ಬೆಂಗಳೂರು: ಸಿಗ್ನಲ್ ಜಂಪ್, ಟ್ರಾಫಿಕ್ ನಿಯಮ ಉಲ್ಲಂಘಿಸುವುದರ ಜೊತೆಗೆ ಹೆಲ್ಮೆಟ್ (Helmet) ಧರಿಸದೇ ವಾಹನ ಓಡಿಸೋರೇ ಹೆಚ್ಚು.. ಅಂತಹವರಿಗೆ ಭಾರೀ ದಂಡದ ಬಿಸಿ ಮುಟ್ಟಿಸಲು ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಮುಂದಾಗಿದ್ದಾರೆ.
ಈ ಹಿಂದೆ ಹೆಲ್ಮೆಟ್ ನಿಯಮ ಉಲ್ಲಂಘಿಸಿ ಒಮ್ಮೆ ದಂಡ ಕಟ್ಟಿ ರಸೀದಿ ತೋರಿಸಿ ಮುಂದೋಗಬಹುದಿತ್ತು. ಆದ್ರೀಗ ಪ್ರತಿ ಸಿಗ್ನಲ್‌ನಲ್ಲೂ 500 ರೂಪಾಯಿಯಂತೆ ದಂಡ ವಿಧಿಸಲು ತೀರ್ಮಾನಿಸಿದ್ದಾರೆ. ಇದಕ್ಕಾಗಿ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ (ITMS) ತಂತ್ರಜ್ಞಾನ ಬಳಸಿಕೊಳ್ತಿದ್ದಾರೆ. ಇದನ್ನೂ ಓದಿ: ಯುವತಿ ಕೈಕೊಟ್ಟಳೆಂದು ಹಾಸನ ಯುವಕ ಆತ್ಮಹತ್ಯೆ – ಅವನು ಸತ್ರೆ ನಾನೂ ಸಾಯೋಕಾಗುತ್ತಾ ಅಂದ್ಳು ಸುಂದರಿ
Advertisement
Advertisement
ಬೆಂಗಳೂರಿನ (Bengaluru) ಎಲ್ಲ ಜಂಕ್ಷನ್‌ಗಳಲ್ಲೂ ಐಟಿಎಂಎಸ್ ಆಧಾರಿತ ಡಿಜಿಟಲ್ ಕ್ಯಾಮೆರಾ (Digital Camera) ಫಿಕ್ಸ್ ಮಾಡಲಾಗಿದೆ. ಈ ಐಟಿಎಂಎಸ್‌ನಿಂದಲೇ ಕಳೆದ ಒಂದೂವರೆ ತಿಂಗಳಲ್ಲಿ 9 ಲಕ್ಷಕ್ಕೂ ಹೆಚ್ಚು ಸಂಚಾರಿ ನಿಯಮ ಉಲ್ಲಂಘನೆ ಕೇಸ್‌ಗಳು ದಾಖಲಾಗಿವೆ. ಇದನ್ನೂ ಓದಿ: ಕ್ಯಾಲಿಫೋರ್ನಿಯಾದಲ್ಲಿ ಮತ್ತೆ ಗುಂಡಿನ ದಾಳಿ – 7 ಮಂದಿ ಸಾವು
Advertisement
Advertisement
ಏನಿದು ಇಂಟಲಿಜೆಂಟ್ ಸಿಸ್ಟಂ?
ಹೌದು, ಐಟಿಎಂಎಸ್ ಬೆಂಗಳೂರಲ್ಲಿ ಇತ್ತೀಚೆಗೆ ಜಾರಿಯಾದ ಸಿಸ್ಟಂ. ಐಟಿಎಂಎಸ್ ಅಂದ್ರೇ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ. ಡಿಜಿಟಲ್ ಕ್ಯಾಮರಾ ಮೂಲಕ ಟ್ರಾಫಿಕ್ ರೂಲ್ಸ್ ಉಲ್ಲಂಘನೆಗೆ ದಂಡ ಹಾಕೋ ವಿಧಾನ ಇದು. ಬೆಂಗಳೂರಿನ ಎಲ್ಲಾ ಜಂಕ್ಷನ್ ಗಳಲ್ಲೂ ಐಟಿಎಂಎಸ್ ವ್ಯವಸ್ಥೆ ಮಾಡಲಾಗುತ್ತಿದೆ.
ಒಬ್ಬ ರೈಡರ್ ಹೆಲ್ಮೆಟ್ ಹಾಕದೇ ಹತ್ತಾರು ಸಿಗ್ನಲ್ ದಾಟಿದ್ರೆ 10 ಸಾವಿರ ದಂಡ ಸಹ ಬೀಳಬಹುದು. ಐಟಿಎಂಎಸ್ ನಿಂದ ಕಳೆದ ಒಂದೂವರೆ ತಿಂಗಳಲ್ಲಿ ಕೇಸ್ ಸಂಖ್ಯೆ ಸಹ ದುಪ್ಪಟ್ಟಾಗಿದೆ. ಬರೋಬ್ಬರಿ 9 ಲಕ್ಷ ಟ್ರಾಫಿಕ್ ನಿಯಮ ಉಲ್ಲಂಘನೆ ಕೇಸ್ ದಾಖಲಿಸಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k