ಆನೇಕಲ್: ಒಂದು ಸಿಲಿಂಡರ್ ಕೊಟ್ರೆ ಒಂದು ತಿಂಗಳು ಕಾಲ ಉಚಿತವಾಗಿ ಬಿರಿಯಾನಿ (Biriyani) ನೀಡುವುದಾಗಿ ಹೋಟೆಲ್‌ವೊಂದು ಭರ್ಜರಿ ಆಫರ್ ನೀಡಿದೆ.
ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ಗಡಿಭಾಗದ ಹೊಸೂರಿನಲ್ಲಿರುವ (Hosuru) ಹೋಟೆಲ್‌ವೊಂದು ಈ ಆಫರ್ ನೀಡಿದೆ. ಒಂದು ಸಿಲಿಂಡರ್ ಕೊಟ್ಟರೆ ದಿನಕ್ಕೆ ಒಂದು ಬಿರಿಯಾನಿಯಂತೆ ಒಂದು ತಿಂಗಳು ಕಾಲ ಉಚಿತವಾಗಿ ಕೊಡುವುದಾಗಿ ತಿಳಿಸಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಪೆಟ್ರೋಲ್ ದರ 5 ರೂ., ಡೀಸೆಲ್ ಬೆಲೆ 3 ರೂ. ಏರಿಕೆ

ನಮಗೆ ಅಡುಗೆಗೆ ನೀವು ಸಹಾಯ ಮಾಡಿ, ನಿಮ್ಮ ಹೊಟ್ಟೆ ನಾವು ತುಂಬಿಸುತ್ತೇವೆ ಎಂದು ಟ್ಯಾಗ್ ಕೂಡ ಹಾಕಿಕೊಂಡಿದೆ. ವಿಶಿಷ್ಟ ಜಾಹೀರಾತಿನ ಮೂಲಕ ಆಫರ್ ನೀಡಿದ್ದು, ಹೋಟೆಲ್ ಮುಂದೆ ಪೋಸ್ಟರ್ ಹಾಕಿ ಮಾಲೀಕರು ಗ್ರಾಹಕರ ಗಮನ ಸೆಳೆದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಭಾರೀ ವೈರಲ್ ಆಗಿದೆ.
ಮಧ್ಯಪ್ರಾಚ್ಯದಲ್ಲಿ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ಇಂಧನ ಬಿಕ್ಕಟ್ಟು ಎದುರಾಗಿದೆ. ಇದರಿಂದ ಹೋಟೆಲ್ ಉದ್ಯಮಕ್ಕೂ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಸಮಸ್ಯೆ ಉಂಟಾಗಿದೆ. ಈ ಸವಾಲನ್ನು ಎದುರಿಸಲು ಹೊಸೂರಿನ ಹೋಟೆಲ್‌ವೊಂದು ಈ ಉಪಾಯ ಕಂಡುಕೊಂಡಿದೆ.ಇದನ್ನೂ ಓದಿ: ಗುಡ್ ನ್ಯೂಸ್ – ಭಾರತ ಸೇರಿ ಮಿತ್ರ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿ ಓಪನ್: ಇರಾನ್

