ಮಡಿಕೇರಿ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಕಾವು ಏರುತ್ತಿರುವ ಬೆನ್ನಲ್ಲೇ ಕೊಡಗು ಕಾಂಗ್ರೆಸ್‍ನಲ್ಲಿ ಭಿನ್ನಮತ ಭುಗಿಲೆದ್ದಿದೆ.
ಭಾನುವಾರ ರಾತ್ರಿ ಅಧಿಕೃತ ಅಭ್ಯರ್ಥಿಗಳ ಹೆಸರು ಘೋಷಣೆ ಆದ ನಂತರ ಕೊಡಗು ಕಾಂಗ್ರೆಸ್ ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಚಂದ್ರಮೌಳಿ ಅವರನ್ನು ಘೋಷಿಸಿದ ಬಳಿಕ ಮಡಿಕೇರಿ ಕ್ಷೇತ್ರದ ಆಕಾಂಕ್ಷಿ ನಾಪಂಡ ಮುತ್ತಪ್ಪ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕುವ ಮೂಲಕ ಬಂಡಾಯ ಎದ್ದಿದ್ದಾರೆ.
Advertisement
Advertisement
ಈ ನಡುವೆ ನಾಪಂಡ ಮುತ್ತಪ್ಪ ಸಹೋದರ ಮುದ್ದಪ್ಪ ಸ್ಪೋಟಕ ವಿಚಾರಗಳನ್ನು ತಮ್ಮ ಫೇಸ್ ಬುಕ್ ಪೇಜ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ನಮಗಾಗಿರುವ ಅನ್ಯಾಯವನ್ನು ಟೀಕಿಸಿದರು. ಪೋಸ್ಟ್ ನಲ್ಲಿ ಚಂದ್ರಮೌಳಿಯವರ ನಿಮಗೆ ಚುನಾವಣೆ ನಿಲ್ಲುವ ತೆವಲು ಏಕೆ? ಕಾಂಗ್ರೆಸ್‍ನ್ನು ಬಲಿ ಕೊಡುವುದರ ಹಿಂದಿನ ಹುನ್ನಾರವೇನು ಎಂದು ಪ್ರಶ್ನಿಸಿದ್ದಾರೆ.
Advertisement
ಪ್ರಶ್ನಿಸುವುದರ ಜತೆಗೆ ಕಮಲ ಕಾಂಗ್ರೆಸಿಗರ ಕೈ ಮೇಲಾಗಿದೆ, ನಿಮ್ಮ ದುರಾಹಂಕಾರಕ್ಕೆ ಜನ ತಕ್ಕ ಪಾಠ ಕಲಿಸಲಿದ್ದಾರೆ. ಉಸ್ತುವಾರಿ ಸಚಿವರು ತಾವೇ ತೋಡಿದ ಹಳ್ಳಕ್ಕೆ ತಾವೇ ಬೀಳಲಿದ್ದಾರೆ ಎಂದು ಟೀಕಿಸಿದ್ದಾರೆ. ಟಿಕೆಟ್‍ಗಾಗಿ ಕೋಟಿ ಕೋಟಿ ಹಣ ಕೇಳಿದ ನಾಯಕರ ಜಾತಕ ಬಿಡುಗಡೆ ಮಾಡುತ್ತೇವೆ ಎಂದು ಮುತ್ತಪ್ಪ ಸಹೋದರ ಮುದ್ದಪ್ಪ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.
Advertisement