ಶಿವಮೊಗ್ಗ: ಮುಖ್ಯಮಂತ್ರಿಗಳನ್ನು ಭೇಟಿಯಾಗಿ ರಾಜೀನಾಮೆ ನೀಡಲು ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿರುವ ಸಚಿವ ಕೆ.ಎಸ್.ಈಶ್ವರಪ್ಪ ಇದೀಗ ಆರೋಪದಿಂದ ವಿಮುಕ್ತರಾಗಲು ಮನೆದೇವರ ಮೊರೆಹೋಗಿದ್ದಾರೆ.
ರಾಜೀನಾಮೆ ನೀಡಲು ಶಿವಮೊಗ್ಗದಿಂದ ತೆರಳುವುದಕ್ಕೂ ಮುನ್ನವೇ ಮನೆದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ನಮ್ಮ ಮನೆ ದೇವರು ಮಲ್ಲೇಶ್ವರ ಹಾಗೂ ಚೌಡೇಶ್ವರಿಯಲ್ಲಿ ಪ್ರಾರ್ಥನೆ ಮಾಡ್ತೇನೆ. ನಾನು ತಪ್ಪು ಮಾಡಿದ್ದರೆ ಶಿಕ್ಷಿಸು, ಇಲ್ಲವೇ ನಿರಪರಾಧಿಯಾಗಿ ಹೊರ ಬರುವಂತೆ ಮಾಡೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆಗೂ ಮುನ್ನ 29 PDOಗಳ ಟ್ರಾನ್ಸ್‌ಫರ್
Advertisement
Advertisement
ಜೀವನದಲ್ಲಿ ವ್ಯಕ್ತಿಗಳಿಗೆ ಪರೀಕ್ಷೆಗಳು ಎದುರಾಗುತ್ತವೆ. ಈ ಹಿಂದೆ ಇಂಧನ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ. ಇವತ್ತು ನನ್ನ ವಿರುದ್ಧ ಆರೋಪ ಕೇಳಿ ಬಂದಿದೆ. ಹೆಣ್ಣುಮಕ್ಕಳು ಅಳುತ್ತಾ ಕಳುಹಿಸಬಾರದು. ಸಂತೋಷವಾಗಿ ಕಳುಹಿಸಿಕೊಡಬೇಕು ಎಂದು ಮಹಿಳಾ ಕಾರ್ಯಕರ್ತೆಯರಿಗೆ ಸಚಿವ ಕೆ.ಎಸ್.ಈಶ್ವರಪ್ಪ ಬುದ್ದಿಮಾತು ಹೇಳಿದರು.
Advertisement
ರಾಜ್ಯದಾದ್ಯಂತ ಅನೇಕರು ನನಗೆ ದೂರವಾಣಿ ಕರೆ ಮಾಡಿ, ನಿಮ್ಮ ಮೇಲೆ ಏಕೆ ಆರೋಪ? ಎಂದು ಕೇಳುತ್ತಿದ್ದಾರೆ. ಮನೆಗೆ ಬಂದು ಧೈರ್ಯ ತುಂಬುತ್ತಿದ್ದಾರೆ. ಹೋದ ಕಡೆ, ಬಂದ ಕಡೆ ಪ್ರಸಾದ ಕೊಡ್ತಿದ್ದಾರೆ. ಹಾಗಾಗಿ ಈ ಘಟನೆಯಿಂದಾಗಿ ಸಂಘಟನೆಯಲ್ಲಿ ತೊಡಗಲು ಹೆಚ್ಚಿನ ಶಕ್ತಿ ನೀಡಿದಂತಾಗಿದೆ. ಅಳುತ್ತಾ ಕಳುಹಿಸುವುದಾದರೆ ನಾನು ಹೊಗೋದೇ ಇಲ್ಲ. ಹೆಣ್ಣುಮಕ್ಕಳು ಸಂತೋಷದಿAದ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಈಶ್ವರಪ್ಪನವರನ್ನು ಬಂಧಿಸಿ ಅನ್ನೋರಿಗೆ ನಾಚಿಕೆಯಾಗ್ಬೇಕು: ರೇಣುಕಾಚಾರ್ಯ
Advertisement
ಮೂರು ದಿನಗಳ ಹಿಂದೆಯೇ ರಾಜೀನಾಮೆ ನೀಡಬೇಕೆಂದುಕೊಂಡಿದ್ದೆ. ಆದರೆ ಕೊಡಬೇಡ ಅಂತ ಹಿರಿಯರು ಹೇಳಿದ್ದರು. ಅದಕ್ಕಾಗಿ ಕೊಡದಿರಲು ನಿರ್ಧರಿಸಿದ್ದೆ. ನಿನ್ನೆ ರಾಜೀನಾಮೆ ಕೊಡು ಅಂದ್ರು ಅದಕ್ಕೆ ಕೊಡಲು ಮುಂದಾದೆ. ತನಿಖೆಯ ನಂತರ ನಿರಪರಾಧಿಯಾಗಿ ಹೊರಬರುವ ವಿಶ್ವಾಸವಿದೆ ಎಂದರು.
ನನ್ನ ಜೀವ ಇರುವವರೆಗೂ ಈ ಸಂಘಟನೆ ಮೂಲಕ ಇನ್ನೂ ಹೆಚ್ಚಿನ ಕೆಲಸ ಮಾಡುತ್ತೇನೆ. ನಾವೆಲ್ಲರೂ ಬಡವರು, ದೀನದಲಿತರ ಪರ ಕೆಲಸ ಮಾಡೋಣ. ಹಿಂದೂಗಳ ಮೇಲಿನ ಸಂಘರ್ಷದ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವವರಿಗೆ ಸರಿಯಾದ ಉತ್ತರ ಕೊಡೋಣ ಎಂದು ಕರೆ ನೀಡಿದರು.
ಇದೇ ವೇಳೆ ಈಶ್ವರಪ್ಪ ಮಹಾರಾಜ್ ಕೀ ಜೈ ಎಂಬ ಘೋಷಣೆಗಳು ಮೊಳಗಿದವು.