ಹಾಸನ: ಹಾಸನ (Hassan) ಜೆಡಿಎಸ್ (JDS) ಗೊಂದಲ ಬಗೆಹರಿಯುತ್ತಿಲ್ಲ. ಬದಲಾಗಿ ಇನ್ನಷ್ಟು ಗೋಜಲಾಗುತ್ತಿದೆ. ಪಕ್ಷ ಸೂಚಿಸಿದ್ರೆ ಹಾಸನದಿಂದಲೂ ಸ್ಪರ್ಧೆಗೆ ರೆಡಿ ಎಂದು ಮಾಜಿ ಮಂತ್ರಿ ಹೆಚ್.ಡಿ.ರೇವಣ್ಣ (H.D.Revanna) ಘೋಷಿಸಿದ್ದಾರೆ. ಹಾಸನದಿಂದ ಭವಾನಿ ರೇವಣ್ಣ ಟಿಕೆಟ್ ಪಟ್ಟು ಬೆನ್ನಲ್ಲೇ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡೋದಾಗಿ ಹೇಳಿದ್ದಾರೆ.
ಹೌದು, ಹೆಚ್.ಡಿ.ರೇವಣ್ಣ ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಸುಳಿವು ನೀಡಿದ್ದಾರೆ. ಭವಾನಿ ರೇವಣ್ಣ ಹಾಸನ ಟಿಕೆಟ್ ಬಯಸಿದ್ರು. ಆದ್ರೆ ಕುಮಾರಸ್ವಾಮಿ ಆಗಲ್ಲ ಅಂದಿದ್ರು. ಪಕ್ಷ ಏನ್ ಹೇಳತ್ತೆ ಅದೇನ್ ಕೇಳ್ತಿನಿ. ಪಕ್ಷ ಏನು ಹೇಳೀದ್ರು ಕೇಳ್ತಿನಿ, ಈಗ ಪಕ್ಷಕ್ಕೆ ಬಿಟ್ಟಿದ್ದೀನಿ. ನಮಗೇನು ಎಲ್ಲಿ ನಿಲ್ಸಿದ್ರು ರೆಡಿ ನಾನು. ಯಾವ ಊರಲ್ಲಿ ಟಿಕೆಟ್ ಕೊಟ್ರು ರೆಡಿ ಇರ್ತೀವಿ. ಪಕ್ಷ ಡೆಲ್ಲಿಲಿ ನಿಲ್ಲು ಅಂದ್ರು ನಿಲ್ತೀನಿ. ಕೆಲವರು ಹಾಕಿರುವ ಚಾಲೆಂಜ್ ಸ್ವೀಕಾರ ಮಾಡಬೇಕಲ್ವಾ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅರಸೀಕೆರೆಯಲ್ಲಿ ಮತ್ತೆ ಜೆಡಿಎಸ್ ಗೆಲ್ಲುವವರೆಗೂ ನಾನು ನಿದ್ರೆ ಮಾಡಲ್ಲ – ಪ್ರಜ್ವಲ್ ಶಪಥ
Advertisement
Advertisement
ಹೆಚ್.ಡಿ.ರೇವಣ್ಣ ಅವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಮುಂದಾಗಿದ್ದಾರೆ. ರಾಜಕೀಯ ವೈರಿ ಪ್ರೀತಂಗೌಡ ಅವರನ್ನು ಸೋಲಿಸಲೇಬೇಕೆಂದು ರೇವಣ್ಣ ಹಠಕ್ಕೆ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಕುಟುಂಬಕ್ಕೆ ಟಿಕೆಟ್ ಸಿಕ್ಕಂತೆ ಮಾತ್ರ ಪ್ರೀತಂ ಸೋಲಿಸಲು ಸುಲಭ ಎನ್ನುವುದು ರೇವಣ್ಣ ಅಭಿಪ್ರಾಯವಾಗಿದೆ. ಇದರಿಂದ ಭವಾನಿ ರೇವಣ್ಣಗೆ ಟಿಕೆಟ್ ಬೇಕೆಂದು ಪಟ್ಟು ಹಿಡಿದಿದ್ದಾರೆ. ಆದ್ರೆ, ಇದಕ್ಕೆ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕಾಗಿಯೇ ರೇವಣ್ಣ ಹಾಸನದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಟಿಕೆಟ್ ಕುಟುಂಬಕ್ಕೆ ಸಿಕ್ಕಂತೆ ಆಗುತ್ತೆ. ಪ್ರೀತಂಗೌಡ ಅವರನ್ನು ಸೋಲಿಸಲು ಸುಲಭವಾಗುತ್ತೆ ಎನ್ನುವ ಪ್ಲಾನ್‌ನಲ್ಲಿ ರೇವಣ್ಣ ಇದ್ದಾರೆ.
Advertisement
Advertisement
ಹೆಚ್.ಪಿ.ಸ್ವರೂಪ್ ಮೂರು ದಿನಗಳ ಕಾಲಾವಕಾಶ ಹೇಳಿದ್ದು, ಈ ಮಧ್ಯೆ ಹಾಸನ ವಿಧಾನಸಭಾ ಕ್ಷೇತ್ರದಿಂದ ತಾವೇ ಸ್ಪರ್ಧಿಸುವ ರೇವಣ್ಣ ಹೇಳಿಕೆ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ನೀಡಿದಂತಾಗಿದೆ. ಆದರೆ ಮೂರು ದಿನಗಳ ಕಾಲವಕಾಶ ಕೇಳಿರುವ ಸ್ವರೂಪ್ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ಕಾಂಗ್ರೆಸ್ ಸೇರಿದ್ರೆ 50 ಸಾವಿರ ಲೀಡ್‌ನಲ್ಲಿ ಗೆಲ್ತೀನಿ – ಶಾಸಕ ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೋ ವೈರಲ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k