ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಬಿಬಿಎಂಪಿಗೆ ಆಗುತ್ತಿಲ್ಲ. ಆದರೆ, ಸಿಕ್ಕಸಿಕ್ಕಿದ್ದಕ್ಕೆಲ್ಲಾ ತೆರಿಗೆ ಹಾಕೋ ಚಾಳಿ ಮಾತ್ರ ಮುಂದುವರೆಸಿದೆ. ಕಳೆದ ವರ್ಷ ಭಾರೀ ಆಕ್ರೋಶದ ನಂತರ ಕೈಬಿಟ್ಟಿದ್ದ ಪಾರ್ಕಿಂಗ್ ಟ್ಯಾಕ್ಸ್ ನೀತಿಯನ್ನು ಇದೀಗ ಜಾರಿ ಮಾಡೋಕೆ ಪ್ರಯತ್ನ ನಡೆಸಿದೆ.
ಮನೆ ಮುಂದಿನ ರಸ್ತೆಯಲ್ಲಿ ಬೈಕ್, ಕಾರು, ಆಟೋ, ಟೆಂಪೋ, ಟ್ಯಾಕ್ಸಿ ನಿಲ್ಲಿಸುವುದಕ್ಕೆ ಪಾರ್ಕಿಂಗ್ ತೆರಿಗೆ ಹಾಕಲು ಪ್ಲಾನ್ ಮಾಡುತ್ತಿದೆ. ಟ್ರಾಫಿಕ್ ಜಾಮ್ ಹಾಗೂ ವಾಯುಮಾಲಿನ್ಯ ತಡೆಗಟ್ಟುವ ನೆಪದಲ್ಲಿ 2020ರಲ್ಲಿ ಭೂಸಾರಿಗೆ ನಿರ್ದೇಶನಾಲಯ ನೀಡಿದ್ದ ವರದಿಯ ಅನುಷ್ಠಾನಕ್ಕೆ ಮುಂದಾಗಿದೆ. ಮುಂದಿನ ವಾರದೊಳಗೆ ಪಾರ್ಕಿಂಗ್ ಶುಲ್ಕ ವಿಧಿಸುವ ನೀತಿಯನ್ನು ಜಾರಿಗೆ ತರಲು ಬಿಬಿಎಂಪಿ ಸಿದ್ಧತೆ ನಡೆಸುತ್ತಿದೆ. ಆದರೆ, ಇದಕ್ಕೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
Advertisement
Advertisement
ಬೆಂಗಳೂರಿಗರಿಗೆ ಪಾರ್ಕಿಂಗ್ ಶುಲ್ಕದ ಬರೆ: ಮನೆ ಮುಂದೆ ನಿಲ್ಲುವ ವಾಹನಗಳಿಗೆ ಪಾರ್ಕಿಂಗ್ ಶುಲ್ಕ ಕಟ್ಟಬೇಕು. ವಾಹನದ ಗಾತ್ರ ಆಧರಿಸಿ ಪಾರ್ಕಿಂಗ್ ಶುಲ್ಕ ನಿಗದಿಯಾಗುತ್ತದೆ. ವಾರ್ಷಿಕ ಒಂದರಿಂದ ಐದು ಸಾವಿರದವರೆಗೂ ಪಾರ್ಕಿಂಗ್ ಶುಲ್ಕ ಕಟ್ಟಬೇಕು. ಎಲ್ಲೆಂದರಲ್ಲಿ ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್‍ಗೆ ಅವಕಾಶ ಇಲ್ಲ. ಇದನ್ನೂ ಓದಿ: ಮುರುಘ ಶ್ರೀಗಳ ನಿರೀಕ್ಷಣಾ ಜಾಮೀನು ಅರ್ಜಿ ಗುರುವಾರ ವಿಚಾರಣೆ – ಮಠಕ್ಕೆ ಪೊಲೀಸ್ ಭದ್ರತೆ
Advertisement
ನಗರದ ಹಲವೆಡೆ ಬಿಬಿಎಂಪಿಯಿಂದ ಪಾರ್ಕಿಂಗ್ ಜಾಗ ನಿಗದಿ ಮಾಡಿದೆ. ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವ ಕಡೆ ನೋ ಪಾರ್ಕಿಂಗ್ ಹಾಗೂಪಾರ್ಕಿಂಗ್ ಶುಲ್ಕದಿಂದ ವರ್ಷಕ್ಕೆ 300 ಕೋಟಿ ಆದಾಯ ನಿರೀಕ್ಷೆಯನ್ನು ಬಿಬಿಎಂಪಿ ಹೊಂದಿದೆ. ಇದನ್ನೂ ಓದಿ: ಗಣೇಶೋತ್ಸವವನ್ನು ಸ್ವಾಗತಿಸಲ್ಲ, ಹುಬ್ಬಳ್ಳಿ ಆಯುಕ್ತರ ವಿರುದ್ಧ ಕ್ರಿಮಿನಲ್ ಕೇಸ್ : ಅಂಜುಮನ್ ಸಂಸ್ಥೆ