ಬೆಂಗಳೂರು: ಆಹಾರ ಇಲಾಖೆ ಮತ್ತು ಶಿಕ್ಷಣ ಇಲಾಖೆ (Education Department) ಅಕ್ಕಿ ಖರೀದಿಸಿದ್ದರಲ್ಲಿ ದೊಡ್ಡ ಪ್ರಮಾಣದಲ್ಲಿ ಹಣದ ವ್ಯತ್ಯಾಸವಾಗಿದೆ ಎಂದು ಬಿಜೆಪಿ (BJP) ಮುಖಂಡ ಎನ್.ರವಿಕುಮಾರ್ (N.Ravikumar) ಆರೋಪಿಸಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಆಹಾರ ಸಚಿವ ಮುನಿಯಪ್ಪರಿಗೆ ಪ್ರಶ್ನಿಸಿದ ಅವರು, ಆಹಾರ ಇಲಾಖೆ ಒಂದು ಕೆಜಿಗೆ 34 ರೂ. 60 ಪೈಸೆ ಖರ್ಚು ಮಾಡುತ್ತಿದೆ. ಶಿಕ್ಷಣ ಇಲಾಖೆ ಅಕ್ಷರ ದಾಸೋಹಗೆ ಪ್ರತಿ ಕೆಜಿ ಅಕ್ಕಿಗೆ 29ರೂ. 30 ಪೈಸೆ ಕೊಡ್ತಿದ್ದಾರೆ. ಸರ್ಕಾರ ಒಂದೇ ಇದ್ದರೂ ಯಾಕೆ ಬೇರೆ ದರದಲ್ಲಿ ಅಕ್ಕಿ ಖರೀದಿ ಆಗ್ತಿದೆ? ಅಕ್ಕಿ ಖರೀದಿಯಲ್ಲಿ ಸುಮಾರು 5 ರೂ. ಹಣ ಎಲ್ಲಿಗೆ ಹೋಗುತ್ತಿದೆ ಎಂದು ಗೊತ್ತಿಲ್ಲ. ಸುಮಾರು 120 ಕೋಟಿ ರೂ. ಹಣ ವ್ಯತ್ಯಾಸ ಬರುತ್ತಿದೆ. ಇದಕ್ಕೆ ಉತ್ತರ ಕೊಡಿ ಎಂದು ಅವರು ಕೇಳಿದರು. ಇದನ್ನೂ ಓದಿ: ಕಾವೇರಿ ನೀರು ಬಿಡುಗಡೆ ವಿಚಾರ; ರಾಜ್ಯ ಸರ್ಕಾರ ನಿರ್ಧಾರದ ಬೆನ್ನಲ್ಲೇ ಸರ್ವಪಕ್ಷಗಳ ಸಭೆ ಕರೆದ ತ.ನಾಡು ಸರ್ಕಾರ
ಈ ವೇಳೆ ಉತ್ತರಿಸಿದ ಸಚಿವ ಮುನಿಯಪ್ಪ, ಆಹಾರ ಇಲಾಖೆ, ಎನ್‍ಸಿಎಫ್ ಮತ್ತು ಕೇಂದ್ರ ಭಂಡಾರದ ಮೂಲಕವೇ ಅಕ್ಕಿ ಖರೀದಿ ಮಾಡ್ತಿದೆ. ಕೇಂದ್ರವೇ ನಿಗದಿ ಮಾಡಿದ ಮೊತ್ತವನ್ನು ಪ್ರತಿ ಕೆಜಿಗೆ 34 ರೂ. 60 ಪೈಸೆ ಕೊಡಲಾಗುತ್ತಿದೆ. ನಾವು ಕೇಂದ್ರ ಸರ್ಕಾರಕ್ಕೆ 5 ಕೆಜಿ ಅಕ್ಕಿ ಕೊಡಿ ಎಂದರೂ ಕೊಡಲಿಲ್ಲ. ನಾವು ಖರೀದಿ ಮಾಡುತ್ತಿರುವ ಅಕ್ಕಿ ನಾವು ಟೆಂಡರ್ ಕರೆದಿಲ್ಲ. ಕೇಂದ್ರ ನಿಗದಿ ಮಾಡಿದ ಹಣವನ್ನೇ ಕೊಟ್ಟು ಅಕ್ಕಿ ಖರೀದಿ ಮಾಡ್ತಿದ್ದೇವೆ. ಇದರಲ್ಲಿ ಯಾವುದೇ ಅಕ್ರಮ ಆಗಿಲ್ಲ ಎಂದು ಅವರು ಹೇಳಿದರು.
2 ಕೋಟಿ ಮೆಟ್ರಿಕ್ ಟನ್ ಕೇಂದ್ರದ ಬಳಿ ಅಕ್ಕಿ ದಾಸ್ತಾನಿದೆ. 28 ರೂ.ಗೆ ಅಕ್ಕಿ ಮಾರ್ಕೆಟ್‍ನಲ್ಲಿ ಮಾರಾಟ ಮಾಡ್ತಿದ್ದಾರೆ. ನಮಗೆ ಅಕ್ಕಿ ಕೊಡಿ ಎಂದರೂ ಕೊಡುತ್ತಿಲ್ಲ. ಕೇಂದ್ರ ಸರ್ಕಾರ ಮಾರ್ಕೆಟ್ ಹಾಳು ಮಾಡುತ್ತಿದೆ. ಲಕ್ಷಾಂತರ ರೂ. ಹಣವನ್ನ ಕೇಂದ್ರ ನಷ್ಟ ಮಾಡ್ತಿದೆ ಎಂದು ಅವರು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರವಿಕುಮಾರ್, ಸಚಿವ ಮಧು ಬಂಗಾರಪ್ಪ ಮಕ್ಕಳಿಗೆ ಯಾವ ಗ್ರೇಡ್ ಅಕ್ಕಿಯನ್ನು ಕೊಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಈ ವೇಳೆ ಮಧು ಬಂಗಾರಪ್ಪ ಒಳ್ಳೆಯ ಅಕ್ಕಿಯನ್ನು ಕೊಡುತ್ತಿದ್ದೇವೆ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜ್ ಹೊರಟ್ಟಿ, ಇದು ಗಂಭೀರ ವಿಚಾರ, ಸರ್ಕಾರ ಇದ್ಕಕೆ ಸ್ಪಷ್ಟನೆ ನೀಡಬೇಕು ಎಂದು ಸೂಚಿಸಿದರು. ಇದನ್ನೂ ಓದಿ: Assembly Session: ಪರಿಷತ್‌ನಲ್ಲಿ ವಾಲ್ಮೀಕಿ ನಿಗಮ ಹಗರಣದ ಗದ್ದಲ; ಚರ್ಚೆಗೆ ಅವಕಾಶ ಕೊಡುವಂತೆ ಬಿಜೆಪಿ ಬಿಗಿಪಟ್ಟು!