ಸದಾ ಸುದ್ದಿಯಲ್ಲಿರುವ ಬಾಲಿವುಡ್ (Bollywood) ನಟಿ ಕಂಗನಾ ರಣಾವತ್ (Kangana Ranaut) ಇದೀಗ ರಾಜಕೀಯಕ್ಕೆ (Politics) ಎಂಟ್ರಿ ಕೊಡೋಕೆ ಸಜ್ಜಾಗುತ್ತಿದ್ದಾರೆ. ಪರಿಸ್ಥಿತಿ ಏನೇ ಇರಲಿ, ಸರ್ಕಾರ ನನ್ನ ಭಾಗವಹಿಸುವಿಕೆ ಬಯಸಿದ್ರೆ ನಾನು ರಾಜಕೀಯಕ್ಕೆ ಬರಲು ಸಿದ್ಧವಾಗಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
Advertisement
ಅವರಿಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಹಿಮಾಚಲ ಪ್ರದೇಶದ ಜನರು ತಮ್ಮ ಸೇವೆ ಮಾಡಲು ನನಗೆ ಅವಕಾಶ ನೀಡಿದರೆ, ಅದು ನನ್ನ ಸೌಭಾಗ್ಯ. ನನ್ನ ಅದೃಷ್ಟ ಅಂದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಲಿಯಾ ಭಟ್ ಡೆಲಿವರಿ ಡೇಟ್ ಫಿಕ್ಸ್: ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ರಾ ನಟಿ?
Advertisement
ನವೆಂಬರ್ 12ರಂದು ಹಿಮಾಚಲ ಪ್ರದೇಶದ (Himachal Pradesh) ವಿಧಾನಸಭಾ ಚುನಾವಣೆ (Elections) ನಡೆಯಲಿದೆ. ಈ ಕುರಿತು ಇತ್ತೀಚೆಗೆ ಶಿಮ್ಲಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ನಾನು ಚಲನಚಿತ್ರ (Film) ವೃತ್ತಿಜೀವನದ ಮೇಲೆ ಹೆಚ್ಚು ಕೇಂದ್ರೀಕೃತವಾಗಿದ್ದೇನೆ. ರಾಜಕೀಯ ಪ್ರವೇಶಿಸುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ್ದರು.
Advertisement
Advertisement
ಕಳೆದ ವರ್ಷ ಮೇ ತಿಂಗಳಲ್ಲಿ ದ್ವೇಷಮಯ ಹಾಗೂ ನಿಂದನಾತ್ಮಕ ನಡವಳಿಕೆಗಳಿಂದಾಗಿ ಕಂಗನಾ ರಣಾವತ್ ಅವರ ಟ್ವಿಟ್ಟರ್ (Twitter) ಖಾತೆಯನ್ನು ಮೈಕ್ರೋಬ್ಲಾಗಿಂಗ್ ಸೈಟ್ ಅಮಾನತುಗೊಳಿಸಿತ್ತು. ಇದನ್ನೂ ಓದಿ: ಮಗಳು ವಮಿಕಾ ಜೊತೆ ಕೋಲ್ಕತ್ತಾದಲ್ಲಿ ಅನುಷ್ಕಾ ಜಾಲಿ ರೈಡ್
ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ಟ್ವಿಟ್ಟರ್ ಒಂದು ವಾದಾತ್ಮಕ ಮಾಧ್ಯಮ. ಒಂದೇ ಸಮಸ್ಯೆಯನ್ನು ದಿನವಿಡಿ ಚರ್ಚಿಸಲಾಗುತ್ತದೆ. ನಾನು ಕೆಲವೊಮ್ಮೆ ಮೋಜಿಗಾಗಿ ಕೀಟಲೆ ಮಾಡುತ್ತಿದ್ದೆ. ಆದರೆ ಸೂಕ್ಷ್ಮ ವಿಷಯಗಳು ಬರುವುದರಿಂದ ಅವರು ಗಂಭೀರವಾಗುತ್ತವೆ. ಇವು ಸಾಂದರ್ಭಿಕವಾಗಿ ಸಂಭವಿಸಿದೆಯೇ ಹೊರತು, ನಾನು ಜನರನ್ನು ಅಸಮಾಧಾನಗೊಳಿಸಲು ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.