ಉಡುಪಿ: ಕಾಂಗ್ರೆಸ್ ಪಕ್ಷ ಕರೆ ನೀಡಿರುವ ರಾಜಕೀಯ ಪ್ರೇರಿತ ಬಂದ್ ನಿರ್ಲಕ್ಷ್ಯ ಮಾಡಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಬೇಕು ಎಂಬದು ಜನರ ಆಶಯ. ಇದನ್ನು ಕಂಡು ಕಾಂಗ್ರೆಸ್ ಮುಂಖಡರಿಗೆ ಗಾಬರಿಯಾಗಿದೆ. ನಾಲ್ಕೂವರೆ ವರ್ಷ ಏನೂ ಸಿಗದೆ, ಸದ್ಯ ತೈಲ ದರ ಏರಿಕೆಗೆ ಕುರಿತು ಗಲಾಟೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
Advertisement
Advertisement
ಕಾಂಗ್ರೆಸ್‍ನ ಜನರ ಮುಂದಿಟ್ಟಿರುವ ವಾದವನ್ನು ಎಲ್ಲರು ನಿರ್ಲಕ್ಷ್ಯ ಮಾಡಲಿದ್ದು, ಬಂದ್ ಕರೆ ನೀಡಿದರೆ ಜನ ತಿರಸ್ಕಾರ ಮಾಡುತ್ತಾರೆ. ಪ್ರಧಾನಿ ಮೋದಿ ಅವರ ಕೆಲಸ ಪಾರದರ್ಶಕವಾಗಿದೆ. ಮೋದಿ ಕೆಲಸಗಾರ ಅನ್ನುವ ಭಾವನೆ ಜನರಿಗೆ ಇದೆ. ಅಲ್ಲದೇ ಯುಪಿಎ ಅಧಿಕಾರ ಅವಧಿಯಲ್ಲಿ ಎಷ್ಟು ಬಾರಿ ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗಿಲ್ಲ ಎಂದು ಇದೇ ವೇಳೆ ಪೂಜಾರಿ ಪ್ರಶ್ನೆ ಮಾಡಿದರು.
Advertisement
ಸಂವಿಧಾನ ಬದ್ಧವಾಗಿ ಬಂದ್ ಮಾಡುವುದು ಸರಿಯಲ್ಲ ಎಂದ ಅವರು, ತೈಲ ಬೆಲೆ ಏರಿಕೆ ಮಾಡಿದ್ದು ಕೇಂದ್ರ ಸರ್ಕಾರ ಅಲ್ಲ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಳಿತ ಅಗುವುದು ಸ್ವಾಭಾವಿಕ. ಇದರ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಆಗಿದೆ. ಮೋದಿ ಸರ್ಕಾರದ ನಾಲ್ಕೂವರೆ ವರ್ಷದ ಆಡಳಿತದಲ್ಲಿ ಚಳುವಳಿ ಮಾಡಲು ಕಾಂಗ್ರೆಸ್ ಗೆ ಏನೂ ಸಿಕ್ಕಿಲ್ಲ. ಈಗ ಬೆಲೆ ಏರಿಕೆ ಎಂದು ಬೀದಿಗಿಳಿದಿದ್ದಾರೆ. ರಾಜ್ಯದ ಜನ ಇದಕ್ಕೆ ಸೊಪ್ಪು ಹಾಕಲ್ಲ ಎಂದು ಲೇವಡಿ ಮಾಡಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv