ಇಸ್ಲಾಮಬಾದ್: ಕಳೆದ ಕೆಲವು ದಿನಗಳಿಂದ ಪಾಕಿಸ್ತಾನದ (Pakistan) ವೇಗಿ ನಸೀಮ್ ಶಾ (Naseem Shah) ಅವರ ವಿಚಾರವಾಗಿ ಹರಿದಾಡಿದ್ದ ಆತಂಕದ ವರದಿಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಅವರು ಪಂದ್ಯದ ವೇಳೆ ಗಾಯಗೊಂಡಿದ್ದು ವಿಶ್ರಾಂತಿಯಲ್ಲಿದ್ದಾರೆ ಎಂಬ ವಿಚಾರ ಎಲ್ಲೆಡೆ ಹರಿದಾಡಿತ್ತು. ಅದಕ್ಕೆ ನಾನು ಸುಸ್ತಾಗಿದ್ದೇನೆ, ಗಾಯಗೊಂಡಿಲ್ಲ ಎಂದು ಕ್ರಿಕೆಟ್ ಅಭಿಮಾನಿಗಳ ಆತಂಕಕ್ಕೆ ತೆರೆ ಎಳೆದಿದ್ದಾರೆ.
ಇತ್ತೀಚಿನ ಲಂಕಾ ಪ್ರೀಮಿಯರ್ ಲೀಗ್‍ನಲ್ಲಿ ನಸೀಮ್ ಅನುಪಸ್ಥಿತಿಯ ನಂತರ ಊಹಾಪೋಹಗಳಿಗೆ ತೀವ್ರವಾಗಿ ಹರಿದಾಡಿದ್ದವು. ಇದು ವಿಶ್ವಕಪ್ (ODI World Cup) ಹೊತ್ತಿನಲ್ಲಿ ಕ್ರಿಕೆಟ್ ಅಭಿಮಾನಿಗಳ ಚಿಂತೆಯನ್ನು ಹೆಚ್ಚಿಸಿತ್ತು. ಭರವಸೆಯ ಯುವ ಬೌಲರ್ ನಿರ್ಗಮಿಸುವ ಮೊದಲು ನಡೆಯುತ್ತಿರುವ ಲಂಕಾ ಪ್ರೀಮಿಯರ್ ಲೀಗ್‍ನಲ್ಲಿ ಕೊಲಂಬೊ ಸ್ಟ್ರೈಕರ್‌ಗಳನ್ನು ಪ್ರತಿನಿಧಿಸುತ್ತಿದ್ದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ವಿರಾಟ್ – ಕಿಂಗ್ ಆದ ಕೊಹ್ಲಿಯ ರೋಚಕ ಜರ್ನಿ
Advertisement
Advertisement
ಸ್ಟ್ರೈಕರ್ಸ್ ಪರ ಆಡಿರುವ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಮುಂಬರುವ ಅಂತಾರಾಷ್ಟ್ರೀಯ ಪಂದ್ಯಗಳ ಗುರಿಯಾಗಿಸಿ ವಿಶ್ರಾಂತಿ ಪಡೆಯುವ ಪ್ರಾಮುಖ್ಯತೆಯನ್ನು ಬಾಬರ್ ಒತ್ತಿ ಹೇಳಿದರು. ನಾನು ಬ್ಯಾಕ್-ಟು-ಬ್ಯಾಕ್ ಪಂದ್ಯಗಳನ್ನು ಆಡುತ್ತಿದ್ದೆ ಮತ್ತು ವಿಶ್ರಾಂತಿ ಪಡೆಯಲು ಸಮಯವಿರಲಿಲ್ಲ. ಈಗ ವಿಶ್ರಾಂತಿಯಲ್ಲಿದ್ದೇನೆ ಎಂದಿದ್ದಾರೆ.
Advertisement
ನಸೀಮ್ ಏಳು ಪಂದ್ಯಗಳಲ್ಲಿ 10 ವಿಕೆಟ್‍ಗಳನ್ನು ಪಡೆಯುವ ಮೂಲಕ ಉತ್ತಮ ಬೌಲರ್ ಎಂಬ ಖ್ಯಾತಿಗಳಿಸಿದ್ದಾರೆ. ಶಾ ಎಲ್‍ಪಿಎಲ್ ವೇದಿಕೆಯಲ್ಲಿ ಪ್ರಮುಖ ಸಾಗರೋತ್ತರ ಆಟಗಾರರಲ್ಲಿ ಒಬ್ಬರಾಗಿ ತಮ್ಮ ಛಾಪು ಮೂಡಿಸಿದ್ದಾರೆ. ಗಾಲೆ ಟೈಟಾನ್ಸ್ ಪರ ಆಡುತ್ತಿರುವ ದಕ್ಷಿಣ ಆಫ್ರಿಕಾದ ತಬ್ರೈಜ್ ಶಮ್ಸಿ ನಂತರದ (8 ಪಂದ್ಯಗಳಲ್ಲಿ 12 ವಿಕೆಟ್) ಸ್ಥಾನದಲ್ಲಿ ನಸೀಮ್ ಇದ್ದಾರೆ.
Advertisement
ಏಷ್ಯಾಕಪ್‍ನಲ್ಲಿ (Asia Cup) ಪಾಕಿಸ್ತಾನ ಸೆ.2 ರಂದು ಸಾಂಪ್ರದಾಯಿಕ ಎದುರಾಳಿಯಾದ ಭಾರತದ (Team India) ವಿರುದ್ಧ ಆಡಲಿದೆ. ಅಲ್ಲದೇ ಅಕ್ಟೋಬರ್ 14 ರಂದು ಅಹಮದಾಬಾದ್‍ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‍ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಇದನ್ನೂ ಓದಿ: ಇಂದಿನಿಂದ IND vs IRE ಟಿ20 ಸರಣಿ ಆರಂಭ – 11 ತಿಂಗಳ ಬಳಿಕ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ ಬುಮ್ರಾ
Web Stories