– ಆರೋಪಿಗಳು ಅರೆಸ್ಟ್
ಹಾವೇರಿ: ಪ್ರಿಯಕರನೊಂದಿಗೆ ಅನೈತಿಕ ಸಂಬಂಧ (Immoral relationship) ಹೊಂದಿದ್ದ ಪತ್ನಿ ತನ್ನ ಗಂಡನ ಪ್ರಾಣವನ್ನೇ ತೆಗೆದ ಘಟನೆ ಹಾವೇರಿ (Haveri) ಜಿಲ್ಲೆ ಹಿರೆಕೆರೂರು (Hirekerur) ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ನಡೆದಿದೆ.
ಸಾಧಿಕ್ ಮತ್ತೂರ್ (30) ಕೊಲೆಯಾದ ಪತಿ. ಚಿಕ್ಕೇರೂರು ಗ್ರಾಮದ ಸಾಧಿಕ್ ಮತ್ತೂರು ಜೀವನೋಪಾಯಕ್ಕಾಗಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಸಾಧಿಕ್ ನಾಲ್ಕು ವರ್ಷದ ಹಿಂದೆ ಸಲ್ಮಾ ಎಂಬ ಸ್ವಗ್ರಾಮದ ಯುವತಿಯನ್ನೇ ಮದುವೆಯಾಗಿದ್ದ. ಪ್ರಾರಂಭದಲ್ಲಿ ಅನೋನ್ಯವಾಗಿದ್ದ ದಂಪತಿ ನಡುವೆ ಕೌಟುಂಬಿಕ ಕಲಹ ಪ್ರಾರಂಭವಾಗಿತ್ತು. ಆ ಕೌಟುಂಬಿಕ ಕಲಹದ ಹಿಂದೆ ಇದ್ದಿದ್ದು ಅನೈತಿಕ ಸಂಬಂಧ. ಸಲ್ಮಾ, ಜಾಫರ್ ಎಂಬ 28 ವರ್ಷದ ಯುವಕನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಇಬ್ಬರು ಸೇರಿ ಗಂಡನನ್ನು ಕೊಲೆ ಮಾಡಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಕನ್ನಡದಲ್ಲೇ ರೈಲ್ವೆ ಪರೀಕ್ಷೆ: ಸೋಮಣ್ಣ ಘೋಷಣೆ
ಸಾಧಿಕ್‌ನನ್ನು ಮದುವೆ ಆಗುವ ಮೊದಲೇ ಜಾಫರ್ ಹಾಗೂ ಸಲ್ಮಾ ನಡುವೆ ಪ್ರೇಮ ಕಹಾನಿ ನಡೆದಿತ್ತಂತೆ. ಆದರೆ ಅದನ್ನು ಗುಟ್ಟಾಗಿಯೇ ಇಟ್ಟಿದ್ದ ಸಲ್ಮಾ ಮದುವೆ ಆದ ಬಳಿಕವೂ ಪ್ರಿಯಕರ ಜಾಫರ್ ಜೊತೆ ಸರಸ ಸಲ್ಲಾಪ ನಡೆಸಿದ್ದಳು. ಹೆಂಡತಿಯ ಕಾಮಪುರಾಣ ಗೊತ್ತಾಗಿ ಪತಿ ಸಾಧಿಕ್ ಎಚ್ಚರಿಕೆ ನೀಡಿದ್ದ. ನೀವೇನಾದರೂ ಈ ಸಂಬಂಧ ಮುಂದುವರಿಸಿದರೆ ನಿಮ್ಮಿಬ್ಬರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮನನೊಂದು ಎಚ್ಚರಿಕೆ ಕೂಡಾ ನೀಡಿದ್ದ. ಹೆಂಡತಿ ಬಳಿ ಇದ್ದ ಮೊಬೈಲ್ ಕೂಡಾ ಕಸಿದುಕೊಂಡಿದ್ದ. ಇದನ್ನೂ ಓದಿ: ಇಸ್ರೇಲ್ ದಾಳಿಗೆ ಹಿಜ್ಬುಲ್ಲಾ ಭದ್ರಕೋಟೆಯೇ ಛಿದ್ರ – ತುರ್ತು ಸಭೆಗೆ ವಿಶ್ವಸಂಸ್ಥೆ ತಯಾರಿ
ಇಬ್ಬರ ಹೆಸರು ಬರೆದಿಟ್ಟು ಸತ್ತರೆ ನಾವು ಜೈಲುಪಾಲಾಗಬಹುದು ಎಂದು ಯೋಚಿಸಿ ಸಲ್ಮಾ ಪ್ರಿಯಕರನ ಜೊತೆ ಸೇರಿ ಗಂಡನ ಸಾವಿಗೆ ಮುಹೂರ್ತ ಫಿಕ್ಸ್ ಮಾಡಿದ್ದಳು. ಇದೀಗ ಪೊಲೀಸ್ ತನಿಖೆಯ ಬಳಿಕ ಪತ್ನಿ ಹಾಗೂ ಪ್ರಿಯಕರ ಜೈಲು ಪಾಲಾಗಿದ್ದಾರೆ. ಹಂಸಭಾವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಆರ್.ಅಶೋಕ್ ವಿರುದ್ಧ ಸಚಿವ ಪರಮೇಶ್ವರ್ ನೂರಾರು ಕೋಟಿ ಭೂ ಹಗರಣ ಬಾಂಬ್