ಇನ್ನೆರಡು ದಿನಗಳು ಉರುಳಿದರೆ ಬಿಗ್ ಬಾಸ್ ಮನೆಗೆ ಯಾರೆಲ್ಲ ಹೋಗಲಿದ್ದಾರೆ ಎಂದು ಗೊತ್ತಾಗುತ್ತದೆ. ಅಷ್ಟರಲ್ಲಿ ಹಲವಾರು ಹೆಸರುಗಳು ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವ ಲಿಸ್ಟ್ ನಲ್ಲಿ ಕಾಣಿಸಿಕೊಂಡವು. ಇದೀಗ ಒಬ್ಬೊಬ್ಬರೇ ತಾವು ದೊಡ್ಮನೆಗೆ ಕಾಲಿಡುತ್ತಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ಕನ್ನಡತಿ ಖ್ಯಾತಿಯ ನಟಿ ರಂಜನಿ ರಾಘವನ್ (Ranjani Raghavan) ಕೂಡ ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎಂದು ಸುದ್ದಿ ಆಗಿತ್ತು. ಅದನ್ನು ಅವರು ನಿರಾಕರಿಸಿದ್ದಾರೆ.
ನನಗೆ ಮಾಡುವುದಕ್ಕೆ ಬೇರೆ ಕೆಲಸಗಳಿವೆ. ನಾನೊಂದು ಕನಸಿನ ಯೋಜನೆಯನ್ನು ಬೆನ್ನತ್ತಿದ್ದೇನೆ. ಬಿಗ್ ಬಾಸ್ ಮನೆಗೆ ಹೋಗುತ್ತಿದ್ದೇನೆ ಎನ್ನುವುದು ಸುಳ್ಳು. ನಾನು ಹೋಗುತ್ತಿಲ್ಲ. ನನ್ನ ಕನಸಿಗೆ ನೀವು ಜೊತೆಯಾಗಿ. ಈ ಕುರಿತು ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದು ರಂಜನಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಮತ್ತೋರ್ವ ನಟಿ ಬಿಗ್ ಬಾಸ್ ಮನೆಗೆ ಹೋಗಲಾರೆ ಎನ್ನುವುದನ್ನು ತಿಳಿಸಿದ್ದಾರೆ.
ಈ ಬಾರಿಯ ಬಿಗ್ ಬಾಸ್ ವಿಶೇಷ ಏನು?
ಈ ಬಾರಿಯ ಬಿಗ್ ಬಾಸ್ (Bigg Boss Kannada) ಹತ್ತು ಹಲವು ಕಾರಣಗಳಿಂದಾಗಿ ವಿಶೇಷ ಅನಿಸಿದೆ. ಕಾರ್ಯಕ್ರಮವು ಹೇಗೆ ವಿಭಿನ್ನವಾಗಿ ರೂಪಿತವಾಗುತ್ತಿದೆಯೋ, ಹಾಗೆಯೇ ಬಿಗ್ ಬಾಸ್ ಮನೆ (Bigg Boss House) ಕೂಡ ಹೊಸ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹಲವು ವರ್ಷಗಳ ಕಾಲ ಬಿಗ್ ಬಾಸ್ ಮನೆಯನ್ನು ಇನೋವೆಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಾಣವಾಗುತ್ತಿತ್ತು. ವರ್ಷದಿಂದ ವರ್ಷಕ್ಕೆ ಸಣ್ಣ ಮಟ್ಟದಲ್ಲಿ ಬದಲಾವಣೆ ಮಾಡಿಕೊಂಡು ಕಾರ್ಯಕ್ರಮವನ್ನು ನಡೆಸಲಾಗುತ್ತಿತ್ತು. ಈ ವರ್ಷ ಎಲ್ಲವೂ ಬದಲಾಗಿದೆ.
ಈ ಬಾರಿ ಇನೋವೆಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್ ಬಾಸ್ ನಡೆಯುತ್ತಿಲ್ಲ. ಬದಲಾಗಿ ಬೆಂಗಳೂರಿನ ದೊಡ್ಡ ಆಲದ ಮರದ ಬಳಿ ಮನೆಯನ್ನು ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಇದು ಭಾರತದಲ್ಲೇ ಅತೀ ದೊಡ್ಡ ಬಿಗ್ ಬಾಸ್ ಮನೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ. ಕಲರ್ಸ್ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್ ಪ್ರಶಾಂತ್ ನಾಯಕ್ ಈ ವಿಷಯದ ಕುರಿತು ಮಾತನಾಡಿ, ವಿಸ್ತೀರ್ಣದ ವಿಷಯದಲ್ಲಿ ಇದು ದೊಡ್ಡ ಮನೆ ಎಂದರು.
ಕನ್ನಡದ ಬಿಗ್ ಬಾಸ್ ನಾನಾ ಕಾರಣಗಳಿಂದಾಗಿ ವಿಶೇಷ ಮತ್ತು ಹೊಸತು ಅನಿಸುತ್ತದೆ. ಇಂತಹ ಶೋ ಮೂಲಕ ಕಿಚ್ಚ ಸುದೀಪ್ (Sudeep)ದಾಖಲೆಯೊಂದನ್ನು ಬರೆದಿದ್ದಾರೆ. ಆ ದಾಖಲೆಯನ್ನು ಸ್ವತಃ ಕಲರ್ಸ್ ಕನ್ನಡ ವಾಹಿನಿಯೇ ಇಂದು ಬಹಿರಂಗ ಪಡಿಸಿದೆ. ಈ ಮೂಲಕ ಸುದೀಪ್ ವೃತ್ತಿ ಬದುಕಿಗೆ ಇದೊಂದು ಗೌರವದ ಸಂಗತಿಯೂ ಆಗಿದೆ.
ಭಾರತದಾದ್ಯಂತ ಬಿಗ್ ಬಾಸ್ ಶೋಗಳು ಆಯೋಜನೆಯಾಗಿವೆ. ಹಿಂದಿ, ತಮಿಳು, ತೆಲುಗು ಸೇರಿದಂತೆ ಹಲವು ಕಡೆ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತದೆ. ಈ ಎಲ್ಲ ಶೋಗಳಲ್ಲೂ ನಿರೂಪಕರು ಬದಲಾಗಿದ್ದಾರೆ. ಆದರೆ, ಮೊದಲ ಸೀಸನ್ ನಿಂದ ಈವರೆಗೂ ಕನ್ನಡದಲ್ಲಿ ನಿರೂಪಕರು ಬದಲಾಗಿಲ್ಲ. ಸುದೀಪ್ ಅವರೇ ಹತ್ತೂ ಸೀಸನ್ ಗಳನ್ನು ನಡೆಸಿಕೊಂಡು ಬಂದು ದಾಖಲೆ ಬರೆದಿದ್ದಾರೆ. ಇಂತಹ ದಾಖಲೆಯನ್ನು ಬೇರೆ ಯಾವ ಭಾಷೆಯಲ್ಲೂ ನಡೆದಿಲ್ಲ ಎನ್ನುವುದು ವಿಶೇಷ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]