ಬೆಂಗಳೂರು: ಒಬ್ಬರಿಗೆ ಮಾತ್ರ ಟಿಕೆಟ್ ಕೊಡಲು ಸಾಧ್ಯ. ಉಳಿದವರಿಗೆ ಪಕ್ಷ ಸ್ಥಾನಮಾನ ನೀಡಲಿದೆ. ಟಿಕೆಟ್ ಕೊಟ್ಟಿಲ್ಲ ಅಂದ್ರೆ, ಅವರಿಗೆ ಬೇರೆಯ ಜವಾಬ್ದಾರಿ ನೀಡಲಿದೆ ಅಂತ ಅರ್ಥ ಎಂದು ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ (Annamalai) ಹೇಳಿದ್ದಾರೆ.
ಬಿಜೆಪಿ ಕಚೇರಿ (BJP Office) ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿಪ್ರಾಯ ಸಂಗ್ರಹಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಕೇಂದ್ರದಲ್ಲಿ ನಡ್ಡಾ (J.P Nadda), ಮೋದಿ (Narendra Modi), ಅಮಿತ್ ಶಾ (AmitShah) ಅವರ ನೇತೃತ್ವದಲ್ಲಿ ಕೂಡ ಸಭೆ ಮಾಡಿ ಟಿಕೆಟ್ ನೀಡಲಾಗಿದೆ. ಎಲ್ಲಾ ರೀತಿಯ ಅಭಿಪ್ರಾಯದ ಮೂಲಕವೇ ಟಿಕೆಟ್ ನೇಡಲಾಗಿದೆ ಎಂದರು.
ಟಿಕೆಟ್ ಸಿಗದಿರೋದಕ್ಕೆ ಬಂಡಾಯ ಆಗಿರೋದು ಸಾಮಾನ್ಯ. ಒಬ್ಬರಿಗೆ ಮಾತ್ರ ಟಿಕೆಟ್ ಕೊಡಲು ಸಾಧ್ಯ. ಉಳಿದವರಿಗೆ ಪಕ್ಷ ಸ್ಥಾನಮಾನ ನೀಡಲಿದೆ. ಟಿಕೆಟ್ ಕೊಟ್ಟಿಲ್ಲ ಅಂದ್ರೆ, ಅವರಿಗೆ ಬೇರೆಯ ಜವಾಬ್ದಾರಿ ನೀಡಲಿದೆ ಅಂತ ಅರ್ಥ. ಕೇಂದ್ರಕ್ಕೆ ಕರೆಸಿಕೊಳ್ಳುವ ಕೆಲಸವೂ ಆಗಬಹುದು ಎಂದು ತಿಳಿಸಿದರು. ಇದನ್ನೂ ಓದಿ: ನಾನೇನಾದ್ರೂ ರೇಪ್ ಮಾಡಿದ್ನಾ: ಏನ್ ತಪ್ಪು ಮಾಡಿದ್ದೆ? – ಟಿಕೆಟ್ ಕೈತಪ್ಪಿದ್ದಕ್ಕೆ ಸವದಿ ಬೇಸರ
ಜಗದೀಶ್ ಶೆಟ್ಟರ್ (Jagadeesh Shettar) ವಿಚಾರದ ಕುರಿತು ಮಾತನಾಡಿ, ಜಗದೀಶ್ ಶೆಟ್ಟರ್ ದೊಡ್ಡವರು. ಪಕ್ಷ ಸಂಘಟನೆ ಮಾಡಿದ್ದಾರೆ. ಅವರು ಹೈಕಮಾಂಡ್ ಬಳಿಯೂ ಚರ್ಚೆ ಮಾಡಿದ್ದಾರೆ. ಈಶ್ವರಪ್ಪ ಅವರು ಈಗಾಗಲೇ ರಾಜಕೀಯ ನಿವೃತ್ತಿ ಹೋಂದೋದಾಗಿ ಪತ್ರ ಬರೆದಿದ್ದಾರೆ. ಅವರು ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುವ ಕೆಲಸ ಮಾಡಿದ್ದಾರೆ. 35-40 ವರ್ಷಗಳ ಪಕ್ಷಕ್ಕೆ ದುಡಿದಿದ್ದಾರೆ. ಅವರೆಲ್ಲರ ಕೊಡುಗೆಯನ್ನ ಪಕ್ಷ ಎಂದಿಗೂ ಮರೆಯಲ್ಲ. ಅವರಿಗಾಗಿ ಪಕ್ಷ ಏನಾದ್ರೂ ಮಾಡಲಿದೆ. ಟಿಕೆಟ್ ಸಿಗದೆ ಬಂಡಾಯ ಆಗುವುದು ಸಹಜ. ಅವರನ್ನ ಹಿರಿಯರು ಮಾತನಾಡಿಸಿ ಸಮಾಧಾನಪಡಿಸಲಿದ್ದಾರೆ ಎಂದು ಅಣ್ಣಾಮಲೈ ಹೇಳಿದರು.