ಸಿನಿಮಾಗಳಲ್ಲಿ ಬಾಲಿವುಡ್ ಹಾಡುಗಳಷ್ಟು ದಕ್ಷಿಣದ ಸಾಂಗ್ಸ್ ರೊಮ್ಯಾಂಟಿಕ್ ಆಗಿ ಇರುವುದಿಲ್ಲ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದ ಮಾತು ಭಾರೀ ಚರ್ಚೆಗೆ ಕಾರಣವಾಗಿತ್ತು. ದಕ್ಷಿಣದ ಸಿನಿಮಾಗಳಿಂದಲೇ ಬಾಲಿವುಡ್ ಗೆ ಪರಿಚಯವಾಗಿದ್ದ ರಶ್ಮಿಕಾ ಈ ರೀತಿ ಮಾತನಾಡಿದ್ದು, ಅವರ ಅಹಂಕಾರಕ್ಕೆ ಹಿಡಿದ ಕನ್ನಡಿ ಎಂದೇ ಹಲವರು ಪ್ರತಿಕ್ರಿಯಿಸಿದ್ದರು. ಸಾಕಷ್ಟು ಟ್ರೋಲ್ ಪೇಜ್ ಗಳು ಇದರ ಬಗ್ಗೆ ಬೆಳಕುವ ಚೆಲ್ಲುವ ಪ್ರಯತ್ನ ಮಾಡಿದ್ದವು. ಇದೀಗ ಆ ಮಾತಿಗೆ ಸ್ವತಃ ರಶ್ಮಿಕಾ ಸ್ಪಷ್ಟನೆ ನೀಡಿದ್ದಾರೆ.
Advertisement
ಮಾಧ್ಯಮವೊಂದರ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ರಶ್ಮಿಕಾ, ‘ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಅಥವಾ ನಾನು ಮಾತನಾಡುವುದನ್ನು ಕಲಿಯಬೇಕಿದೆ. ನಾನು ಏನೇ ಮಾತನಾಡಿದರೂ ಅದು ವಿವಾದವಾಗಿಯೇ ಬದಲಾಗುತ್ತದೆ. ರೊಮ್ಯಾಂಟಿಕ್ ಹಾಡುಗಳ ಕುರಿತಾಗಿ ನಾನು ಆ ರೀತಿಯಲ್ಲಿ ಮಾತನಾಡಿರಲಿಲ್ಲ. ದಕ್ಷಿಣದ ಹಾಡುಗಳು ರೊಮ್ಯಾಂಟಿಕ್ ಆಗಿಲ್ಲ ಅಂತ ಹೇಳುವುದಕ್ಕೆ ನಾನು ಮೂರ್ಖಳಲ್ಲ’ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ತೆರಿಗೆ ಇಲಾಖೆ ವಿರುದ್ದ ಹೈಕೋರ್ಟ್ ಮೆಟ್ಟಿಲು ಏರಿದ ನಟಿ ಅನುಷ್ಕಾ ಶರ್ಮಾ
Advertisement
Advertisement
ರಶ್ಮಿಕಾ ಆಡುತ್ತಿರುವ ಮಾತುಗಳೇ ಅವರಿಗೆ ಮುಳುವಾಗುತ್ತಿವೆ ಎನ್ನುವ ಅರಿವು ಈಗ ಬಂದಂತಿವೆ. ಹಾಗಾಗಿ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡುವೆ ಎಂದೂ ಅವರು ಹೇಳಿಕೊಂಡಿದ್ದಾರೆ. ಇಂಥದ್ದೇ ವಿಚಾರಕ್ಕಾಗಿ ಈ ಹಿಂದೆ ಇವರು, ಕಿಚ್ಚ ಸುದೀಪ್ ಅವರಿಂದ ಪಾಠ ಮಾಡಿಸಿಕೊಂಡಿದ್ದರು. ಸೆಲೆಬ್ರಿಟಿಗಳು ಆಗಿದ್ದವರು, ಹೇಗೆ ವರ್ತಿಸಬೇಕು ಎನ್ನುವ ಕುರಿತು ಕಿಚ್ಚ ಮೊನ್ನೆಯಷ್ಟೇ ಮಾತನಾಡಿದ್ದರು. ಈ ವಿಷಯ ಕೂಡ ರಶ್ಮಿಕಾ ಅವರಿಗೆ ತಲುಪಿದೆ. ಹಾಗಾಗಿಯೇ ಮಾತಿನ ಕುರಿತಾಗಿ ಅವರು ಪ್ರತಿಕ್ರಿಯಿಸಿದ್ದಾರೆ.
Advertisement
ಸದ್ಯ ರಶ್ಮಿಕಾ ಮಂದಣ್ಣ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. ಅವರ ಹಿಂದಿ ಸಿನಿಮಾವೊಂದು ಬಿಡುಗಡೆ ಸಿದ್ಧವಾಗಿದ್ದು, ಆ ಚಿತ್ರದ ಪ್ರಚಾರದಲ್ಲಿ ಅವರು ತೊಡಗಿದ್ದಾರೆ. ಕಳೆದ ಒಂದು ವಾರದಿಂದಲೂ ಅವರು ಮುಂಬೈನಲ್ಲೇ ಠಿಕಾಣಿ ಹೂಡಿದ್ದು, ಬಾಲಿವುಡ್ ನಲ್ಲಿ ಈ ಸಿನಿಮಾ ಅವರಿಗೊಂದು ನೆಲೆ ಕಲ್ಪಿಸಬಹುದು ಎನ್ನಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k