ಇಸ್ಲಾಮಾಬಾದ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ (T20 WorldCup) ಟೂರ್ನಿ ಅತ್ಯಂತ ರೋಚಕತೆಯಿಂದ ಕೂಡಿದೆ. `ಬಿ’ ಗುಂಪಿನಲ್ಲಿ ಯಾವ ತಂಡ ಸೆಮಿಗೆ ಹೋಗಲಿದೆ ಎನ್ನುವುದು ಇನ್ನೂ ದೃಢಪಟ್ಟಿಲ್ಲ. ಆದರೆ ಪಾಯಿಂಟ್ಸ್ ಟೇಬಲ್ನಲ್ಲಿ 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಟೀಂ ಇಂಡಿಯಾ (Team India) ಬಹುತೇಕ ಸೆಮಿ ಫೈನಲ್ ಹಾದಿಯನ್ನು ಖಚಿತಪಡಿಸಿಕೊಂಡಿದೆ.
Advertisement
ಭಾನುವಾರ ಮೆಲ್ಬರ್ನ್ ಕ್ರೀಡಾಂಗಣದಲ್ಲಿ (MCG) ನಡೆಯುವ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಗೆದ್ದರೆ ಟೀಂ ಇಂಡಿಯಾ ಅಧಿಕೃತವಾಗಿ ಸೆಮಿ ಫೈನಲ್ ಪ್ರವೇಶಿಸಲಿದೆ. ಈ ನಡುವೆಯೇ ಪಾಕಿಸ್ತಾನದ (Pakistan) ನಟಿ ಸೆಹಾರ್ ಶಿನ್ವಾರಿ (Sehar Shinwari) ಜಿಂಬಾಬ್ವೆಗೆ (Zimbabwe) ಬಂಪರ್ ಆಫರ್ ಕೊಟ್ಟಿದ್ದಾರೆ. ಇದನ್ನೂ ಓದಿ: ಭಾರತಕ್ಕೆ 5 ರನ್ಗಳ ರೋಚಕ ಗೆಲುವು – ಹರ್ಷ ತಂದ ಅರ್ಷದೀಪ್
Advertisement
Advertisement
ಸೆಪ್ಟೆಂಬರ್ 6 ರಂದು ನಡೆಯುವ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ನಾಯಕತ್ವದ ಟೀಂ ಇಂಡಿಯಾವನ್ನು ಅದ್ಭುತವಾಗಿ ಸೋಲಿಸಿದರೆ ಜಿಂಬಾಬ್ವೆ ಹುಡುಗನನ್ನು ಮದುವೆಯಾಗುತ್ತೇನೆ ಎಂದು ನಟಿ ಸೆಹಾರ್ ಶಿನ್ವಾರ್ ಟ್ವೀಟ್ ಮಾಡಿದ್ದಾರೆ. ಪಾಕ್ ನಟಿಯ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವರು ಇದನ್ನು ಟ್ರೋಲ್ ಮಾಡುತ್ತಿದ್ದು, ನಿಮ್ಮ ಇಡೀ ಜೀವನ ನೀವು ಹೀಗೆ ಏಕಾಂಗಿಯಾಗಿಯೇ ಬದುಕುತ್ತೀರಿ, ಅದಕ್ಕಾಗಿ ವಿಷಾದಿಸುತ್ತೇನೆ ಎಂದು ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಆಫ್ರಿಕಾಗೆ ಸೋಲು – ಚಿಗುರಿಕೊಂಡ ಪಾಕಿಸ್ತಾನದ ಸೆಮಿಫೈನಲ್ ಕನಸು
Advertisement
ಈಗಾಗಲೇ 4 ಪಂದ್ಯಗಳನ್ನಾಡಿರುವ ಪಾಕಿಸ್ತಾನ (Pakistan) 2 ಪಂದ್ಯಗಳಲ್ಲಿ ಸೋತಿದೆ. ಉಳಿದೆರಡು ಪಂದ್ಯಗಳಲ್ಲಿ ಗೆದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದೆ. 4 ಅಂಕಗಳನ್ನು ಪಡೆದಿರುವ ಬಾಂಗ್ಲಾದೇಶ (Bangladesh) ತನ್ನ ಸೆಮಿಸ್ ಹಾದಿ ಕಠಿಣವಾಗಿಸಿಕೊಂಡಿದೆ. ಅಕ್ಟೋಬರ್ 6ರಂದು ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿದ್ದು, ಗೆದ್ದ ತಂಡಗಳು ಸೆಮಿಸ್ ರೇಸ್ನಲ್ಲಿ ಉಳಿಯಲಿವೆ. ಇನ್ನೂ ಈಗಾಗಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನಲ್ಲಿರುವ ಭಾರತ (India), ಜಿಂಬಾಬ್ವೆ (Zimbabwe) ವಿರುದ್ಧ ಸೆಣಸಲಿದ್ದು, ಈ ಪಂದ್ಯದಲ್ಲಿ ಗೆದ್ದರೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಟೂರ್ನಿಯಿಂದ ಅಧಿಕೃತವಾಗಿ ಹೊರ ಬೀಳಲಿವೆ.
ಜಿಂಬಾಬ್ವೆ ವಿರುದ್ದದ ಪಂದ್ಯದಲ್ಲಿ ಭಾರತ ತಂಡ ಸೋಲಬೇಕೆಂಬುದು ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳ ಆಶಯವಾಗಿದೆ. ಈ ನಡುವೆ ಪಾಕ್ ನಟಿ ಜಿಂಬಾಬ್ವೆಗೆ ಆಫರ್ ಕೊಟ್ಟಿದ್ದಾರೆ.