ರ‍್ಯಾಲಿ ವೇಳೆ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್ ಕಾಲಿಗೆ ಗುಂಡು ಹಾರಿಸಲಾಗಿತ್ತು. ಅಂದಿನಿಂದ ಇಮ್ರಾನ್ ಖಾನ್ ಜೀವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಭದ್ರತೆಯಲ್ಲಿ ಪ್ರಯಾಣಿಸುತ್ತಾರೆ. ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲಿ ಕಾಂಗ್ರೆಸ್ ಶಾಸಕನಿಂದ ಬ್ಯಾಂಕ್ ಸಿಬ್ಬಂದಿಗೆ ಕಪಾಳಮೋಕ್ಷ