ದಾವಣಗೆರೆ: ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಕುರ್ಚಿ ಕದನ ಜೋರಾಗಿದೆ. ಇದೀಗ ಲಿಂಗಾಯತರಿಗೆ 70 ಸೀಟ್‍ಗೆ ಡಿಮ್ಯಾಂಡ್ ಮಾಡಲಾಗುತ್ತಿದ್ದು, 60 ರಿಂದ 70 ಸೀಟ್ ಬಂದರೆ ಲಿಂಗಾಯತರು ಮುಖ್ಯಮಂತ್ರಿ ಆಗ್ತಾರೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಸ್ಫೋಟಕ ಹೇಳಿಕೆ ನೀಡಿದ್ದಾರೆ.
Advertisement
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ (Congress) ನಲ್ಲಿ ಲಿಂಗಾಯತರಿಗೆ 70 ಜನರಿಗೆ ಸೀಟ್ ಕೊಡಲು ಕೇಳಿದ್ದೇವೆ. ರಾಜ್ಯದಲ್ಲಿ 60 ರಿಂದ 70 ಸೀಟ್ ಬಂದರೆ ಲಿಂಗಾಯತರು ಮುಖ್ಯಮಂತ್ರಿ ಆಗ್ತಾರೆ. ಲಿಂಗಾಯತರು 60 ರಿಂದ 70 ಸೀಟ್ ಗೆಲ್ಲುತ್ತಾರೆ. ಅದರಲ್ಲಿ ಮೆಜಾರಿಟಿ ಯಾರದ್ದು ಬರುತ್ತೋ ಅವರು ಸಿಎಂ ನನ್ನು ಆಯ್ಕೆ ಮಾಡುತ್ತಾರೆ. ಅವರಿಗೆ ಬೇಕಾದವರು ಸಿಎಂ ಎಂದು ಘೋಷಣೆ ಮಾಡಿಕೊಳ್ಳುತ್ತಾರೆ ಎಂದರು. ಇದನ್ನೂ ಓದಿ: ಕೊಂಕಣಿ ಭಾಷಿಗರೇ ಶಾಸಕರಾಗಿರುವ ಮಂಗಳೂರು ದಕ್ಷಿಣದಲ್ಲಿ ಈ ಬಾರಿ ಗೆಲ್ಲೋದ್ಯಾರು?
Advertisement
Advertisement
ಸಿಎಂ ಯಾರು ಎಂದು ಹೈಕಮಾಂಡ್ ತೀರ್ಮಾನ ಮಾಡ್ತಾರೆ. ನಾನು ರಾಷ್ಟ್ರೀಯ ಅದ್ಯಕ್ಷ ಎಲ್ಲಾ ಲಿಂಗಾಯತರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು. ಜಾಸ್ತಿ ಜನ ಗೆದ್ದು ಬಂದರೆ ಲಿಂಗಾಯತರು ಮುಖ್ಯಮಂತ್ರಿ ಆಗುತ್ತಾರೆ. ಲಿಂಗಾಯತರಲ್ಲಿ, ಎಂಬಿ ಪಾಟೀಲ್, ಖಂಡ್ರೆ, ಎಸ್ ಎಸ್ ಮಲ್ಲಿಕಾರ್ಜುನ್ ಕೂಡ ರೇಸ್ ನಲ್ಲಿ ಇದ್ದಾರೆ ಎಂದು ಶಾಸಕರು ತಿಳಿಸಿದರು.