BollywoodCinemaLatestMain Post

ಬ್ರೇಕಪ್ ನಂತರ ಸ್ಟಾರ್ ನಟಿ ಸಹೋದರನ ಜೊತೆ ಇಲಿಯಾನಾ ಡೇಟಿಂಗ್

Advertisements

ಬಾಲಿವುಡ್ ಬ್ಯೂಟಿ ಇಲಿಯಾನಾ ಡಿಕ್ರೂಸ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಬಾಯ್ ಫ್ರೆಂಡ್ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ನಟಿ ಇಲಿಯಾನಾ ಬಳಿಕ ಬ್ರೇಕಪ್ ಮಾಡಿಕೊಂಡು ಸುದ್ದಿಯಾಗಿದ್ದರು. ಬಳಿಕ ಸಿಂಗಲ್ ಆಗಿದ್ದ ಇಲಿಯಾನಾ ಇದೀಗ ಮತ್ತೆ ಏಂಗೇಜ್ ಆಗಿದ್ದಾರೆ ಎನ್ನಲಾಗುತ್ತಿದೆ. ಸ್ಟಾರ್ ನಟಿಯ ಸಹೋದರನ ಜತೆ ಇಲಿಯಾನಾ ಡೇಟಿಂಗ್ ಮಾಡುತ್ತಿದ್ದಾರೆ. ಸದ್ಯ ಈ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

ಇಲಿಯಾನಾ ಇತ್ತೀಚಿಗಷ್ಟೆ ಮಾಲ್ಡೀವ್ಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಕತ್ರಿನಾ ಕೈಫ್ ದಂಪತಿ ಜೊತೆಗೆ, ಬಾಲಿವುಡ್ ಬ್ಯೂಟಿ ಕತ್ರಿನಾ ಇತ್ತೀಚಿಗಷ್ಟೆ 39ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಕ್ಯಾಟ್ ಬರ್ತಡೇಯನ್ನು ಪತಿ ವಿಕ್ಕಿ ಕೌಶಲ್ ಮಾಲ್ಡೀವ್ಸ್ನಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ. ಕತ್ರಿನಾ ದಂಪತಿ ಜೊತೆ ಕುಟುಂಬದವರು ಜೊತೆಯಲ್ಲಿದ್ದರು. ವಿಶೇಷ ಎಂದರೆ ಇವರ ಮಧ್ಯೆ ಹೈಲೆಟ್ ಆಗಿದ್ದು ಇಲಿಯಾನಾ. ಕತ್ರಿನಾ ಕುಟುಂಬಕ್ಕೂ ಇಲಿಯಾನಾಗೂ ಎಲ್ಲಿಂದ ಸಂಬಂಧ ಅಂತೀರಾ. ಅದೇ ಈಗ ಬಿಟೌನ್‌ನಲ್ಲಿ ಸಖತ್ ಚರ್ಚೆ ಆಗುತ್ತಿರುವ ವಿಚಾರ. ಇದನ್ನೂ ಓದಿ:ಪತ್ನಿ ಪ್ರಿಯಾಗೆ ಕಿಚ್ಚ ಸುದೀಪ್ ಥ್ಯಾಂಕ್ಸ್ ಹೇಳಿದ್ಯಾಕೆ?

 

View this post on Instagram

 

A post shared by Ileana D’Cruz (@ileana_official)

ಸದ್ಯ ಕತ್ರಿನಾ ಕೈಫ್ ಸಹೋದರ ಸೆಬಾಸ್ಟಿನ್ ಜೊತೆ ಇಲಿಯಾನಾ ಪ್ರೀತಿಯಲ್ಲಿದ್ದಾರೆ. ಕತ್ರಿನಾ ಗ್ಯಾಂಗ್ ಜೊತೆ ಇರುವ ಫೋಟೋವನ್ನು ಇಲಿಯಾನಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಬರ್ತಡೇ ಗರ್ಲ್ ಕತ್ರಿನಾಗೆ ವಿಶ್ ಮಾಡಿ ಸಂಭ್ರಮಿಸಿದ್ದಾರೆ. ಕತ್ರಿನಾ ದಂಪತಿ ಕುಟುಂಬದ ಜೊತೆ ಇಲಿಯಾನಾ ಬಿಗ್ ಸ್ಮೈಲ್ ಮಾಡಿದ್ದಾರೆ. ಇಲಿಯಾನಾ ಮತ್ತು ಸೆಬಾಸ್ಟಿನ್ ಡೇಟಿಂಗ್ ವಿಚಾರಕ್ಕೆ ಈ ಫೋಟೋಗಳು ಸಾಕ್ಷಿ ಹೇಳುತ್ತಿವೆ.

ಇಲಿಯಾನಾ ಕೊನೆಯದಾಗಿ `ಬಿಗ್ ಬುಲ್’ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೇ ಇಲಿಯಾನಾ ನಟನೆಗೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗಿತ್ತು. ಅಂದಹಾಗೆ ಇಲಿಯಾನಾ ಆಂಡ್ರ‍್ಯೂ ನೀಬೋನ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಕೆಲವೇ ವರ್ಷಗಳಲ್ಲಿ ಇಬ್ಬರು ದೂರ ಆದರು. ಬ್ರೇಕಪ್ ಬಳಿಕ ಸಿಂಗಲ್ ಆಗಿದ್ದ ಇಲಿಯಾನಾ ಇದೀಗ ಮತ್ತೆ ಕತ್ರಿನಾ ಸಹೋದರನ ಜತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಆದರೆ ಈ ಬಗ್ಗೆ ಯಾರ ಕಡೆಯಿಂದನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಇಲಿಯಾನಾ ದಿಢೀರ್ ಆಗಿ ಕತ್ರಿನಾ ಗ್ಯಾಂಗ್ ಸೇರಿರುವುದು ಈ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

Live Tv

Leave a Reply

Your email address will not be published.

Back to top button