ಕೊಪ್ಪಳ: ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ಚಿತ್ರೀಕರಣ ಮಾಡಿದ್ದಕ್ಕೆ ಕಲ್ಟ್ ಸಿನಿಮಾ (Cult Movie) ವಿರುದ್ಧ ಗಂಗಾವತಿ (Gangavathi Forest Area) ವಲಯ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಸಾಲಗಾರರ ಕಿರುಕುಳಕ್ಕೆ ಎದೆಗುಂದಿ ತಪ್ಪು ನಿರ್ಧಾರಕ್ಕೆ ಮುಂದಾಗಬೇಡಿ: ಉ.ಕನ್ನಡ ಎಸ್‌ಪಿ ಸಲಹೆ
ಜನವರಿ 31ರಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಜೈದ್ ಖಾನ್ ಹಾಗೂ ರಚಿತಾ ರಾಮ್ ನಟನೆಯ ಕಲ್ಟ್ ಚಿತ್ರ ತಂಡ ಗಂಗಾವತಿ ತಾಲೂಕಿನ, ಸಾಣಾಪುರ, ರಂಗಾಪುರ ಸೇರಿ ತುಂಗಭದ್ರಾ ದಡದಲ್ಲಿ ಚಿತ್ರೀಕರಣ ಮಾಡಿದ್ದರು. ತುಂಗಭದ್ರಾ ನೀರು ಸಂರಕ್ಷಿತ ಪ್ರದೇಶದಲ್ಲಿ ನಿಯಮ ಮೀರಿ ಚಿತ್ರೀಕರಣ ನಡೆಸಿದ್ದಕ್ಕೆ ದೂರು ದಾಖಲಾಗಿದೆ.
ಈ ಕುರಿತು ಅರಣ್ಯ ಅಧಿಕಾರಿಗಳ ಬಳಿ ಮಾಹಿತಿ ಕೇಳಿದಾಗ ನಿರಾಕರಿಸಿ, ಮಾಹಿತಿ ಬೇಕಾದರೆ ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಿಸುವಂತೆ ತಿಳಿಸಿದ್ದಾರೆ. ಇದೀಗ ಅಧಿಕಾರಿಗಳ ಮೇಲೆ ಸಚಿವ ಜಮೀರ್ ಅಹ್ಮದ್ ಒತ್ತಡ ಹೇರಿದ್ದಾರಾ ಎನ್ನುವ ಪ್ರಶ್ನೆ ಉದ್ಭವಿಸಿದೆ.ಇದನ್ನೂ ಓದಿ: ಕಾಂಗ್ರೆಸ್‌ನಿಂದ 50 ಕೋಟಿಗೂ ಅಧಿಕ ಮೌಲ್ಯದ ವಿವಾದಿತ ಜಾಗ ಕಬ್ಜಾ: ಬಿಜೆಪಿ ಆರೋಪ