ಮಂಡ್ಯ: 9 ಕೋಟಿ ರೂ. ಚಿನ್ನ ವಂಚನೆ ಪ್ರಕರಣದಲ್ಲಿ ಜೈಲು ಸೇರಿ ಇದೀಗ ಜಾಮೀನಿನ ಮೇಲೆ ಹೊರಗೆ ಬಂದಿರುವ ಐಶ್ವರ್ಯ ಗೌಡ (Aishwarya Gowda) ವಿರುದ್ಧ ಮತ್ತೆ ಸಾಲುಸಾಲು ದೂರುಗಳು ದಾಖಲಾಗುತ್ತಿವೆ. ಈ ಹಿನ್ನೆಲೆ ಸ್ವತಃ ಮಂಡ್ಯ ಎಸ್ಪಿ (Mandya SP) ಮಲ್ಲಿಕಾರ್ಜುನ ಬಾಲದಂಡಿ, ಐಶ್ವರ್ಯ ಗೌಡರಿಂದ ಏನಾದರೂ ಜನರು ವಂಚನೆಗೆ ಒಳಗಾಗಿದ್ದರೆ ಧೈರ್ಯದಿಂದ ದೂರು ನೀಡವಂತೆ ಮನವಿ ಮಾಡಿದ್ದಾರೆ.
ನಾನು ಡಿ.ಕೆ.ಸುರೇಶ್‌ಗೆ ತಂಗಿ, ನಿಖಿಲ್ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರು ನನಗೆ ತುಂಬಾ ಪರಿಚಯ. ನಿಮಗೆ ಏನಾದರೂ ಕೆಲಸ ಆಗಬೇಕಿದ್ದರೆ ಹೇಳಿ, ನಾನು ಅವರಿಂದ ಮಾಡಿಸಿಕೊಡುತ್ತೇನೆ. ಹೀಗೆ ಬಣ್ಣಬಣ್ಣದ ಮಾತಿನಿಂದ ಜನರನ್ನು ಯಾಮಾರಿಸಿ ಕೋಟ್ಯಂತರ ರೂ. ವಂಚನೆ ಮಾಡಿರುವ ಆರೋಪ ಚಾಲಾಕಿ ಐಶ್ವರ್ಯ ಗೌಡಳ ಮೇಲೆ ಬಂದಿದೆ. ಕೇವಲ ಬೆಂಗಳೂರು ಮಾತ್ರವಲ್ಲ, ಮಂಡ್ಯದಲ್ಲೂ ಸಹ ಖತರ್ನಾಕ್ ಐಶ್ವರ್ಯ ಗೌಡ ಉರುಫ್ ನವ್ಯಶ್ರೀ ವಿರುದ್ಧ ಪ್ರಕರಣ ದಾಖಲಾಗುತ್ತಿವೆ. ಇದನ್ನೂ ಓದಿ: ಉಡುಪಿ| ಗ್ರಾಪಂ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿಯಿಂದ ಪ್ರಾರ್ಥನೆ – ಹಿಂದೂ ಸಂಘಟನೆಗಳ ಅಸಮಾಧಾನ
ಐಶ್ವರ್ಯಗೌಡ ವಿರುದ್ಧ ಕೆಲವರು ಈಗಾಗಲೇ ದೂರು ನೀಡಿದ್ದರೆ, ಇನ್ನೂ ಹಲವರು ಎಸ್ಪಿ ಕಚೇರಿ ಹಾಗೂ ಜಿಲ್ಲೆಯ ಪೊಲೀಸ್ ಠಾಣೆಗಳಿಗೆ ತೆರಳಿ ಐಶ್ವರ್ಯ ಗೌಡ ವಿರುದ್ಧ ದೂರು ನೀಡಲು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಸೂಕ್ತ ದಾಖಲೆಗಳನ್ನು ತಂದು ದೂರು ದಾಖಲಿಸಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಏರ್‌ಪೋರ್ಟ್ ರಸ್ತೆ ಸವಾರರಿಗೆ ಗುಡ್‌ನ್ಯೂಸ್ – ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಬಿಬಿಎಂಪಿ ಸಜ್ಜು