ತಾಯಿ ಮೇಲೆ ಪ್ರಿಯಕರ ಮಲಗಿದ್ದನ್ನ ಕಂಡ ಮಗ – ಅಪ್ಪನಿಗೆ ಹೇಳ್ತೀನಿ ಅಂದಿದ್ದೇ ತಪ್ಪಾಯ್ತು!

Public TV
3 Min Read
CNG MURDER copy

ಚಾಮರಾಜನಗರ: ತನ್ನ ಅಕ್ರಮ ಸಂಬಂಧದ ಬಗ್ಗೆ ಮಗನಿಗೆ ಗೊತ್ತಾಗುತ್ತಿದ್ದಂತೆ ತಾಯಿಯೊಬ್ಬಳು ಮಗನ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸಿಲ್ಕಲ್ ಪುರ ಗ್ರಾಮದಲ್ಲಿ ನಡೆದಿದೆ.

ಪ್ರೀತಂ (7) ತಾಯಿಯಿಂದ ಕೊಲೆಯಾದ ದುರ್ದೈವಿ. ಬಾಲಕನ ತಾಯಿ ಸಾಕಮ್ಮ(31) ಪ್ರಿಯಕರ ನಾಗರಾಜು ಜೊತೆ ಸೇರಿ ಮಗನನ್ನೇ ಕೊಂದಿದ್ದಾಳೆ. ಈ ಘಟನೆ ಅಕ್ಟೋಬರ್ 6 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

cng 4

“ಅಕ್ಟೋಬರ್ 5 ಶುಕ್ರವಾರ ರಾತ್ರಿ ಮನೆಯಲ್ಲಿ ನಾನು ಇರಲಿಲ್ಲ. ಮಲಗಿದ್ದ ಮಗ ಪ್ರೀತಂಗೆ ರಾತ್ರಿ 11 ಗಂಟೆಯ ವೇಳೆಗೆ ಎಚ್ಚರ ಆಗಿತ್ತು. ತನ್ನ ತಾಯಿ ಸಾಕಮ್ಮಳ ಮೇಲೆ ಪ್ರಿಯಕರ ನಾಗರಾಜು ಮಲಗಿದ್ದ. ಇದನ್ನು ನೋಡಿದ ಪ್ರೀತಂ, ಅಪ್ಪ ಬರಲಿ ಹೇಳುತ್ತೇನೆ. ಅಮ್ಮನ ಮೇಲೆ ಏಕೆ ಮಲಗಿದ್ದೀಯಾ ಎಂದು ಕೇಳಿದ್ದಾನೆ. ನಂತರ ಸಾಕಮ್ಮ ಆತನಿಗೆ ಹೊಡೆದು ಮಲಗಿಸಿ ಬಿಟ್ಟಿದ್ದಳು. ಮಗ ಮಲಗಿದ ನಂತರ ಇಬ್ಬರು ಸೇರಿ ಹೆತ್ತ ಮಗನನ್ನೇ ಕೊಲೆ ಮಾಡಲು ಪ್ಲಾನ್ ಮಾಡಿದ್ದರು” ಎಂದು ಬಾಲಕನ ತಂದೆ ನಂಜುಂಡಸ್ವಾಮಿ ಅವರು ಹೇಳಿದ್ದಾರೆ.

