ಜೈ ಶ್ರೀರಾಮ್ ಎನ್ನದ್ದಕ್ಕೆ ಥಳಿಸಿ, ಗಡ್ಡ ಕತ್ತರಿಸಿದ್ರು

Public TV
2 Min Read
CRIME

ಮುಂಬೈ: ಜೈ ಶ್ರೀರಾಮ್ (Jai Shri Ram) ಎಂದು ಕೂಗಲು ನಿರಾಕರಿಸಿದ್ದಕ್ಕೆ ಅಪರಿಚಿತ ವ್ಯಕ್ತಿಗಳು ಮಸೀದಿಯೊಂದರ (Mosque) ಇಮಾಮ್‌ನನ್ನು (Imam) ಥಳಿಸಿ, ಅವರ ಗಡ್ಡ ಕತ್ತರಿಸಿರುವ ಅಮಾನುಷ ಕೃತ್ಯ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ.

ಮಹಾರಾಷ್ಟ್ರದ ಅನ್ವಾ ಗ್ರಾಮದ ಮಸೀದಿಯಲ್ಲಿ ಇಮಾಮ್ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿದ್ದಾರೆ. ಭಾನುವಾರ ಸಂಜೆ 7:30ರ ವೇಳೆಗೆ ಮಸೀದಿಯೊಳಗೆ ಕುರಾನ್ ಓದುತ್ತಿದ್ದ ವೇಳೆ ಬಂದ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ ಎಂದು ಇಮಾಮ್ ಜಾಕಿರ್ ಸೈಯದ್ ಖಾಜಾ ತಿಳಿಸಿದ್ದಾರೆ.

CRIME

ಅಪರಿಚಿತ ವ್ಯಕ್ತಿಗಳು ಮುಖಕ್ಕೆ ಬಟ್ಟೆ ಸುತ್ತಿಕೊಂಡು, ಮಸೀದಿಯನ್ನು ಪ್ರವೇಶಿಸಿದ್ದಾರೆ. ಇಮಾಮ್ ಕುರಾನ್ ಓದುತ್ತಿದ್ದ ವೇಳೆ ಅಪರಿಚಿತರು ಜೈ ಶ್ರೀರಾಮ್ ಎನ್ನಲು ಒತ್ತಾಯಿಸಿದ್ದಾರೆ. ಇಮಾಮ್ ಜೈ ಶ್ರೀರಾಮ್ ಎನ್ನಲು ನಿರಾಕರಿಸಿದಾಗ ಮೂವರು ವ್ಯಕ್ತಿಗಳು ಅವರನ್ನು ಮಸೀದಿಯ ಹೊರಗೆ ಎಳೆದುಕೊಂಡು ಹೋಗಿ, ಥಳಿಸಿದ್ದಾರೆ. ರಾಸಾಯನಿಕ ಲೇಪಿತ ಬಟ್ಟೆಯನ್ನು ಬಳಸಿ ಅವರನ್ನು ಪ್ರಜ್ಞಾಹೀನರನ್ನಾಗಿ ಮಾಡಿದ್ದಾರೆ. ತಮಗೆ ಪ್ರಜ್ಞೆ ಬಂದಾಗ ಕಿಡಿಗೇಡಿಗಳು ಗಡ್ಡ ಕತ್ತರಿಸಿರುವುದು ತಿಳಿದುಬಂದಿರುವುದಾಗಿ ಅವರು ಹೇಳಿದ್ದಾರೆ. ಇದನ್ನೂ ಓದಿ: ಸಾವರ್ಕರ್ ಬ್ರಿಟಿಷರಲ್ಲಿ ಕ್ಷಮೆಯಾಚಿಸಿದ್ದಾರೆ ಎಂಬುದನ್ನು ಸಾಬೀತುಪಡಿಸಲಿ: ರಾಗಾಗೆ ಸಾವರ್ಕರ್ ಮೊಮ್ಮಗ ಸವಾಲು

ರಾತ್ರಿ 8 ಗಂಟೆ ವೇಳೆಗೆ ಜನರು ಪ್ರಾರ್ಥನೆಗೆ ಮಸೀದಿಗೆ ಬಂದಾಗ ಇಮಾಮ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವುದನ್ನು ನೋಡಿದ್ದಾರೆ. ಬಳಿಕ ಅವರನ್ನು ಸಿಲ್ಲೋಡ್‌ನ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ಅವರನ್ನು ಔರಂಗಾಬಾದ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರು ಈಗ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

police jeep 1

ಘಟನೆ ಬಳಕಿಗೆ ಬಂದ ಬಳಿಕ ಪೊಲೀಸರು ಮಸೀದಿ ಇರುವ ಅನ್ವರ್ ಗ್ರಾಮಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಭೋಕರ್ದನ್ ಪರಧ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 452 (ಯೋಜಿತ ಹಲ್ಲೆ), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವ ಶಿಕ್ಷೆ), ಮತ್ತು 34 (ಸಾಮಾನ್ಯ ಉದ್ದೇಶಕ್ಕೆ ಹಲವು ವ್ಯಕ್ತಿಗಳಿಂದ ಅಪರಾಧ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಘಟನೆ ಹಿನ್ನೆಲೆ ಗ್ರಾಮದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಸ್ಥಳದಲ್ಲಿ ಶಾಂತಿ ಕಾಪಾಡಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಯುಟ್ಯೂಬ್ ಇಲ್ಲ, ಯೋಗ ಶಿಕ್ಷಕರಿಲ್ಲ, ಆದ್ರೂ ಸೂರ್ಯ ನಮಸ್ಕಾರ ಮಾಡಿದ ಚಿರತೆ

Share This Article