ಬೆಂಗಳೂರು: ಕರಾವಳಿಯಲ್ಲಿ ಇಂದಿನಿಂದ ಗರಿಷ್ಠ ಉಷ್ಣಾಂಶ 2 ಡಿಗ್ರಿ ಸೆಲ್ಸಿಯಸ್‍ನಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ (Weather Bureau) ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ನೀಡಿದ್ದ ಬಿಸಿ ಗಾಳಿ ಎಚ್ಚರಿಕೆಯನ್ನು ಇಲಾಖೆ ಹಿಂಪಡೆದಿದೆ.
ಕರಾವಳಿಯಲ್ಲಿ (Coastal Area) ಉಷ್ಣ ಅಲೆಯ ಪ್ರಭಾವ ಕಳೆದ ಎರಡು ದಿನದಿಂದ ಕಾಣಿಸಿಕೊಂಡಿತ್ತು. ಸಾಮಾನ್ಯವಾಗಿ ಉಂಟಾಗುವ ಹೀಟ್ ವೇವ್ (Heatwave) ಆಗಿರದೆ, ತಾಪಮಾನದ ದಿಢೀರ್ ಏರಿಕೆಯ ಪರಿಣಾಮ ಎಂದು ಇಲಾಖೆ ಎಚ್ಚರಿಸಿತ್ತು. ಇದನ್ನೂ ಓದಿ: ಡೋಲು ಬಡಿಯುತ್ತ ಪಬ್ ಮೇಲೆ ದಾಳಿ- ಸಂಘಟನೆ ಕಾರ್ಯಕರ್ತರು ವಶಕ್ಕೆ
Advertisement
Advertisement
Advertisement
ಸಾಮಾನ್ಯವಾಗಿ ಏಪ್ರಿಲ್ -ಮೇ ತಿಂಗಳಲ್ಲಿ ಉಷ್ಣ ಅಲೆಯ ಪ್ರಮಾಣ ಹೆಚ್ಚಾಗಿ ತಾಪಮಾನ ಏರಿಕೆ ಕಾರಣವಾಗುತ್ತಿತ್ತು. ಕಳೆದ ಎರಡು ದಿನಗಳಿಂದ ಕರಾವಳಿ ಭಾಗದಲ್ಲಿ ಒಂದು ತಿಂಗಳ ಮುಂಚೆಯೇ ಆ ವಾತಾವರಣ ಉಂಟಾಗಿ ಇಲಾಖೆ ಉಷ್ಣ ಅಲೆಯ ಅಲರ್ಟ್ ನೀಡಿತ್ತು. ಆದರೆ ಉಷ್ಣಾಂಶ ಎರಡು ದಿನಗಳಿಗೆ ಸೀಮಿತಗೊಂಡು ಕಡಿಮೆಯಾಗಿದ್ದು ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
Advertisement
ಉಷ್ಣ ಅಲೆಯ ಪರಿಣಾಮ ಶನಿವಾರ ಉಷ್ಣತೆಯ ಅನುಭವ ಹೆಚ್ಚಾಗಿತ್ತು. ಮಂಗಳೂರಿನಲ್ಲಿ (Mangaluru) ಗರಿಷ್ಠ ತಾಪಮಾನ 36.6 ಡಿಗ್ರಿ ಸೆಲ್ಸಿಯಸ್ ದಾಖಲಾದರೆ, ಕನಿಷ್ಠ 20.8 ಡಿಗ್ರಿ ಸೆಲ್ಸಿಯಸ್ (Celsius) ದಾಖಲಾಗಿದೆ. ಇದನ್ನೂ ಓದಿ: ಕೊರೋನಾ ಬಳಿಕ ದೇಶದಲ್ಲಿ ಫ್ಲೂ ಭೀತಿ- ಚಿಕಿತ್ಸೆ ಹೇಗೆ? ಏನು ಮಾಡಬೇಕು? ಏನು ಮಾಡಬಾರದು?