ಮೈಸೂರು: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಮೇಲೆ ಮತ್ತೊಂದು ಭೂ ಅಕ್ರಮ ಆರೋಪ ಕೇಳಿ ಬಂದಿದೆ. ಆರ್‌ಟಿಐ ಕಾರ್ಯಕರ್ತ ಗಂಗರಾಜು ಈ ಕುರಿತು ದಾಖಲೆ ಬಿಡುಗಡೆ ಮಾಡಿದ್ದಾರೆ.
ಮೈಸೂರಿನ (Mysuru) ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ 20 ಗುಂಟೆ ಜಾಗವನ್ನು 2023ರ ಸೆಪ್ಟೆಂಬರ್ 29 ರಂದು ಸಿಎಂ ಪತ್ನಿ ಪಾರ್ವತಮ್ಮ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ನಗರದ ಕೆಆರ್‌ಎಸ್ ರಸ್ತೆಯಲ್ಲಿರುವ ಸ.ನಂ 454ರ ಗಣೇಶ್ ದೀಕ್ಷಿತ್ ಎಂಬವರಿಗೆ ಸೇರಿದ 4 ಎಕರೆ 11 ಗುಂಟೆ ಜಾಗ ಅದು. ಅದರಲ್ಲಿ 20 ಗುಂಟೆ ಜಾಗವನ್ನ ಸಿಎಂ ಪತ್ನಿ ಖರೀದಿ ಮಾಡಿದ್ದಾರೆ. ಇದನ್ನೂ ಓದಿ: ಮುಡಾ ಫೈಲ್‌ಗಳನ್ನು ಸುಟ್ಟು ಹಾಕಿರುವ ಬೈರತಿ ಸುರೇಶ್‌ರನ್ನು ಕೂಡಲೇ ಬಂಧಿಸಿ – ಶೋಭಾ ಕರಂದ್ಲಾಜೆ
Advertisement
Advertisement
20 ಗುಂಟೆ ಜಾಗಕ್ಕೆ 1 ಕೋಟಿ 85 ಲಕ್ಷ ರೂ. ನೀಡಿದ್ದಾರೆ. ಅದರಲ್ಲಿ 8998 ಚದರಡಿ ಜಾಗ ಮೂಡಾಗೆ ಸೇರಿದ್ದು (ರಸ್ತೆ ಮತ್ತು ಪೈಪ್‌ಲೈನ್ ಉದ್ದೇಶಕ್ಕೆ). ರಸ್ತೆ ಮತ್ತು ಪೈಪ್‌ಲೈನ್‌ಗೆ ಇದ್ದ ಜಾಗವನ್ನ ಸೇರಿಸಿಕೊಂಡು ತಮ್ಮ ಹೆಸರಿಗೆ ಪಾರ್ವತಿ ಅವರು ರಿಜಿಸ್ಟರ್ ಮಾಡಿಸಿಕೊಂಡಿದ್ದರು.
Advertisement
Advertisement
ಆರ್‌ಟಿಐ ಕಾರ್ಯಕರ್ತ ಗಂಗರಾಜು 2024ರ ಆಗಸ್ಟ್ 20 ರಂದು ಈ ಸಂಬಂಧ ಆರ್‌ಟಿಐ ಸಲ್ಲಿಕೆ ಮಾಡಿದ್ದಾರೆ. ಇದರಿಂದ ಎಚ್ಚೆತ್ತ ಸಿಎಂ ಪತ್ನಿ ದಿ.31.8.2024 ರಂದು ಮತ್ತೆ ರಿಜಿಸ್ಟರ್ ತಿದ್ದುಪಡಿ ಮಾಡಿಸಿ ಮುಡಾದ ಜಾಗವನ್ನು ಬಿಟ್ಟು ಇನ್ನುಳಿದ 12,782 ಚದರಡಿ ಜಾಗಕ್ಕೆ ಮಾತ್ರ ರಿಜಿಸ್ಟರ್ ಮಾಡಿಸಿದ್ದಾರೆ. ಇದನ್ನೂ ಓದಿ: ಮುಡಾದಲ್ಲಿ 1992ರ ಪ್ರಮುಖ ದಾಖಲೆಗಳೇ ನಾಪತ್ತೆ – ಇ.ಡಿ ಅಧಿಕಾರಿಗಳು ಶಾಕ್!