ಬೀದರ್: ಯಾವುದೇ ಪರವಾನಿಗೆ ಇಲ್ಲದೇ ಭಾಲ್ಕಿ (Bhalki) ತಾಲೂಕಿನ ಹಲಸಿ ತೂಗಾಂವ್‌ನ ಮಾಂಜ್ರಾ ನದಿಯಲ್ಲಿ ಅಕ್ರಮ ಮರಳು ದಂಧೆಗೆ (Illegal Sand Mining) ಬಳಸುತ್ತಿದ್ದ ಬೋಟ್‌ಗೆ ಗಣಿ ಅಧಿಕಾರಿಗಳು ಬೆಂಕಿ ಹಾಕಿ ಶಾಕ್ ನೀಡಿದ್ದಾರೆ.
ಹಲವು ವರ್ಷಗಳಿಂದ ಕದ್ದು ಮುಚ್ಚಿ ಮಾಂಜ್ರಾ ನದಿಯಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿದೆ. ಅಕ್ರಮ ದಂಧೆಕೋರರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದರು. ಆದರೂ ಸಹ ಅಕ್ರಮ ಮರಳು ದಂಧೆ ಮುಂದುವರೆದಿತ್ತು.
Advertisement
ಇದೀಗ ಮರಳು ದಂಧೆಕೋರರು ಬಳಸುತ್ತಿದ್ದ ಬೋಟ್‌ಗೆ ಅಧಿಕಾರಿಗಳು ಬೆಂಕಿ ಹಾಕಿದ್ದು, ಲಕ್ಷಾಂತರ ರೂ. ಬೆಲೆಯ ಬೋಟ್‌ಗೆ ಬೆಂಕಿ ಹಚ್ಚಿದ್ದು, ಸಂಪೂರ್ಣವಾಗಿ ನಾಶವಾಗಿದೆ.
Advertisement
Advertisement
ಹಲವು ವರ್ಷಗಳಿಂದ ಅಕ್ರಮವಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿಯ ಮಾಂಜ್ರಾ ನದಿಯಲ್ಲಿ ಮರಳು ದಂಧೆ ನಡೆಯುತ್ತಿದೆ. ಈ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಮನವಿ ಮೇರೆಗೆ ಬಂದು ಮಾಂಜ್ರಾ ನದಿಯಲ್ಲಿ ಅಕ್ರಮವಾಗಿ ಬಿಟ್ಟಿದ್ದ ಬೋಟ್‌ಗೆ ಅಧಿಕಾರಿಗಳು ಬೆಂಕಿ ಹಾಕಿದ್ದಾರೆ.
Advertisement
ಕಾರ್ಯಾಚರಣೆ ವೇಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಧನರಾಜ್ ಹಾಗೂ ಸಿಬ್ಬಂದಿಗೆ ಸ್ಥಳೀಯ ತಹಶಿಲ್ದಾರ್ ಹಾಗೂ ಭಾಲ್ಕಿ ಗ್ರಾಮೀಣ ಪೋಲೀಸರು ಸಾಥ್ ನೀಡಿದ್ದರು.