ಇಸ್ಲಾಮಾಬಾದ್: ಪಾಕಿಸ್ತಾನದ ಆರ್ಥಿಕತೆ ಭಾರತಕ್ಕಿಂತ ಚೆನ್ನಾಗಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಮಂಗಳವಾರ ಇಸ್ಲಾಮಾಬಾದ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಚೇಂಬರ್ಸ್ ಶೃಂಗಸಭೆ 2022ರ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿ, ಪಾಕಿಸ್ತಾನವು ಬೇರೆ ದೇಶಗಳಿಗಿಂತ ವಿಶೇಷವಾಗಿ ಭಾರತಕ್ಕಿಂತ ಉತ್ತಮ ಆರ್ಥಿಕ ಸ್ಥಿತಿಯಲ್ಲಿದೆ ಎಂದಿದ್ದಾರೆ. ಇದನ್ನೂ ಓದಿ: ಹಿಟ್ಟಿನ ಮೇಲೆ ಉಗುಳಿ ರೊಟ್ಟಿ ಮಾಡಿದವನು ಸೇರಿ 5 ಜನ ಅರೆಸ್ಟ್
Advertisement
Advertisement
ಬೇರೆ ದೇಶಗಳಿಗೆ ಹೋಲಿಸಿದರೆ ಪಾಕಿಸ್ತಾನ ಇನ್ನೂ ಅಗ್ಗದ ದೇಶಗಳಲ್ಲಿ ಒಂದಾಗಿದೆ. ನಮ್ಮನ್ನು ಅಸಮರ್ಥರು ಎಂದು ಕರೆಯುತ್ತಾರೆ, ಆದರೆ ನಮ್ಮ ಸರ್ಕಾರವು ಎಲ್ಲಾ ಬಿಕ್ಕಟ್ಟುಗಳಿಂದ ರಾಷ್ಟ್ರವನ್ನು ಉಳಿಸಿದೆ ಎಂಬುದು ಸತ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ನೆಟ್ಟಿಗರ ಆಕ್ರೋಶಕ್ಕೆ ಮಣಿದು ಸೈನಾ ಬಳಿ ಕ್ಷಮೆಯಾಚಿಸಿದ ಸಿದ್ದಾರ್ಥ್
Advertisement
Advertisement
ಇತರ ದೇಶಗಳಿಗೆ ಹೋಲಿಸಿದರೆ ಪಾಕಿಸ್ತಾನದಲ್ಲಿ ತೈಲ ಬೆಲೆಗಳು ಇತರ ದೇಶಗಳಿಗಿಂತ ಕಡಿಮೆಯಾಗಿದೆ. ಸದ್ಯದಲ್ಲೇ ಪಾಕ್ ಸಂಸತ್ತಿನಲ್ಲಿ ಹಣಕಾಸು ಮಸೂದೆ ಮಂಡನೆಯಾಗಬೇಕಿದ್ದು, ಪ್ರಧಾನಿ ಇಮ್ರಾನ್ ಖಾನ್ ಈ ಮಾತು ಹೇಳಿರುವುದು ಗಮನಾರ್ಹ. ಸದ್ಯಕ್ಕೆ ಪಾಕಿಸ್ತಾನದ ಆರ್ಥಿಕ ಸ್ಥಿತಿ ದುಃಸ್ಥಿತಿಯಲ್ಲಿದ್ದರು ಪಾಕ್ ಹಣಕಾಸು ಚೆನ್ನಾಗಿಯೇ ಇದೆ ಎಂದಿದ್ದಾರೆ.