cng 5

ಮರುದಿನ ಶನಿವಾರ ಆಗಿದ್ದರಿಂದ ಪ್ರೀತಂ ಬೆಳಗ್ಗೆ ಶಾಲೆ ಮುಗಿಸಿಕೊಂಡು ಮನೆಗೆ ಬಂದು ಊಟ ಮಾಡಿ ಹೊರಗೆ ಆಟ ಆಡಲು ಹೋಗಿದ್ದನು. ಮನೆಗೆ ತಂದೆ ನಂಜುಂಡಸ್ವಾಮಿ ಬಂದಿರಲಿಲ್ಲ. ನಂಜುಂಡಸ್ವಾಮಿ ಶುಕ್ರವಾರ ರಾತ್ರಿ ಅಡುಗೆ ಕಾಂಟ್ರಾಕ್ಟ್ ಇದ್ದರಿಂದ ಕೆಲಸ ಮುಗಿಸಿ ಶನಿವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಮನೆಗೆ ಬಂದಿದ್ದಾನೆ. ಮನೆಗೆ ಬಂದಾಗ ಮಗ ಎಲ್ಲಿ ಎಂದು ಪತ್ನಿ ಸಾಕಮ್ಮಳನ್ನ ಕೇಳಿದ್ದಾನೆ. ಈ ವೇಳೆ ಮಗನಿಗೆ ಊಟ ಮಾಡಿಸಿದ್ದೇನೆ. ಹೊರಗೆ ಆಟ ಆಡಲು ಹೋಗುವುದಾಗಿ ಹೇಳಿ ಹೋಗಿದ್ದಾನೆ ಎಂದು ಹೇಳಿದ್ದಾಳೆ. ನಂತರ ಸಂಜೆಯಾದ್ರೂ ಮಗ ಮನೆಗೆ ಬರದೇ ಇದ್ದಾಗ ಇಬ್ಬರು ಸೇರಿ ಊರು, ಜಮೀನು ಹುಡುಕಿದ್ದಾರೆ. ಆದರೆ ಎಲ್ಲೂ ಪ್ರೀತಂ ಪತ್ತೆಯಾಗಿಲ್ಲ. ಭಾನುವಾರ ಕೊಳ್ಳೇಗಾಲ ಪೊಲೀಸ್ ಠಾಣೆಗೆ ಹೋಗಿ ನಂಜುಂಡಸ್ವಾಮಿ ಮಗ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲು ಮಾಡಿದ್ದರು. ಅಕ್ಟೋಬರ್ 9 ಮಂಗಳವಾರ ಸಂಜೆ ವೇಳೆಗೆ ಸಿಲ್ಕಲ್ ಪುರ ಗ್ರಾಮದ ಕೆರೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ ಎಂದು ಬಾಲಕನ ಅಜ್ಜಿ ನಾಗಮ್ಮ ಹೇಳಿದ್ದಾರೆ.

cng 3

ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರಿಂದ ಮಗುವಿನ ಶವ ಸಿಗುತ್ತಿದ್ದಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬುಧವಾರ ಮಗುವಿನ ಅಂತ್ಯಕ್ರೀಯೆ ನಡೆಸಿದ ಮರುದಿನ ಪೊಲೀಸರು ನಂಜುಂಡಸ್ವಾಮಿ ಮತ್ತು ಸಾಕಮ್ಮಳನ್ನ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸಾಕಮ್ಮ ಶುಕ್ರವಾರ ನಡೆದಿದ್ದ ಘಟನೆಯ ಬಗ್ಗೆ ವಿವರಿಸಿದ್ದಾಳೆ. ಗಂಡನಿಗೆ ಅನೈತಿಕ ಸಂಬಂಧ ತಿಳಿಯಬಾರದು ಎಂಬ ಉದ್ದೇಶದಿಂದ ಪ್ರಿಯಕರ ನಾಗರಾಜು ಜೊತೆಗೆ ಸೇರಿ ಮಗ ಪ್ರೀತಂನ ಕುತ್ತಿಗೆಯನ್ನ ಹಿಸುಕಿ ಕೊಲೆ ಮಾಡಿದ್ದೇವು. ಶನಿವಾರ ಶಾಲೆ ಮುಗಿಸಿಕೊಂಡು ಬಂದ ಪ್ರೀತಂ ನನ್ನ ಚಾಕ್ಲೇಟ್ ಕೊಡಿಸುವುದಾಗಿ ಜಮೀನಿನ ಬಳಿ ಕರೆದು ನಂತರ ಆತನನ್ನ ಕೊಲೆ ಮಾಡಿ ಗ್ರಾಮದ ಹೊರ ವಲಯದಲ್ಲಿದ್ದ ಕೆರೆಗೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಅವರು ತಿಳಿಸಿದ್ದಾರೆ.

cng 2

ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರ ವಿಚಾರಣೆಯಿಂದ ಸತ್ಯ ಹೊರ ಬರುತ್ತಿದ್ದಂತೆ ಪ್ರಿಯಕರ ನಾಗರಾಜುನನ್ನ ಪೊಲೀಸರು ಬಂಧಿಸಿದ್ದಾರೆ. ನಂತರ ಕೊಲೆ ಮಾಡಿದ ಸ್ಥಳಗಳಿಗೆ ನಾಗರಾಜುನನ್ನು ಕರೆದುಕೊಂಡು ಹೋಗಿ ತನಿಖೆ ಮಾಡಿದ್ದಾರೆ. ಆರೋಪಿ ಸಾಕಮ್ಮಳನ್ನು ಮೈಸೂರಿನ ಜೈಲಿಗೆ ರವಾನಿಸಿದ್ದಾರೆ. ತಮ್ಮ ಕಾಮದಾಟಕ್ಕೆ ಹೆತ್ತ ಮಗನನ್ನೇ ಬಲಿ ಕೊಟ್ಟ ಆಕೆಗೆ ಕಠಿಣವಾದ ಶಿಕ್ಷೆ ನೀಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *