ಸಂಗೀತ ಮಾಂತ್ರಿಕ ಇಳಯರಾಜ ಅವರ ಜೀವನವನ್ನು (Biopic) ಆಧರಿಸಿದ ಸಿನಿಮಾ ಮಾಡಲು ತಮಿಳಿನಲ್ಲಿ ಸಿದ್ದತೆ ನಡೆದಿದ್ದು, ಇಳಯರಾಜ ಅವರ ಪಾತ್ರವನ್ನು ಧನುಷ್ (Dhanush) ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಲವು ವರ್ಷಗಳಿಂದ ಇಳಯರಾಜ ಕುರಿತಾದ ಸಿನಿಮಾ ಬಗ್ಗೆ ಚರ್ಚೆ ಆಗುತ್ತಲೇ ಇತ್ತು. ಅದಕ್ಕೀಗ ಅಂತಿಮ ಸ್ವರೂಪ ಸಿಗುತ್ತಿದೆ.
Advertisement
ತಮ್ಮ ತಂದೆಯ ಜೀವನವನ್ನು ಆಧರಿಸಿದ ಸಿನಿಮಾ ಮಾಡುವುದಾದರೆ, ಆ ಪಾತ್ರದಲ್ಲಿ ನಾನು ಧನುಷ್ ಅವರನ್ನು ಕಾಣಲು ಬಯಸುತ್ತೇನೆ ಎಂದು ಈ ಹಿಂದೆಯೇ ಇಳಯರಾಜ (Ilayaraja) ಅವರ ಪುತ್ರ ಯುವನ್ ಶಂಕರ್ ರಾಜ್ ಹೇಳಿದ್ದರು. ತಮ್ಮ ತಂದೆಯನ್ನು ಧನುಷ್ ಅವರಲ್ಲಿ ಕಾಣಲು ಹೆಚ್ಚು ಉತ್ಸುಕನಾಗಿದ್ದೇನೆ ಎಂದೂ ಅವರು ಹೇಳಿಕೊಂಡಿದ್ದರು. ಇದನ್ನೂ ಓದಿ:‘ಡಿಜೆ ಟಿಲ್ಲು’ ಹೀರೋ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್
Advertisement
Advertisement
ಇದೀಗ ಸಿಗುತ್ತಿರುವ ಮಾಹಿತಿಯ ಪ್ರಕಾರ, ಇಳಯರಾಜ ಅವರ ಬಯೋಪಿಕ್ ಅನ್ನು ಸ್ವತಃ ಯುವನ್ ಶಂಕರ್ ರಾಜ್ (Yuvan Shankar Raj) ಅವರೇ ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ನಾನಾ ನಿರ್ದೇಶಕರ ಜೊತೆಯೂ ಯುವನ್ ಮಾತನಾಡಿದ್ದಾರೆ ಎನ್ನುವುದು ವರ್ತಮಾನ.
Advertisement
ಈಗಾಗಲೇ ಧನುಷ್ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರೇ ಒಂದು ಸಿನಿಮಾವನ್ನೂ ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ಅದೇ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ. ಹೀಗಾಗಿ ಇಳಯರಾಜ ಸಿನಿಮಾ ಯಾವಾಗ ಸೆಟ್ಟೇರತ್ತೋ ಕಾದು ನೋಡಬೇಕು.
Web Stories