ಶಿವಮೊಗ್ಗ: ಮೆಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿ, ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆ ನಂತರ ಸಾವಿರಾರು ಜನರು ಸೇರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಹಿಂಸಾಚಾರ ಕೃತ್ಯವೆಸಗಿದ್ದಾರೆ. ಈ ಘಟನೆಯ ಬಳಿಕ ಪೊಲೀಸರು ಬಹಳ ಸಂಯಮದಿಂದ ವರ್ತಿಸಿದ್ದಾರೆ. ಇಲ್ಲದಿದ್ದರೆ ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಘಟನೆ ಹುಬ್ಬಳ್ಳಿಯಲ್ಲೂ ನಡೆದು ಹೋಗುತ್ತಿತ್ತು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
Advertisement
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಲ್ಲು ಹೊಡೆಯುವುದು, ಪೊಲೀಸ್ ವಾಹನ ಜಖಂ ಮಾಡುವುದು. ಸಿಕ್ಕ, ಸಿಕ್ಕ ಕಡೆಗಳಲ್ಲಿ ಅರಾಜಕತೆ ಉಂಟು ಮಾಡುವ ಕೆಲಸವನ್ನು ಒಂದು ಗುಂಪು ಮಾಡಿದೆ. ಘಟನೆಯಲ್ಲಿ ಅನೇಕ ಪೊಲೀಸರಿಗೆ ಗಾಯವಾಗಿದೆ. ಈ ವೇಳೆ ಪೊಲೀಸರು ಬಹಳ ಸಂಯಮದಿಂದ ವರ್ತಿಸಿದ್ದಾರೆ. ಘಟನೆ ನಡೆದ ಒಂದು ಗಂಟೆಯೊಳಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸ್ಥಳದಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗಿದ್ದು, ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯವನ್ನು ಆಧರಿಸಿ ಆರೋಪಿಗಳ ಬಂಧನ ಮಾಡಲಾಗುತ್ತಿದೆ. ಈಗಾಗಲೇ 80ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಯೋಗಿ ತರಹ ಮೈ ಕೊಡವಿ ನಿಲ್ಲಿ ಬಸವರಾಜ್ ಬೊಮ್ಮಾಯಿ ಅವರೇ.. : ಪ್ರಮೋದ್ ಮುತಾಲಿಕ್
Advertisement
Advertisement
ಇದೊಂದು ದುರದೃಷ್ಟಕರವಾದ ಸಂಗತಿ. ಕೋಮುವಾದ ಇದರ ಹಿಂದೆ ಇದೆ. ಯಾರೋ ಕೆಲವರ ಪ್ರಚೋದನಕಾರಿಯಿಂದ ಇಂತಹ ಘಟನೆ ನಡೆಯುತ್ತಿದೆ. ಎಲ್ಲಾ ಸಮುದಾಯದವರು ಸಹ ಸಂಯಮ ವಹಿಸಬೇಕು. ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಎಲ್ಲಾ ಧರ್ಮದವರು ಒಟ್ಟಾಗಿ, ಒಂದಾಗಿ ಈ ದೇಶದಲ್ಲಿ ಬದುಕಬೇಕು ಎಂದರು. ಇದನ್ನೂ ಓದಿ: ಪೊಲೀಸರ ಮೇಲೆ ಕೈ ಮಾಡೋದು, ಠಾಣೆಗೆ ನುಗ್ಗೋ ಪ್ರಯತ್ನ ಮಾಡೋದು ಅಕ್ಷಮ್ಯ ಅಪರಾಧ: ಬಿಎಸ್‍ವೈ
Advertisement
ಯಾರು ಇಂತಹ ವಿಚಿದ್ರಾಕಾರಿ ಶಕ್ತಿ ಹಿಂದೆ ಇದ್ದಾರೋ, ಅವರಿಗೆ ಪಾಠ ಹೇಳುವ ಕೆಲಸ ಮಾಡಬೇಕು. ಪೊಲೀಸರಿಗೆ ಬೆದರಿಕೆ ಹಾಕುತ್ತಿದ್ದಾರೆ. ಪೊಲೀಸರ ಮೇಲೆ ಕಲ್ಲು ಎಸೆದಿದ್ದಾರೆ. ಸುಮಾರು 8-10 ಪೊಲೀಸ್ ವಾಹನ ಜಖಂ ಆಗಿವೆ. ಖಾಸಗಿ ವಾಹನಗಳು ಜಖಂ ಆಗಿವೆ. ಹಳೇ ಹುಬ್ಬಳ್ಳಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕಾನೂನನ್ನು ಯಾರೇ ಕೈಗೆ ತೆಗೆದುಕೊಂಡರೂ ಅವರನ್ನು ಬಿಡುವುದಿಲ್ಲ. ಸರಿಯಾದ ಶಿಕ್ಷೆ ಹಾಗೇ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.