ಟೆಹ್ರಾನ್/ನವದೆಹಲಿ: ಅಮೆರಿಕ ಇಸ್ರೇಲ್ ಜಂಟಿ ದಾಳಿಯ (US Israel Strikes) ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿದೆ. ಇರಾನ್ ಪ್ರತಿದಾಳಿಯ ಆಟ ಮುಂದುವರಿಸಿದೆ. ಇಸ್ರೇಲ್‌ನ ಜೊತೆಗೆ ಇತರೆ ಮುಸ್ಲಿಂ ದೇಶಗಳಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನ ಧ್ವಂಸ ಮಾಡುತ್ತಿದೆ.
ಇರಾನ್‌ಗೆ (Iran) ಮಧ್ಯಂತರ ಸುಪ್ರೀಂ ನಾಯಕನ ಆಯ್ಕೆಯಾಗಿದ್ದು ಇನ್ನೇರಡು ದಿನಗಳಲ್ಲಿ ಖಾಯಂ ನಾಯಕನ ಆಯ್ಕೆಯೂ ಆಗಲಿದೆ, ಈ ನಡುವೆ ಇರಾನ್ ತನ್ನ ಪ್ರಮುಖ ಮಸೀದಿಯ ಮೇಲೆ ಕೆಂಪು ಬಾವುಟ ಹಾರಿಸಿದ್ದು ತೀವ್ರ ಸ್ವರೂಪದ ಪ್ರತಿದಾಳಿಯ ಸುಳಿವು ನೀಡಿದೆ.

ಆರ್ಥಿಕ ಹೊಡೆತ ಹೇಗೆ?
ಇರಾನ್-ಇಸ್ರೇಲ್ & ಅಮೆರಿಕ ಯುದ್ಧದಿಂದ (Iran Israel War) ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಆತಂಕದ ವಾತಾವರಣ ಸೃಷ್ಟಿ ಆಗಿದೆ. ಇದು ಮುಂದುವರಿದರೆ ಭಾರತ ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳ ಮೇಲೆ ಭಾರೀ ಹೊಡೆತ ಬೀಳಲಿದೆ. ಅದರಲ್ಲೂ ಭಾರತದ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಬೆಲೆ ಏರಿಕೆ ಬಿಸಿ ಭಾರತಕ್ಕೆ ತಟ್ಟಲಿದೆ ಜೊತೆಗೆ. ರಾಜತಾಂತ್ರಿಕವಾಗಿ ಕೂಡ ಸಮಸ್ಯೆ ಆಗಲಿದೆ ಅಂತಾ ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಏನೇನು ಸಮಸ್ಯೆ?
1. ಯುದ್ಧದ ಸಂಘರ್ಷ ಮುಂದುವರೆದ್ರೆ ತೈಲ ಬೆಲೆ ಹೆಚ್ಚಳ
2. ಹಾರ್ಮೂಜ್ ಜಲಸಂಧಿ ಬಂದ್‌ನಿಂದ ತೈಲ ಸಮಸ್ಯೆ ಸಾಧ್ಯತೆ
3. ಯುಎಇ, ಸೌದಿ, ಬಹ್ರೇನ್ ನಿಂದ ಪೆಟ್ರೋಲ್ ಸರಬರಾಜಿನಲ್ಲಿ ವ್ಯತ್ಯಯ
4. ಪೆಟ್ರೋಲ್ ಬೆಲೆ ಜಾಸ್ತಿ ಆದರೆ ಕಚ್ಚಾ ವಸ್ತುಗಳ ಬೆಲೆ ಹೆಚ್ಚಳ ಆತಂಕ
5. ಡಾಲರ್ ಬೆಲೆ ಮತ್ತಷ್ಟು ಗಗನಕ್ಕೇರುವ ಸಾಧ್ಯತೆ
6. ಯುದ್ಧ ಮುಂದುವರೆದರೆ ದೇಶದ ಆರ್ಥಿಕತೆ ಮೇಲೆ ಎಫೆಕ್ಟ್

