ಇಸ್ಲಾಮಾಬಾದ್: ಪಾಕಿಸ್ತಾನದ ಆರ್ಥಿಕ ಸ್ಥಿತಿ (Pakistan Economy) ದಿನಕಳೆದಂತೆ ದಯನೀಯವಾಗುತ್ತಿದ್ದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಭಾರೀ ಪ್ರಮಾಣದಲ್ಲಿ ವಿದ್ಯುತ್ ದರ (Electricity Tariff) ಏರಿಸುವಂತೆ ಸೂಚನೆ ನೀಡಿದೆ.
ಮಂಗಳವಾರದಿಂದ ಪಾಕ್ (Pakistan) ಪ್ರವಾಸದಲ್ಲಿದ್ದ ಐಎಂಎಫ್ ತಂಡ, ಪಾಕ್ ಸರ್ಕಾರದ ಸಾಲ ನಿರ್ವಹಣೆ ಯೋಜನೆಯನ್ನು(CDMP)ತಿರಸ್ಕರಿಸಿದೆ. ಅಲ್ಲದೇ ಪ್ರತಿ ಯೂನಿಟ್ ವಿದ್ಯುತ್ ದರವನ್ನು 11-12.50 ಪಾಕಿಸ್ತಾನ ರೂಪಾಯಿ ಮಿತಿಯಲ್ಲಿ ವಿದ್ಯುತ್ ದರವನ್ನು ಹೆಚ್ಚಿಸುವಂತೆ ಸಲಹೆ ನೀಡಿದೆ.
Advertisement
Advertisement
ವಿದ್ಯುತ್ ದರ ಏರದ ಹೊರತು ಹೊಸ ಸಾಲ ನೀಡದಿರುವ ತೀರ್ಮಾನಕ್ಕೆ ಬಂದಿದೆ. ಐಎಂಫ್ ನಿರ್ಧಾರದಿಂದ ಪಾಕಿಸ್ತಾನ ಇನ್ನಷ್ಟು ಶೋಚನೀಯ ಸ್ಥಿತಿ ತಲುಪಿದೆ. ರೂಪಾಯಿ ಮೌಲ್ಯ ಪತನ, ಅಂಕೆ ಮೀರಿದ ಹಣದುಬ್ಬರದಂತಹ ಕಾರಣಗಳಿಂದಾಗಿ ಪಾಕ್ ತೀವ್ರ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಇದನ್ನೂ ಓದಿ: ಪ್ರಾರ್ಥನೆ ಮಾಡುವಾಗ ಭಾರತದಲ್ಲೂ ಕೊಂದಿಲ್ಲ.. ಆದ್ರೆ ಪಾಕಿಸ್ತಾನದಲ್ಲಿ ಆಗಿದೆ: ಮಸೀದಿ ದಾಳಿ ಬಗ್ಗೆ ಪಾಕ್ ಸಚಿವ ಹೇಳಿಕೆ
Advertisement
ಐಎಂಫ್ ಪಾಕಿಸ್ತಾನ ಕಳೆದ ಹಣಕಾಸು ವರ್ಷದಲ್ಲೇ ಪ್ರತಿ ಯೂನಿಟ್ ವಿದ್ಯುತ್ ದರವನ್ನು 7.91 ಪಾಕಿಸ್ತಾನ ರೂಪಾಯಿಗೆ ಏರಿಸುವಂತೆ ಸೂಚನೆ ನೀಡಿತ್ತು. ಆದರೆ ಕಳೆದ ಜುಲೈ 1 ರಿಂದ ಇದು ಜಾರಿಗೆ ಬಂದಿತ್ತು. ಕಳೆದ 7 ದಶಕಗಳಿಂದ ಪಾಕ್ ಆಕ್ರಮಿತ ಕಾಶ್ಮೀರಲ್ಲಿ (PoK) ವಿದ್ಯುತ್ ಸಬ್ಸಿಡಿ ನೀಡಲಾಗುತ್ತಿತ್ತು. ಫೆ.1 ರಿಂದ ಈ ಸಬ್ಸಿಡಿಯನ್ನು ಪಾಕ್ ಸ್ಥಗಿತಗೊಳಿಸಿದೆ. ಈಗ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿ ಯೂನಿಟ್‌ಗೆ 16-22 ಪಾಕ್ ರೂಪಾಯಿ ನಿಗದಿ ಪಡಿಸಲಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದ ಆಡಳಿತ ಈ ನಿರ್ಧಾರವನ್ನು ವಿರೋಧಿಸಿದ್ದು ಜನತೆ ಪ್ರತಿಭಟನೆಗೆ ಇಳಿದಿದ್ದಾರೆ.
Advertisement
ಪಾಕಿಸ್ತಾನದ ವಿದೇಶಿ ಮೀಸಲು ನಿಧಿ 3.2 ಶತಕೋಟಿ ಡಾಲರ್‌ಗೆ ಕುಸಿದಿದ್ದು, ಸುಮಾರು ಮೂರು ವಾರಗಳ ಆಮದಿಗೆ ಮಾತ್ರ ಸಾಕಾಗುತ್ತದೆ. ಇದರಿಂದ ತೈಲ ಖರೀದಿ ಇನ್ಮುಂದೆ ಕಷ್ಟವಾಗಲಿದ್ದು, ಈಗಾಗಲೇ ಗಾರ್ಮೆಂಟ್ಸ್ ಫ್ಯಾಕ್ಟರಿಗಳೆಲ್ಲಾ ಬಹುತೇಕ ಮುಚ್ಚಿವೆ.
ದಿನಗೂಲಿ ಕೂಡ ಸಿಗದೇ ಬಡವರು ತತ್ತರಿಸಿದ್ದಾರೆ. ಪಾಕಿಸ್ತಾನದಲ್ಲೀಗ ಭಿಕ್ಷುಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು ಒಂದು ರೀತಿಯಲ್ಲಿ ದಿವಾಳಿ ಹಂತ ತಲುಪಿದೆ. ಲಂಕಾದಲ್ಲಿ ಇತ್ತೀಚಿಗೆ ಕಂಡು ಬಂದ ಪರಿಸ್ಥಿತಿಗಳು ಇಲ್ಲೂ ಕಾಣುವ ದಿನಗಳು ದೂರವಿಲ್ಲ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k