ಬೀದರ್: ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆ ಬರೆಯಲು ಅವಕಾಶ ಕೊಡದ ಕಾಲೇಜು ಸಿಬ್ಬಂದಿ, ನೀನು ಜನಿವಾರದಿಂದ ನೇಣು ಹಾಕಿಕೊಂಡರೆ ಏನು ಮಾಡೋದು ಎಂದು ವಿದ್ಯಾರ್ಥಿಗೆ ಉಡಾಫೆಯಾಗಿ ಪ್ರಶ್ನಿಸಿದ್ದಾರೆ.
ಗುರುವಾರ ಬೀದರ್‌ನ (Bidar) ಸಾಯಿ ಸ್ಪೂರ್ತಿ ಕಾಲೇಜಿನಲ್ಲಿ ಸುಚ್ಚಿವೃತ್ ಎಂಬ ವಿದ್ಯಾರ್ಥಿ ಸಿಇಟಿ ಪರೀಕ್ಷೆ ಬರೆಯಲು ಹೋಗಿದ್ದಾಗ ಈ ಅಮಾನವೀಯ ಘಟನೆ ನಡೆದಿದೆ. ಜನಿವಾರ ಹಾಕಿದ್ದಕ್ಕೆ ಸಿಇಟಿ (CET) ಪರೀಕ್ಷೆ ಬರೆಯಲು ಅವಕಾಶ ಕೊಡದೇ ಕಾಲೇಜು ಸಿಬ್ಬಂದಿಗಳು ಒರಟಾಗಿ ನಡೆದುಕೊಂಡಿದ್ದಾರೆ.ಇದನ್ನೂ ಓದಿ: ಮಂಗಳೂರು, ಬೆಂಗಳೂರಲ್ಲಿ ಅದ್ದೂರಿ ಪಸ್ಕ ಹಬ್ಬ ಆಚರಣೆ – ಮಂಜೂಷ ಪೆಟ್ಟಿಗೆ ಸ್ಥಾಪನೆ
ಎಂಜಿನಿಯರಿಂಗ್ ಮಾಡಬೇಕೆಂದು ಕನಸು ಕಂಡಿದ್ದ ವಿದ್ಯಾರ್ಥಿಯ ಕನಸು ನುಚ್ಚು ನೂರಾಗಿದೆ. ಸಿಬ್ಬಂದಿಗಳಿಗೆ ಇದೆಂಥಾ ನ್ಯಾಯ ಸರ್ ಎಂದಿದ್ದಕ್ಕೆ, ಒಳಗಡೆ ನೀನು ನೇಣು ಹಾಕಿಕೊಂಡರೆ ಏನು ಮಾಡೋದು? ಎಂದು ಉಡಾಫೆಯಾಗಿ ಮಾತನಾಡಿದ್ದಾರೆ. ಎರಡು ಎಕ್ಸಾಂಗೆ ಅವಕಾಶ ನೀಡಿ, ಗಣಿತ ಪರೀಕ್ಷೆಯಲ್ಲಿ ಮಾತ್ರ ಜನಿವಾರ ತೆಗೆದು ಒಳಗಡೆ ಬಾ ಎಂದಿದ್ದು ಅನ್ಯಾಯ ಎಂದು ವಿದ್ಯಾರ್ಥಿ ಅಳಲು ತೋಡಿಕೊಂಡಿದ್ದಾನೆ.
ನಾನು ತೆಗೆಯೋದಕ್ಕೆ ಆಗಲ್ಲ ಅಂದಿದ್ದಕ್ಕೆ, ಹಾಗಾದ್ರೆ ನಾವು ಒಳಗೆ ಬಿಡಲ್ಲ ಎಂದು ಹೇಳಿದರು. ನೀನು ಒಳಗಡೆ ಹೋಗಿ ಸೂಸೈಡ್ ಮಾಡಿಕೊಂಡರೆ ಹೇಗೆ? ಎಂದು ವಾಪಸ್ ಕಳಿಸಿದ್ದಾರೆ. ನನ್ನ ಒಂದು ವರ್ಷದ ಜೀವನ ಹಾಳಾಗಿದ್ದು, ಇದರಿಂದ ನನಗೆ ಹಾಗೂ ನನ್ನ ಪೋಷಕರಿಗೆ ದುಃಖವಾಗಿದೆ. ನಮಗೆ ನ್ಯಾಯಬೇಕು ಎಂದು ವಿದ್ಯಾರ್ಥಿ ಹಾಗೂ ಪೋಷಕರು ಬೇಸರ ವ್ಯಕ್ತಪಡಿಸಿದರು.ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಮೆಜೆಸ್ಟಿಕ್ 2’ ನಾಯಕಿ ಸಂಹಿತಾ ವಿನ್ಯಾ