ಹಾವೇರಿ: ದೇಶಕ್ಕೆ ನೆಮ್ಮದಿ ಸಿಗಬೇಕಾದರೆ ಜನರು ಈ ದೇಶದಿಂದಲೇ ಬಿಜೆಪಿಯನ್ನ ಒದ್ದು ಓಡಿಸಬೇಕು ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಕರೆ ನೀಡಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕುಪ್ಪೇಲೂರು ಗ್ರಾಮದಲ್ಲಿ `ದೇಶದ ಏಕತೆಗಾಗಿ ಕಾಂಗ್ರೆಸ್ ನಿಂದ ಜನಜಾಗೃತಿ ಪಾದಯಾತ್ರೆ’ಗೆ ಚಾಲನೆ ನೀಡಿ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಇದನ್ನೂ ಓದಿ: ಮೋದಿ ಚೀನಾದೊಂದಿಗೆ `ರಾಷ್ಟ್ರಧ್ವಜ ಒಪ್ಪಂದ’ ಮಾಡ್ಕೊಂಡಿದ್ದಾರೆ – ರಾಹುಲ್ ಗಾಂಧಿ ಆರೋಪ
Advertisement
Advertisement
ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸೋದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಉದ್ದೇಶ. ಇವರಿಂದ ದೇಶಕ್ಕೆ ನೆಮ್ಮದೇ ಸಿಗಬೇಕಾದರೆ ಜನರು ದೇಶದಿಂದಲೇ ಬಿಜೆಪಿಯನ್ನ ಒದ್ದು ಓಡಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ನೂಪುರ್ ಶರ್ಮಾ ಹತ್ಯೆಗೆ ಪಾಕ್ ಸಂಘಟನೆಗಳಿಂದ ಸುಪಾರಿ ಪಡೆದಿದ್ದ ಉಗ್ರ ಅರೆಸ್ಟ್
Advertisement
ಕಾಂಗ್ರೆಸ್ ಪಕ್ಷ ರಾಷ್ಟ್ರಧ್ವಜವನ್ನ ದೇವರು ಅಂತಾ ಭಾವಿಸಿದೆ. ಆದ್ರೆ ಎಷ್ಟು ವರ್ಷಗಳಿಂದ ಆರ್‌ಎಸ್‌ಎಸ್‌ನವರು ರಾಷ್ಟ್ರಧ್ವಜ ಹಾಕಿದ್ದಾರೆ? ಈಗ ಅವರಿಗೆ ದೇಶದ ನಿಶಾನೆ ಬಗ್ಗೆ ಅಭಿಮಾನ ಬಂದಿದೆ. ಇದೆಲ್ಲ ಬರೀ ನಾಟಕ, ಅವರು ಜನರಿಗೆ ಹೇಳೋದೊಂದು, ಮಾಡೋದೊಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಗಾಂಧೀಜಿ ನೂಲಿನಿಂದ ನೇಯ್ದಿದ್ದ ರಾಷ್ಟ್ರಧ್ವಜ ಉಪಯೋಗಿಸಬೇಕು ಅಂದಿದ್ದರು. ಆದರೀಗ ಖಾದಿಯಿಂದ ನೇಯ್ದಿರೋ ಬಣ್ಣದ ನಿಶಾನೆ ಬಿಟ್ಟು ಪಾಲಿಸ್ಟರ್ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಗಾಂಧೀಜಿ ಕನಸನ್ನ ಮಣ್ಣು ಪಾಲು ಮಾಡಿದ್ದು, ಗಾಂಧೀಜಿಯವರ ಹೃದಯಕ್ಕೆ ನೋವಾಗುತ್ತಿದೆ. ಧ್ವಜವನ್ನೂ ಮಾರಾಟಕ್ಕಿಟ್ಟಿರೋದು ನಾಚಿಕೆಗೇಡಿನ ಸಂಗತಿ. ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಿಜೆಪಿ ಹಾಗೂ ಆರ್‌ಎಸ್‌ಸ್ ಅನ್ನು ಸೋಲಿಸಬೇಕು ಎಂದು ಕರೆ ನೀಡಿದ್ದಾರೆ.
ಇದೇ ವೇಳೆ ಎಸಿಬಿ ರದ್ದು ಕುರಿತು ಹೈಕೋರ್ಟ್ ತೀರ್ಪಿನ ವಿಚಾರವಾಗಿ ಮಾತನಾಡಿದ ಅವರು, ಹೈಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಎಸಿಬಿ ಮಾಡಿದ್ದು ನಮ್ಮ ಸರ್ಕಾರವೇ ಹೊರತು ನಾನಲ್ಲ. ಬಿಜೆಪಿ ಸರ್ಕಾರ ಸಹ 4 ವರ್ಷ ಇದನ್ನು ಉಪಯೋಗ ಮಾಡ್ಕೊಂಡು ಬಂದಿದೆ. ಸರ್ಕಾರ ಸಹ ಎಸಿಬಿ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ ಹಾಗಾಗಿ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಕೊಡುವುದು ಸೂಕ್ತ ಎಂದು ಕೆ.ಬಿ.ಕೋಳಿವಾಡ ಅಭಿಪ್ರಾಯಪಟ್ಟಿದ್ದಾರೆ.