ಇಸ್ಲಾಮಾಬಾದ್: ಸರ್ಕಾರ ನನ್ನ ಹಾಗೂ ಪಿಟಿಐ ಬೆಂಬಲಿಗರ ವಿರುದ್ಧ ಸೇನೆಯನ್ನು ಎತ್ತಿಕಟ್ಟಿದೆ. ಪಾಕಿಸ್ತಾನ (Pakistan) ದುರಂತ ಅಂತ್ಯದತ್ತ ದಾಪುಗಾಲಿಡುತ್ತಿದ್ದು, ಇಬ್ಭಾಗವಾಗುವ ಸನಿಹದಲ್ಲಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಎಚ್ಚರಿಸಿದ್ದಾರೆ.
ಆಡಳಿತಾರೂಢ ಸರ್ಕಾರದ ಕಾರ್ಯವೈಖರಿ ವಿರುದ್ಧ ಮಾತನಾಡಿರುವ ವಿಡಿಯೋ ಬಿಡುಗಡೆ ಮಾಡಿದ್ದು, ದೇಶದಲ್ಲಿ ತಲೆದೋರಿರುವ ರಾಜಕೀಯ ಅಸ್ಥಿರತೆ ಪಾಕಿಸ್ತಾನವನ್ನ ಅಪಾಯಕ್ಕೆ ದೂಡಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ವಿನಾಶ ಖಚಿತ. ಚುನಾವಣೆ ನಡೆಸಿ ರಾಜಕೀಯ ಅನಿಶ್ಚಿತತೆ ಹೋಗಲಾಡಿಸದಿದ್ದರೆ ದೇಶ ವಿಭಜನೆಯ ಹಾದಿ ಹಿಡಿಯಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾ ಪಡೆ ಹಾರಿಸಿದ 18 ಕ್ಷಿಪಣಿಗಳನ್ನು ಉಡೀಸ್ ಮಾಡಿದ ಉಕ್ರೇನ್
Advertisement
Advertisement
ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾದೇಶ) ಸೃಷ್ಟಿಯಾದಂತೆ ಮತ್ತೊಂದು ಪಾಕಿಸ್ತಾನ ಉದಯವಾಗಬಹುದು. ಪ್ರಸ್ತುತ ಎದುರಾಗಿರುವ ಎಲ್ಲಾ ಸಮಸ್ಯೆಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸುವುದೊಂದೇ ಪರಿಹಾರ ಎಂದಿದ್ದಾರೆ. ಇದನ್ನೂ ಓದಿ: ಹೆಚ್ಚು ಮಕ್ಕಳನ್ನ ಹೆರಲು ಚೀನಾ ಪ್ರೋತ್ಸಾಹ – 20ಕ್ಕೂ ಹೆಚ್ಚು ನಗರಗಳಲ್ಲಿ ಹೊಸ ಯೋಜನೆ ಜಾರಿಗೆ ಪ್ಲ್ಯಾನ್
Advertisement
Advertisement
ಹಾಗಾಗಿ, ಆಡಳಿತಾರೂಢ ಸರ್ಕಾರ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ನಾಶಪಡಿಸುತ್ತಿದೆ. ಅಧಿಕಾರದಲ್ಲಿರುವ ನಾಯಕರು ಲೂಟಿ ಮಾಡಿದ ಸಂಪತ್ತನ್ನು ರಕ್ಷಿಸಿಕೊಳ್ಳುವ ಮಾರ್ಗ ಹುಡುಕುತ್ತಿದ್ದಾರೆ. ರಾಜಕೀಯ ಎದುರಾಳಿಗಳ ವಿರುದ್ಧ ಸೇನೆಯನ್ನ ಛೂ ಬಿಡುವ ಮೂಲಕ ಅದಕ್ಕೂ ಕೆಟ್ಟ ಹೆಸರು ತಂದಿದ್ದಾರೆ ಎಂದು ಆರೋಪಿಸಿದ್ದಾರೆ.