ಯಕ್ಷಗಾನದ (Yakshagana) ಬಣ್ಣ ವೇಷ, ಕುಣಿತ ಮಾತಿನಲ್ಲಿ ಅದ್ಭುತವಾದ ಶಕ್ತಿಯಿದೆ. ಪದ್ಯ ಕುಣಿತ ಕಥೆ ವೈಭವದ ವೇಷಭೂಷಣ ಇರುವ ಕಲೆ ಮತ್ತೊಂದಿಲ್ಲ ಎಂದು ಯಕ್ಷಗಾನವನ್ನು ನಟ ರಮೇಶ್ ಅರವಿಂದ್ (Ramesh Aravind) ಗುಣಗಾನ ಮಾಡಿದ್ದಾರೆ. ಯಕ್ಷಗಾನದ ಮೇಕಪ್ ಮಾಡುತ್ತಾ ನನಗೊಂದು ಬಹಳ ದಿವ್ಯವಾದ ಅನುಭವವಾಯ್ತು. ಮನಸ್ಸಲ್ಲಿ ಸುಂದರ ಭಾವನೆ ಮೂಡಿ ಬಂತು. ವೇಷ ತೊಟ್ಟ ಮೇಲಂತೂ ಬಹಳ ಪವರ್ ಫುಲ್ ಫೀಲ್ ಆಯ್ತು ಎಂದು ಯಕ್ಷಗಾನದ ಫೋಟೋಗಳು ಅವರ ಕೈಸೇರಿದ ಕೂಡಲೇ, ಅಭಿಪ್ರಾಯಪಟ್ಟಿದ್ದಾರೆ.
Advertisement
ವೇದಿಕೆಯಲ್ಲಿ ಯಕ್ಷಗಾನ ನೋಡುತ್ತಾ, ಯಾಕೆ ಕಲಾವಿದರು ಇಷ್ಟು ಪವರ್ ಫುಲ್ ಆಗಿ ಕುಣಿಯುತ್ತಾರೆ ಎಂದು ನನಗೆ ನಾನೇ ಪ್ರಶ್ನೆಯನ್ನು ಕೇಳಿಕೊಂಡಿದ್ದೆ. ವೇಷ ತೊಟ್ಟು ಕುಣಿಯುತ್ತಿರುವಾಗ ಅದರಲ್ಲಿ ಆಗುವ ಆನಂದ ಖುಷಿ ಏನು ಎಂಬುದು ಸ್ವತಃ ನನಗೆ ಅರಿವಾಯಿತು. ವೇಷ ಕಟ್ಟುವಾಗ 42 ಗಂಟುಗಳನ್ನು ಹಾಕುವುದಾಗಿ ಕಲಾವಿದರು ಹೇಳಿದರು. ಅವರೇ ಅದರ ಮಹತ್ವ ಏನು ಎಂದು ತಿಳಿಸಿಕೊಟ್ಟಿದ್ದಾರೆ. ಕಟ್ಟುಗಳು ವೇಷದ ಸಮತೋಲನ ಕಾಪಾಡುತ್ತದೆ. ಯಕ್ಷಗಾನದ ಎಲ್ಲಾ ಕಲಾವಿದರಿಗೆ ನನ್ನದು ದೊಡ್ಡ ನಮಸ್ಕಾರ. ಇದನ್ನೂ ಓದಿ:ಮತ್ತೆ ಬೋಲ್ಡ್ ಲುಕ್‌ನಲ್ಲಿ ಮಿಂಚಿದ ಗೋಲ್ಡನ್ ಗರ್ಲ್ ರಶ್ಮಿಕಾ ಮಂದಣ್ಣ
Advertisement
Advertisement
ಯಕ್ಷಗಾನ ಕ್ಷೇತ್ರಕ್ಕೆ ಡಾ. ಶಿವರಾಮ ಕಾರಂತರು (Shivaram Karanth) ಕೊಟ್ಟ ಕೊಡುಗೆಗಳ ಬಗ್ಗೆ ನಾನು ಕಲಾವಿದರಿಂದ ವಿಮರ್ಶಕರಿಂದ ಕೇಳಿದ್ದೇನೆ. ಕಾರಂತರು ಯಕ್ಷಗಾನಕ್ಕೆ ಗೆಜ್ಜೆ ಕಟ್ಟಿದ್ದ ಫೋಟೋವನ್ನು ನಾನು ನೋಡಿದ್ದೆ. ನಾನು ಯಕ್ಷಗಾನ ವೇಷ ತೊಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆಧುನಿಕ ಛಾಯಾಗ್ರಹಕ ಫೋಕಸ್ ರಾಘು (Focus Raghu) ಅವರ ಸಲಹೆಯಂತೆ ನಾನು ವೇಷ ತೊಟ್ಟಿದ್ದೇನೆ ಬಹಳ ಖುಷಿಯಾಗುತ್ತಿದೆ.
Advertisement
ಯಕ್ಷಗಾನ ಎಂಬುದು ಒಂದು ಅದ್ಭುತವಾದ ಕಲೆ. ಒಂದು ಜಿಲ್ಲೆ ಅಥವಾ ಒಂದು ಭಾಗಕ್ಕೆ ಸೀಮಿತವಾಗಿ ಇರುವ ಕಲೆಯಲ್ಲ. ಇಡೀ ದೇಶ ವಿಶ್ವದಲ್ಲಿ ಬಣ್ಣಗಾರಿಕೆ , ವೇಷ ಭಾಗವತರ ಪದ್ಯ ಮಾತು ಹೀಗೆ ಇಡೀ ಯಕ್ಷಗಾನ ಕ್ಷೇತ್ರಕ್ಕೆ ನನ್ನ ಸಾಷ್ಟಾಂಗ ನಮನಗಳನ್ನು ಸಲ್ಲಿಸುತ್ತೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ.