ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha Elections 2024) ಮೈಸೂರು-ಕೊಡಗು (Mysuru-Kodagu) ಕ್ಷೇತ್ರದ ಟಿಕೆಟ್ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರಿಗೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ಯದುವೀರ್ ಸ್ಪರ್ಧೆಯಿಂದ ಕಾಂಗ್ರೆಸ್‌ಗೆ ಲಾಭವೇ ಅಥವಾ ನಷ್ಟವೇ ಎಂಬ ಚರ್ಚೆಯೂ ನಡೆಯುತ್ತಿದೆ.
ಯದುವೀರ್ ಮುಂದಿರುವ ಸವಾಲುಗಳೇನು?
ಮೈತ್ರಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದೇ ರಾಜವಂಶಸ್ಥ ಯದುವೀರ್‌ಗೆ ಪ್ರಮುಖ ಸವಾಲಿನ ಕೆಲಸವಾಗಿದೆ. ಜೆಡಿಎಸ್-ಬಿಜೆಪಿ ನಾಯಕರನ್ನ ಒಟ್ಟಿಗೆ ತೆಗೆದುಕೊಂಡು ಹೋಗುತ್ತಾರೆಯೇ ಎಂಬುದು ಪ್ರಶ್ನೆಯಾಗಿದೆ. ಹಾಲಿ ಸಂಸದ ಪ್ರತಾಪ್ ಸಿಂಹ ಜೆಡಿಎಸ್ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ರಾಜಕಾರಣದ ಟೀಕೆಗಳನ್ನು ಎದುರಿಸಿ, ಬಿಜೆಪಿ ಕಾರ್ಯಕರ್ತರನ್ನ ಯದುವೀರ್ ಮನವೊಲಿಸುತ್ತಾರೆಯೇ ಎಂಬುದು ಪ್ರಶ್ನೆಯಾಗಿದೆ. ಇದನ್ನೂ ಓದಿ: ನನ್ನ ಜೀವ ಇರುವವರೆಗೂ ನಾನು ಮೋದಿ ಭಕ್ತ: ಪ್ರತಾಪ್ ಸಿಂಹ
Advertisement
Advertisement
ಯದುವೀರ್ ಸ್ಪರ್ಧೆಯಿಂದ ಕಾಂಗ್ರೆಸ್‌ಗೆ ಲಾಭನಾ? ನಷ್ಟನಾ?
ಯದುವೀರ್ ರಾಜ ಮನೆತನದಿಂದ ಬಂದವರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ದತ್ತು ಪುತ್ರ. ಹಳೇ ಮೈಸೂರು ಅಭಿವೃದ್ಧಿಗೆ ತನ್ನದೆ ಆದ ಕೊಡುಗೆ ನೀಡಿರುವ ಮೈಸೂರು ರಾಜ ಮನೆತನ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ತಂದೆ ಮಾಡಿರುವ ಕೆಲಸಗಳ ಮೇಲೆ ಯದುವೀರ್‌ಗೆ ಶ್ರೀರಕ್ಷೆಯಾಗಬಹುದು. ಯದುವೀರ್ ಕ್ಲೀನ್ ಇಮೇಜ್ ಹೊಂದಿರುವ ವ್ಯಕ್ತಿ. ಕಾಂಗ್ರೆಸ್ ಏನೇ ಟೀಕೆಗಳನ್ನ ಮಾಡಿದರೂ ಜನರಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆ ತೀರಾ ಕಡಿಮೆ. ಅತ್ಯಂತ ಸೂಕ್ಷ್ಮವಾಗಿ ಚುನಾವಣೆ ಎದುರಿಸಬೇಕಾದ ಅನಿರ್ವಾಯ ಕಾಂಗ್ರೆಸ್‌ಗೆ ಇದೆ.
Advertisement
Advertisement
ಕಾಂಗ್ರೆಸ್ ಆಗುವ ಲಾಭ!
ಯದುವೀರ್‌ಗೆ ಒಳೇಟು ಬೀಳುವ ಸಾಧ್ಯತೆ ಇದೆ. ಬಿಜೆಪಿ ಕಾರ್ಯಕರ್ತರು ಹಾಗೂ ಮೈಸೂರಿನ ಜನತೆಗೆ ಈಗಾಗಲೇ ಪ್ರತಾಪ್ ಸಿಂಹ ಪರ ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಮಾಡುತ್ತಿದ್ದಾರೆ. ಯದುವೀರ್ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರಬೇಡಿ ಎಂದು ಕ್ಯಾಂಪೇನ್ ಮಾಡಲಾಗುತ್ತಿದೆ. ಇದನ್ನೂ ಓದಿ: ಪ್ರತಾಪ್ ಸಿಂಹ, ಯದುವೀರ್ ಜೊತೆಗೆ ಮೂರನೇ ಎಂಟ್ರಿಗೆ ಬಿಜೆಪಿ ಹೈಕಮಾಂಡ್ ಸರ್ವೇ!