ಬೆಂಗಳೂರು: ಮನೆ, ಕಟ್ಟಡ ಕಟ್ಟುವ ಮುನ್ನ ಎಚ್ಚವಾಗಿರಿ. ಏಕೆಂದರೆ ಎಗ್ಗಿಲ್ಲದೆ ಅಕ್ರಮವಾಗಿ ಫಿಲ್ಟರ್ ಮರಳು ದಂಧೆ ನಡೆಯುತ್ತಿದೆ. ಅಕ್ರಮವಾಗಿ ಫಿಲ್ಟರ್ ಮರಳು ದಂಧೆಯ ಮುಖವಾಡವನ್ನು ಪಬ್ಲಿಕ್ ಟಿವಿ ಬಯಲು ಮಾಡಿದೆ.
ಸಿಲಿಕಾನ್ ಸಿಟಿ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶ್ರೀನಿವಾಸಪುರದಲ್ಲಿ ಈ ಕರಾಳ ದಂಧೆ ತಲೆ ಎತ್ತಿದೆ. ಇಲ್ಲಿ ಪ್ರತಿ ನಿತ್ಯ ಈ ಅಡ್ಡೆಯಿಂದ ನೂರಾರು ಲಾರಿ ಲೋಡ್ ನಗರ ಸೇರುತ್ತಿದೆ. ಶ್ರೀನಿವಾಸಪುರ ಗ್ರಾಮದ ಕೆರೆಯಲ್ಲಿ ರಾತ್ರಿಯಾದರೆ ಸಾಕು 150ರಿಂದ 200 ಮಂದಿ ಫಿಲ್ಟರ್ ಮರಳು ಮಾಡುವ ಕರಾಳ ದಂಧೆಯಾಗಿದ್ದು, ಕೆರೆಯ ಒಡಲನ್ನು ಈ ಧಂದೆಕೋರರು ಸಂಪೂರ್ಣವಾಗಿ ಬಗೆಯುತ್ತಿದ್ದಾರೆ.
Advertisement
Advertisement
ಇಂತಹ ಕಳಪೆ ಈ ಫಿಲ್ಟರ್ ಮರಳಿಂದ ನಿಮ್ಮ ಮನೆ ಕಟ್ಟಡಗಳು ನೆಲಕಚ್ಚುವುದು ಖಚಿತ. ಇದನ್ನು ಕಂಡು ಕಾಣದಂತಿರುವ ನೆಲಮಂಗಲ ಪೊಲೀಸರ ನಡೆಗೆ ಅನುಮಾನ ಮೂಡಿಸುವಂತಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಈ ದಂಧೆ ನಡೆಯುತ್ತಿದ್ದು, ಪ್ರಶ್ನೆ ಮಾಡಿದ ಗ್ರಾಮಸ್ಥರಿಗೆ ಪೊಲೀಸರ ಭಯ ಬೇರೆ ಇದೆ ಎನ್ನಲಾಗಿದೆ.
Advertisement
ಖಡಕ್ ಪೊಲೀಸ್ ಆಫೀಸರ್ ಎಂಬ ಹೆಗ್ಗಳಿಕೆಗೆ ಪ್ರಶಂಸೆಯಾಗಿರುವ ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿ ಡಿ ಚನ್ನಣ್ಣನವರ್ ವ್ಯಾಪ್ತಿಯಲ್ಲಿ, ಈ ಫಿಲ್ಟರ್ ಮರಳು ದಂಧೆ ನಡೆಯುತ್ತಿದೆ. ಅಕ್ರಮಗಳಿಗೆ ಕಡಿವಾಣ ಹಾಕುವ ಪೊಲೀಸರ ನಡೆಗೆ ಸಾರ್ವಜನಿಕರ ವಲಯದಲ್ಲಿ ಬೇಸರಕ್ಕೆ ಕಾರಣವಾಗಿದೆ.