ಮೈಸೂರು: ಕೊಡಗಿಗೆ ಹೋಗಿ ಅಲ್ಲಿನ ಜನರಲ್ಲಿ ಇಲ್ಲಿಯ ಮೋಸ್ಟ್ ಪಾಪ್ಯುಲರ್ ಪೊಲಿಟೀಶಿಯನ್ ಯಾರು ಅಂತಾ ಕೇಳಿ ಆಗ ನಿಮಗೆ ಅಲ್ಲಿಂದಲೇ ಉತ್ತರ ಸಿಗುತ್ತೆ ಅಂತ ಸಂಸದ ಪ್ರತಾಪ್ ಸಿಂಹ ಅವರು ಹೇಳಿದ್ದಾರೆ.
ಇತ್ತೀಚೆಗೆ ಕೊಡಗಿನಲ್ಲಿ ಬಿಜೆಪಿ ಮುಖಂಡ ಎಂ.ಬಿ ದೇವಯ್ಯ ಅವರು ಸಂಸದರ ವಿರುದ್ಧ ಹರಿಹಾಯ್ದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನೆರೆ ಪ್ರವಾಹ ಹಾಗೂ ಭೂಕುಸಿತವಾದ ಬಳಿಕ ಮಡಿಕೇರಿಯಲ್ಲಿ ಪ್ರತೀ ದಿನ ಕುಳಿತುಕೊಂಡು, ಪ್ರತೀ ದಿನ ಆಯಾ ಪ್ರದೇಶಗಳಿಗೆ ಹೋಗಿ ಕೆಲಸ ಮಾಡಿರುವಂತದ್ದು ಕೇಂದ್ರದ ರಕ್ಷಣಾ ಕಾತೆ ಸಚಿವರನ್ನು ಕರೆದುಕೊಂಡು ಬಂದಿದ್ದು, ಈ ಎಲ್ಲವೂ ಕೂಡ ಕೊಡಗಿನ ಜನಕ್ಕೆ ಗೊತ್ತು. ಅಲ್ಲಿನ ಜನರಿಗೋಸ್ಕರ ಏನ್ ಕೆಲಸ ಮಾಡಿದ್ದೇನೆಂದು ಗೊತ್ತು ಅಂತ ತಿಳಿಸಿದ್ರು.
Advertisement
Advertisement
ಕೊಡಗಿನಲ್ಲಿ ಮೋಸ್ಟ್ ಪಾಪ್ಯುಲರ್ ಪೊಲಿಟೀಶಿಯನ್ ಯಾರು ಅಂತಾ ಕೇಳಿ ಆಗ ನಿಮಗೆ ಅಲ್ಲಿಂದಲೇ ಉತ್ತರ ಸಿಗುತ್ತೆ. ಯಾಕಂದ್ರೆ ಅಷ್ಟು ನಾನು ಕೊಡಗಿನ ಜನರ ಜೊತೆ ಇದ್ದೇನೆ. ಟಿಪ್ಪು ಜಯಂತಿ ಇದ್ದಾಗಲೂ ವಿರೋಧಿಸಿದವನೂ ನಾನೇ. ಅವತ್ತೂ ಕೂಡ ನಾನು ಪ್ರಬಲವಾದ ಹೋರಾಟ ಮಾಡಿದ್ದೆ. ಇಷ್ಟು ಮಾತ್ರವಲ್ಲದೇ ಕೊಡಗಿನಲ್ಲಿ ಆಕ್ರಮಣಗಳಾದಗಲೂ ಮುಂದೆ ನಿಂತಿದ್ದೆ. ಈ ಎಲ್ಲಾ ಕಾರಣಗಳಿಂದ ಕೊಡಗಿನ ಜನಕ್ಕೆ ನಾನು ಏನ್ ಅನ್ನೋದು ಚೆನ್ನಾಗಿ ಗೊತ್ತಿದೆ. ಹೀಗಾಗಿ ಅಪ್ರಸ್ತುತ ವ್ಯಕ್ತಿಗಳ ವ್ಯರ್ಥ ಆಲಾಪಗಳಿಗೆ ನಾನು ಉತ್ತರಿಸಲ್ಲ ಅಂತ ಅವರು ಹೇಳಿದ್ರು.
Advertisement
ಇದೇ ವೇಳೆ ಮೈಸೂರಿನಲ್ಲಿ ಬಿಜೆಪಿಯವರು ಆಪರೇಷನ್ ಕಮಲ ಮಾಡ್ತಿದ್ದಾರೆ ಅನ್ನೋ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ನರಸಿಂಹರಾವ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಛಾದ ಸಂಸದರಿಗೆ ಸೂಟ್ ಕೇಸ್ ಕೊಟ್ಟು ಖರೀದಿ ಮಾಡಿದ ಹಿನ್ನೆಲೆ ಕಾಂಗ್ರೆಸ್‍ನದ್ದಾಗಿದೆ ಎಂದು ತಿರುಗೇಟು ಕೊಟ್ಟರು.
Advertisement
2008ರಲ್ಲಿ ಅಮೆರಿಕದ ಜೊತೆ ನಾಗರಿಕ ಅಣು ಒಪ್ಪಂದ ಸಹಿ ಹಾಕಿದ ಸಂದರ್ಭದಲ್ಲಿ ಎಡ ಪಕ್ಷಗಳು ಸರ್ಕಾರಕ್ಕೆ ನೀಡಿದದ್ದ ಬೆಂಬಲ ವಾಪಸ್ ಪಡೆದಾಗ ನಮ್ಮ ಪಕ್ಷದಲ್ಲೇ ಇದ್ದಂತಹ ಉಡುಪಿಯ ಸಂಸದರಿಗೆ ಚಾಮರಾಜನಗರದಲ್ಲಿರುವಂತಹ ಜೆಡಿಎಸ್ ನ ಸಂಸದರಿಗೆ, ಬಿಜೆಪಿಯ ಉತ್ತರದ ಸಂಸದರಿಗೆ ಸೂಟ್ ಕೇಸ್ ಕೊಟ್ಟು ಖರೀದಿ ಮಾಡಿ ಇಡೀ ದೇಶದಲ್ಲಿ ಕೆಟ್ಟ ಚಾಳಿಯನ್ನು ಆರಂಭ ಮಾಡಿದ್ದೇ ಕಾಂಗ್ರೆಸ್ ಅಂತ ಅವರು ಗಂಭೀರವಾಗಿ ಆರೋಪಿಸುವ ಮೂಲಕ ತಿರುಗೇಟು ನೀಡಿದರು.
ಕಾಂಗ್ರೆಸ್ ಪಕ್ಷದ ಶಾಸಕರೇ ದುರ್ಬಲ ಮನಸ್ಥಿತಿಯನ್ನು ಹೊಂದಿದ್ದಾರೆ ಎಂಬ ಭಾವನೆ ಹಾಗೂ ಭಯ ಅವರನ್ನು ಕಾಡುತ್ತಿದೆ. ಹೀಗಾಗಿ ಅವರು ಈ ರೀತಿ ವಿನಾಕಾರಣವಾದ ಆರೋಪಗಳನ್ನು ಮಾಡುತ್ತಿದ್ದಾರೆ ಅಂತ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=bxDEU8M2bRY