ಮುಂಬೈ: 2023ರ ಏಕದಿನ ವಿಶ್ವಕಪ್‌ಗೆ (ODI Worldcup 2023) ಕೆಲವೇ ತಿಂಗಳು ಬಾಕಿ ಇದ್ದು, ಈಗಾಗಲೇ 20 ಆಟಗಾರರನ್ನ ಬಿಸಿಸಿಐ (BCCI) ಆಯ್ಕೆ ಮಾಡಿರುವುದಾಗಿ ಮೂಲಗಳು ತಿಳಿಸಿವೆ. ಈ ಆಟಗಾರರ ಕುರಿತು ತಜ್ಞರು ಚರ್ಚೆ ನಡೆಸಿದ್ದಾರೆ. ಈ ವೇಳೆ ಸಂಸದರೂ ಆಗಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir) ಕೆಲವು ಅಂಶಗಳನ್ನ ಪ್ರಸ್ತಾಪಿಸಿದ್ದಾರೆ.
#TeamIndia southpaw @gautamgambhir talks about how each player must play to his strength ????????, ahead of the #ODIWorldCup.
Hear more on our special ????️ #CricketKaMahakumbh, LIVE on Star Sports 1 Hindi 10:30PM #INDvSL pic.twitter.com/2t4Fn6D2ZG
— Star Sports (@StarSportsIndia) January 3, 2023
Advertisement
ಒಬ್ಬ ಆಟಗಾರನಂತೆ ಮತ್ತೊಬ್ಬ ಆಟಗಾರ ಆಡಲು ಸಾಧ್ಯವಿಲ್ಲ. ಆದ್ದರಿಂದ ಉತ್ತಮ ಆಟಗಾರರನ್ನು ಆಯ್ಕೆ ಮಾಡುವುದು ಸೂಕ್ತ ಎಂದು ಹೇಳುವಾಗ ವಿರಾಟ್ ಕೊಹ್ಲಿ (Virat Kohli) ಮತ್ತು ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನ ಉದಾಹರಣೆ ನೀಡಿದ್ದಾರೆ. ಇದನ್ನೂ ಓದಿ: ಪಂತ್ ಮುಂಬೈಗೆ ಏರ್‌ಲಿಫ್ಟ್
Advertisement
Advertisement
ಈಗ ನಾನು ಯುಸೂಫ್ (ಪಠಾಣ್) ಶೈಲಿಯಲ್ಲಿ ಆಡಲು ಸಾಧ್ಯವಿಲ್ಲ. ಹಾಗೆಯೇ ಅವರೂ ನನ್ನ ಶೈಲಿಯಲ್ಲಿ ಆಡಲು ಸಾಧ್ಯವಿಲ್ಲ. ಯಾರಾದ್ರೂ ಯುಸೂಫ್ ಶೈಲಿಯನ್ನ ಅನುಸರಿಸಲು ಹೇಳಿದ್ರೆ ನನಗೆ ಅದನ್ನ ಮಾಡಲು ಸಾಧ್ಯವಾಗಲ್ಲ. ಹಾಗೆಯೇ ವಿರಾಟ್ ಕೊಹ್ಲಿಗೆ ಸೂರ್ಯಕುಮಾರ್ ಯಾದವ್ ಅವರಂತೆ ಬ್ಯಾಟಿಂಗ್ ಮಾಡಲು ಹೇಳಿದ್ರೆ ಸಾಧ್ಯವಾಗೋದಿಲ್ಲ. ವಿರಾಟ್ ರೀತಿ ಸೂರ್ಯನಿಗೆ ಹೇಳಿದ್ರೂ ಅವರಿಂದ ಆಗೋದಿಲ್ಲ. ಆದ್ದರಿಂದ ಆಟಗಾರರನ್ನ ಗುರುತಿಸೋದು ಬಹಳ ಮುಖ್ಯ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವೈಡ್ ಕೊಡದ ಅಂಪೈರ್‌ಗೆ ನಿಂದಿಸಿದ ದೀಪಕ್ ಹೂಡಾ
Advertisement
ವಿರಾಟ್, ರೋಹಿತ್ ಪಾತ್ರ ಮುಖ್ಯ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ (Rohit Sharma) ಪ್ರಮುಖ ಆಟಗಾರರು. ಅವರಂತಹ ಅನುಭವಿ ಆಟಗಾರರು ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಅವರು ದೊಡ್ಡ ಪಾತ್ರ ನಿರ್ವಹಿಸಲಿದ್ದಾರೆ. ಆದ್ರೆ ಕೆಲವರು ಮತ್ತೊಬ್ಬರ ಶೈಲಿಗೆ ಹೊಂದಿಕೊಳ್ಳುವುದಿಲ್ಲ. ನಿರ್ದಿಷ್ಟ ಶೈಲಿಯಲ್ಲಿ ಆಡುವಂತೆ ಆಟಗಾರರನ್ನು ಏಕೆ ದೂಡಬೇಕು? ಆದ್ದರಿಂದ ನಿರ್ದಿಷ್ಟ ಶೈಲಿ ಆಡಬೇಕು ಎಂದು ಯೋಚಿಸುವುದಕ್ಕಿಂತ, ಒಂದೇ ಮನಸ್ಥಿತಿಯಲ್ಲಿ ಆಟವಾಡುವವರನ್ನು ಆಯ್ಕೆ ಮಾಡುವುದು ಉತ್ತಮ ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k