ವಿಜಯಪುರ: ಒಂದು ಬಾಟಲ್ ಕೊಟ್ಟರೆ ಕೆಳಗೆ ಬರ್ತಿನಿ ಎಂದು ಟವರ್ ಹತ್ತಿ ಕುಡುಕ ಹುಚ್ಚಾಟ ಮೆರೆದಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯ ತಿಕೋಟ (Tikota) ತಾಲೂಕಿನ ಕೋಟ್ಯಾಳ (Kotyal) ಗ್ರಾಮದಲ್ಲಿ ಘಟನೆ ನಡೆದಿದೆ.
ಕೋಟ್ಯಾಳ ಗ್ರಾಮದ ನಿವಾಸಿಯಾಗಿರುವ ವ್ಯಕ್ತಿಯೋರ್ವ ಮದ್ಯವಸನಿಯಾಗಿದ್ದು, ಕಳೆದ ಎರಡು ವರ್ಷದಲ್ಲಿ ಎರಡನೇ ಬಾರಿ ಟವರ್ ಹತ್ತಿದ್ದಾನೆ. ಇದನ್ನೂ ಓದಿ: ಬೆಂಗಳೂರಲ್ಲಿ ಓದಿದ್ದ ವ್ಯಕ್ತಿ ಈಗ ನೇಪಾಳದ ಪ್ರಧಾನಿ
ಆಗಾಗ ಮೊಬೈಲ್ ಟವರ್‌ಗಳನ್ನು ಹತ್ತಿ ಹುಚ್ಚಾಟ ಮೆರೆಯುವುದು ಚಾಳಿ ಆಗಿಬಿಟ್ಟದೆ. ಸದ್ಯ ಮದ್ಯ ಕೊಟ್ಟರೆ ವಾಪಸ್ ಟವರ್‌ನಿಂದ ಬರ್ತಿನಿ ಎಂದು ಪಟ್ಟು ಹಿಡದಿದ್ದಾನೆ. ಇದೀಗ ಸ್ಥಳಕ್ಕೆ ತಿಕೋಟಾ ಪೊಲೀಸರು ದೌಡಾಯಿಸಿದ್ದಾರೆ.

