ಹಾಸನ: ಪ್ರೀತಿಸಿದ ಯುವತಿ ಮೋಸ ಮಾಡಿದಳು ಎಂದು ಮನನೊಂದ ಹಾಸನ ನಗರದ ಯುವಕ ಚೆನ್ನೈ ಲಾಡ್ಜ್‌ನಲ್ಲಿ (Chennai Lodge) ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.
ಹಾಸನ ನಗರದ (Hassan City) ಸಂಗಮೇಶ್ವರ ಬಡಾವಣೆಯ ಯುವಕ ಕಾರ್ತಿಕ್ (26) ಮೃತ ಯುವಕ. ಹಾಸನದ ಪ್ರತಿಷ್ಟಿತ ಹೋಟೆಲ್‌ನಲ್ಲಿ ರಿಸೆಪ್ಷನಿಷ್ಟ್ ಆಗಿ ಕೆಲಸ ಮಾಡುತ್ತಿದ್ದ ಕಾರ್ತಿಕ್‌ನನ್ನ ಹೊಳೆ ನರಸೀಪುರ ತಾಲೂಕಿನ ಮಳಲಿ ಗ್ರಾಮದ ಯುವತಿ ಪ್ರೇಮದ (Love) ಬಲೆಗೆ ಬೀಳಿಸಿದ್ದಳು. ಕಳೆದ 4 ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸಲು ಶುರು ಮಾಡಿದ್ದರು.
Advertisement
Advertisement
ಈ ನಡುವೆ ಯುವತಿ ಅವನಿಂದ ಸಾಕಷ್ಟು ಹಣ ಪೀಕಿದ್ದಳು. ಇದೀಗ 4 ವರ್ಷದ ಪ್ರೀತಿ ನಿರಾಕರಿಸಿ, ಮೋಸ ಮಾಡಿದ ಹಿನ್ನೆಲೆಯಲ್ಲಿ ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಯುವಕನ ಕುಟುಂಬಸ್ಥರು ಹಾಗೂ ಸಂಬಂಧಿಕರ ಆರೋಪವಾಗಿದೆ. ಇದನ್ನೂ ಓದಿ: ಜೀನ್ಸ್ ಪ್ಯಾಂಟನ್ನೇ ಟಾಪ್ ಮಾಡಿಕೊಂಡ ಉರ್ಫಿ ಜಾವೇದ್ ಕಾಲೆಳೆದ ನೆಟ್ಟಿಗರು
Advertisement
ಇದೇ ತಿಂಗಳ ಜ.26 ರಂದು ತಾನು ಚೆನ್ನೈನಲ್ಲಿದ್ದು ನೀನೂ ಅಲ್ಲಿಗೆ ಬಾ ಎಂದು ಯುವತಿ ಕರೆದಿದ್ದಾಳೆ ಎನ್ನಲಾಗಿದೆ. ಆಕೆಯ ಮಾತು ನಂಬಿ ಕಾರ್ತಿಕ್ ತಕ್ಷಣ ಚೆನ್ನೈಗೆ (Chennai) ಹೋಗಿದ್ದಾನೆ. ಅಲ್ಲಿಗೆ ಹೋಗಿ ಕರೆ ಮಾಡಿದ ನಂತರ ತಾನು ಹಾಸನದಲ್ಲೇ ಇರುವುದಾಗಿ ಹೇಳಿ ಯುವತಿ ಯಾಮಾರಿಸಿದ್ದಾಳೆ. ಈ ವರ್ತನೆಯಿಂದ ಮನನೊಂದ ಕಾರ್ತಿಕ್, ಆಕೆ ನನಗೆ ಮೋಸ ಮಾಡುತ್ತಿದ್ದಾಳೆ ಎಂದು ತಿಳಿದು ಲಾಡ್ಜ್ನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Advertisement
ಚೆನ್ನೈ ಆರಂಬಕ್ಕಮ್ ಪೊಲೀಸ್ ಠಾಣೆ (Chennai Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮಂಗಳವಾರ ಹಾಸನ ನಗರಕ್ಕೆ ತರಲಾಗಿದೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ – ವಿಷ ಸೇವಿಸಿ ಟೆಕ್ಕಿ ಗೃಹಿಣಿ ಆತ್ಮಹತ್ಯೆ
ಕಾರ್ತಿಕ್ ಮನೆಗೆ ಯುವತಿ ಅನೇಕ ಸಲ ಬಂದು ಹೋಗುತ್ತಿದ್ದಳು. ಈ ವೇಳೆ ಮದುವೆ ಬಗ್ಗೆ ಪ್ರಸ್ತಾಪ ಕೂಡ ಮಾಡಲಾಗಿತ್ತು. ಆಕೆಯೂ ಮದುವೆಗೆ ಒಪ್ಪಿದ್ದಳು ಎನ್ನಲಾಗಿದೆ. ಆದರೆ ಕೆಲ ದಿನಗಳಿಂದ ಇಬ್ಬರ ನಡುವೆ ಸಣ್ಣ ಮನಸ್ತಾಪ ಇತ್ತು. ಆಕೆ ಕಾರ್ತಿಕ್ ಪ್ರೀತಿಯನ್ನು ನಿರಾಕರಿಸಲು ಮುಂದಾಗಿದ್ದಳು. ಆದರೂ ಆಕೆ ಹೇಳಿದಂತೆ ಕೇಳುತ್ತಿದ್ದ ಕಾರ್ತಿಕ್, ಇದೇ ಕಾರಣದಿಂದ ಚೆನ್ನೈಗೂ ಹೋಗಿದ್ದ. ಆದರೆ ಆಕೆ ಸಿಗದ ಕಾರಣ ಒಂದು ದಿನಕ್ಕೆ ಬಾಡಿಗೆ ಪಡೆದಿದ್ದ ರೂಮ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಾರ್ತಿಕ್ ಸಂಬಂಧಿಕರು ಯುವತಿಗೆ ಕಾಲ್ ಮಾಡಿ ಘಟನೆ ಬಗ್ಗೆ ಕೇಳಿದರೆ, ಆಕೆ ಚೆನ್ನೈಗೆ ಬರಲು ನಾನೇ ಹೇಳಿದ್ದೆ. ಆಗ ಕರೆ ಮಾಡಿ ನಾನು ಸತ್ತು ಹೋಗುತ್ತೇನೆ ಎಂದು ಹೇಳಿದ್ದ. ಅವನು ಸತ್ತರೆ ನಾನೂ ಸಾಯುವುದಕ್ಕೆ ಆಗುತ್ತಾ ಎಂದು ಉಡಾಫೆಯ ಉತ್ತರ ನೀಡಿದ್ದಾಳೆ. ಅಲ್ಲದೇ ಸಾವಿಗೆ ಕಾರಣ ಏನು ಎಂಬುದು ಗೊತ್ತಾಗಬೇಕೆಂದು ಕಾರ್ತಿಕ್ ವಿರುದ್ಧವೇ ದೂರು ನೀಡಿದ್ದಾಳೆ. ಇದರಿಂದ ಸಂಬಂಧಿಕರು ಯುವತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k