ಬೆಳಗಾವಿ: ಮಹರಾಷ್ಟ್ರದ ಶಿರೋಳ ತಾಲೂಕಿನ ರಾಜಾಪುರ ಬ್ಯಾರೇಜ್‍ಗೆ ಸಚಿವ ಡಿ.ಕೆ ಶಿವಕುಮಾರ್ ಇಂದು ಭೇಟಿ ನೀಡಿದ್ದರು. ಈ ವೇಳೆ ಕೃಷ್ಣಾ ನದಿ ಬತ್ತಿ ಹೋದಾಗ ತಾವು ವಿದೇಶ ಪ್ರವಾಸಕ್ಕೆ ಹೋಗಿದ್ದೀರಿ. ಈಗ ಕೃಷ್ಣಾ ನದಿಗೆ ನೀರು ಬಂದ ಮೇಲೆ ಭೇಟಿ ಮಾಡುತ್ತಿದ್ದೀರಾ ಎಂಬ ಪ್ರಶ್ನೆಗೆ ಸಚಿವರು ಗರಂ ಆಗಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದ ವೇಳೆ ಪತ್ರಕರ್ತರ ಪ್ರಶ್ನೆಗೆ ಡಿಕೆಶಿ ಸಿಟ್ಟಿಗೆದ್ದರು. ನಿನ್ನ ವಯಸ್ಸೆಷ್ಟು ಎಂದು ಮರು ಪ್ರಶ್ನೆ ಮಾಡಿದರು. ಅಲ್ಲದೆ ಯಾವ ಸಚಿವರು ಇಲ್ಲಿಯವರೆಗೆ ಇಲ್ಲಿ ಬಂದಿಲ್ಲ. ನಾನೇ ಮೊದಲು ಇಲ್ಲಿಗೆ ಬಂದು ವಿಸಿಟ್ ಮಾಡಿದ್ದೇನೆ. ಇಲ್ಲಿಯವರೆಗೆ ಯಾವುದಾದರೂ ಇರಿಗೆಷನ್ ಮಿನಿಸ್ಟರ್ ವಿಸಿಟ್ ಮಾಡಿದ್ದಾರಾ? ನಾನು ಪ್ರಯತ್ನ ಮಾಡಿದಷ್ಟು ಬೇರೆ ಯಾರು ಮಾಡಿಲ್ಲ. ನನಗೆ ಯಾವುದೇ ಸ್ಟಾರ್ ಬೇಡ. ನನ್ನ ಡ್ಯೂಟಿ ನಾನು ಮಾಡುತ್ತೇನೆ ಎಂದ ಕಿಡಿಕಾರಿದರು.
ನಾನು ಇಲ್ಲಿ ಬರದಿದ್ದರು ಅಧಿಕಾರಿಗಳ ಬಳಿ ಮಾಹಿತಿ ಪಡೆದಿದ್ದೇನೆ. ಮಹಾರಾಷ್ಟ್ರ ಸಿಎಂ ಹತ್ತಿರ ಫೋನಿನಲ್ಲಿ ಮಾತನಾಡಿದ್ದೇನೆ. ನಾನು ಕಣ್ಣಾರೆ ನೋಡಿದ ನಂತರವೇ ಕೆಲಸ ಮಾಡುವುದು. ನನ್ನ ಅಪ್ತರಾದ ಎಸ್.ಎಂ.ಕೃಷ್ಣ ಅವರ ಸಹೋದರ ತೀರಿಕೊಂಡರು ಅಲ್ಲಿಗೆ ಹೋಗದೇ ಇಲ್ಲಿಗೆ ಬಂದಿದ್ದೇನೆ. ಇಲ್ಲಿ ಸಮಯ ಕೊಟ್ಟಿದ್ದೇನೆ ಎಂದು ಬಂದಿದ್ದೇನೆ. ನನ್ನ ಡ್ಯೂಟಿ ನಾನು ಮಾಡುತ್ತೇನೆ. ರೈತರು ಬೈಯ್ದರು, ನೀವು ಬೈಯ್ದರು ನನ್ನ ಕೆಲಸ ನಾನು ಮಾಡುತ್ತೇನೆ ಎಂದು ಹೇಳಿದರು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]