ಪಾಟ್ನಾ: ನಾವು ಭಾರತವನ್ನು ಅಭಿವೃದ್ಧಿಪಡಿಸಬೇಕಾದ್ರೆ, ಪೂರ್ವ ಭಾರತವನ್ನು (East India) ಅಭಿವೃದ್ಧಿಪಡಿಸಬೇಕು ಎಂದು ಪ್ರಧಾನಿ ಮೋದಿ (PM Modi) ಹೇಳಿದ್ದಾರೆ.
ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ಅವರೊಂದಿಗೆ ಚುನಾವಣಾ ರ‍್ಯಾಲಿಯಲ್ಲಿ (Bihar Campaigning) ಭಾವಹಿಸಿದ್ದ ಪ್ರಧಾನಿ ಮೋದಿ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಹಲವು ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಬಾರಿ ಪೂರ್ವ ಭಾರತದಲ್ಲಿ ಬಿಜೆಪಿ ತನ್ನ ಹೆಜ್ಜೆಗುರುತನ್ನು ಅಗಾಧವಾಗಿ ವಿಸ್ತರಿಸಲಿದೆ. ಇದು ಎನ್‌ಡಿಎ (NDA) 400 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಸುಲಭವಾಗಿಸುತ್ತದೆ ಎಂದು ಹೇಳಿದ್ದಾರೆ.
Advertisement
ব্যারাকপুর হল, জুট শিল্পের হাব, কিন্তু জুটের এই ভূমিতে তৃণমূল কংগ্রেস শুধু ঝুট বলে চলেছে। pic.twitter.com/e42RaTL51L
— Narendra Modi (@narendramodi) May 12, 2024
Advertisement
2013ರಲ್ಲಿ ನಾನು ಮಾಡಿದ ಭಾಷಣ ಕೇಳಿ, ಆಗಲೇ ನಾನು ಭಾರತದ ಅಭಿವೃದ್ಧಿಯ ಬಗ್ಗೆ ಪ್ರಸ್ತಾಪಿಸಿದ್ದೆ. ನಾವು ಭಾರತವನ್ನು ಅಭಿವೃದ್ಧಿಪಡಿಸಬೇಕಾದ್ರೆ ಈಸ್ಟ್ ಇಂಡಿಯಾ (ಪೂರ್ವ ಭಾರತ)ವನ್ನು ಅಭಿವೃದ್ಧಿಯ ಎಂಜಿನ್ ಆಗಿ ಮಾಡಬೇಕು ಎಂದು ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ. ಅದಕ್ಕಾಗಿ ಮೂಲ ಸೌಕರ್ಯಗಳು, ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿ ಮೇಲೆ ಕೇಂದ್ರೀಕರಿಸಿದ್ದೇವೆ. ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆಗಳು ಬಿಜೆಪಿ ಗೆಲುವನ್ನು ಪ್ರತಿಬಿಂಬಿಸುತ್ತಿವೆ. ನಮ್ಮ ಸರ್ಕಾರದ ಸಾಧನೆಯನ್ನು ಒತ್ತಿ ಹೇಳುತ್ತಿವೆ ಎಂದು ತಿಳಿಸಿದ್ದಾರೆ.
Advertisement
Advertisement
ಈ ಬಾರಿ ಬಿಹಾರದಲ್ಲಿ ಬಿಜೆಪಿ 17 ಸ್ಥಾನ, ಮಿತ್ರ ಪಕ್ಷ ಜೆಡಿಯು (ಜನತಾ ದಳ ಯುನೈಟೆಡ್) 16 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ತೆಲಂಗಾಣ, ಒಡಿಶಾ, ಬಂಗಾಳ, ಬಿಹಾರ ಜಾರ್ಖಂಡ್, ಅಸ್ಸಾಂನಲ್ಲಿ ಬಿಜೆಪಿ ಗೆಲುವು ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲಿ ಸಿಕ್ಕ ಪೆನ್‌ಡ್ರೈವ್ ಎ.ಮಂಜುಗೆ ಕೊಟ್ಟಿದ್ದೆ; ಬಾಂಬ್ ಸಿಡಿಸಿದ ಆರೋಪಿ ನವೀನ್‌ಗೌಡ!
ಬಿಜೆಪಿ ಈ ದೇಶಕ್ಕೆ ಮಾದರಿ ಆಡಳಿತವನ್ನು ನೀಡಿದೆ. ಈ ಹಿಂದೆ ಕಾಂಗ್ರೆಸ್, ಸಮ್ಮಿಶ್ರ ಸರ್ಕಾರ ಆಡಳಿತವನ್ನು ನೋಡಿದೆ. ಜೊತೆಗೆ ಅಪಾಯವನ್ನು ಎದುರಿಸುವ ಸರ್ಕಾರವನ್ನೂ ನೋಡಿದೆ. ಆದ್ರೆ ನಮ್ಮ ಪಕ್ಷ ಮಾದರಿ ಆಡಳಿತವನ್ನು ನೀಡಿದ ಅದರ ಆಧಾರದಲ್ಲೇ ನಾವು ಮುಂದುವರಿಯುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿ ಈ ಬಾರಿ ಕನಿಷ್ಠ 370 – 400 ಸ್ಥಾನಗಳನ್ನ ಗೆಲ್ಲುವ ಗುರಿ ಹೊಂದಿದೆ. ಕರ್ನಾಟಕ ಹೊರತುಪಡಿಸಿ ದಕ್ಷಿಣದ ರಾಜ್ಯಗಳು ಮತ್ತು ಬಂಗಾಳ ಮತ್ತು ಒಡಿಶಾದಂತಹ ಪೂರ್ವ ರಾಜ್ಯಗಳು ಹಿಂದಿನಿಂದಲೂ ಬಿಜೆಪಿಯ ಗುರಿಯಾಗಿದೆ. ಅದಕ್ಕೆ ತಕ್ಕಂತೆ ನಮ್ಮ ಮಿತ್ರಪಕ್ಷಗಳು ತಮ್ಮ ಪ್ರಾಬಲ್ಯವನ್ನು ವಿಸ್ತರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್‌ಗೆ ಹುಚ್ಚು, ಬಿಜೆಪಿಯಲ್ಲಿ ವಯಸ್ಸಿನ ಮಿತಿ ಬಗ್ಗೆ ನಿರ್ಧಾರ ಕೈಗೊಂಡಿಲ್ಲ: ಆರ್.ಅಶೋಕ್