ಬೆಳಗಾವಿ: ಲಕ್ಷ್ಮಣ ಸವದಿಯವರು (Laxman Savadi) ಬಿಜೆಪಿಗೆ (BJP) ಮರಳಿ ಬಂದರೆ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬರುತ್ತದೆ ಎಂದು ಮಾಜಿ ಸಂಸದ ರಮೇಶ್ ಕತ್ತಿ ( Ramesh Katti) ಹೇಳಿದ್ದಾರೆ.
ಲಕ್ಷ್ಮಣ ಸವದಿ ಬಿಜೆಪಿಗೆ ಸೇರ್ತಾರೆ ಎಂಬ ವಿಚಾರ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, ಲಕ್ಷ್ಮಣ ಸವದಿಯವರು ಬಿಜೆಪಿಗೆ ಬರುವ ಕುರಿತು ಈಗಾಗಲೇ ಚರ್ಚೆ ಶುರುವಾಗಿದೆ. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಚರ್ಚೆ ಪ್ರಾರಂಭ ಆಗಿದೆ. ನಮ್ಮನ್ನೂ ಕೂಡ ವರಿಷ್ಠರು ಕರೆದು ಮಾತನಾಡಿಸಿ ಅಭಿಪ್ರಾಯ ಕೇಳಿದ್ದಾರೆ. ಸವದಿಯವರನ್ನ ಕರೆತರುವ ಚರ್ಚೆಯಲ್ಲಿ ನಾನು ಕೂಡ ಒಬ್ಬ ಎಂದಿದ್ದಾರೆ. ಇದನ್ನೂ ಓದಿ: ಗೋಸುಂಬೆ ಉರುಫ್ ಊಸರವಳ್ಳಿ ಕಾಂಗ್ರೆಸ್ ಪಕ್ಷಕ್ಕೆ ಒಳಗೊಂದು ಹೊರಗೊಂದು ವೇಷ: ಜೆಡಿಎಸ್ ವಾಗ್ದಾಳಿ
ಸವದಿ ಅವರಿಗೆ ಸ್ಥಾನಮಾನ ಕೊಡುವ ಬಗ್ಗೆ ಮಾತನಾಡಿದ ಅವರು, ಸ್ಥಾನಮಾನಕ್ಕಾಗಿ ಯಾರೂ ಬರುವುದಿಲ್ಲ. ಕಾಂಗ್ರೆಸ್‌ಗೆ ಹೋದಾಗ ಏನು ಸ್ಥಾನಮಾನ ಕೇಳಿ ಹೋಗಿದ್ದರು ಅವರು ಏನು ಕೊಟ್ಟರೊ. ನಮ್ಮ ಪಕ್ಷಕ್ಕೆ ಬಂದರೆ ಏನು ಕೊಡಬೇಕು ಎಂಬುದನ್ನು ನಮ್ಮನ್ನ ಕರೆದು ನಿರ್ಣಯ ಮಾಡ್ತಾರೆ. ರಾಜ್ಯ ಮತ್ತು ರಾಷ್ಟ್ರೀಯ ವರಿಷ್ಠರು ಹೇಳಿದಂತೆ ಗೌರವಯುತವಾಗಿ ಅವರನ್ನ ಬರಮಾಡಿಕೊಳುತ್ತೇವೆ ಎಂದು ಪರೋಕ್ಷವಾಗಿ ಸವದಿಯನ್ನ ಕರೆತರುವ ವಿಚಾರ ಫೈನಲ್ ಹಂತಕ್ಕೆ ತಲುಪಿದೆ ಎನ್ನುವುದರ ಸುಳಿವು ಬಿಟ್ಟುಕೊಟ್ಟಿದ್ದಾರೆ. ಇದನ್ನೂ ಓದಿ: ನಮ್ಮ ಮಕ್ಕಳು ಲೆಹೆಂಗಾ ಧರಿಸಿ ಶಾಲೆಗೆ ಹೋಗ್ತಾರೆ: ಹಿಜಬ್ ವಿರುದ್ಧ ಬಿಜೆಪಿ ಶಾಸಕ ಹೇಳಿಕೆ
ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೇಳಿರುವ ಬಗ್ಗೆ ಮಾತನಾಡಿ, ಅವಶ್ಯಕವಾಗಿ ನಾನು ಒಬ್ಬ ಟಿಕೆಟ್ ಆಕಾಂಕ್ಷಿ. ಪಕ್ಷದ ವರಿಷ್ಠರಲ್ಲಿ ವಿನಂತಿ ಮಾಡಿದ್ದೇನೆ. ಹಿಂದಿನ ಬಾರಿ ತಪ್ಪಿ ಹೋಗಿದೆ. ಈ ಬಾರಿಯಾದ್ರೂ ಟಿಕೆಟ್ ಕೊಡುವಂತೆ ಮನವಿ ಮಾಡಿದ್ದೇನೆ. ಎಲ್ಲಿಯಾದರು ಒಂದು ಕಡೆ ಅವಕಾಶ ಮಾಡಿಕೊಡಿ ಅಂತಾ ಕೇಳಿದ್ದೇನೆ. ಬಿಜೆಪಿ ಪಕ್ಷ ನಮ್ಮ ಅಣ್ಣನಿಗೆ ನನಗೆ ಸಾಕಷ್ಟು ಅವಕಾಶ ಮಾಡಿಕೊಟ್ಟಿದೆ. ನಾನು ಬೇರೆ ಪಕ್ಷಕ್ಕೆ ಹೋಗುತ್ತೇನೆ ಅಂತಾ ಎಲ್ಲಿಯೂ ಹೇಳಿಲ್ಲ. ಈ ಬಾರಿ ಅವಕಾಶ ತಪ್ಪುವುದಿಲ್ಲ ಅನ್ನೋ ನನಗೆ ನಂಬಿಕೆ ಇದೆ ಎಂದಿದ್ದಾರೆ. ಇದನ್ನೂ ಓದಿ: ವಾಹನ ಸವಾರರಿಗೆ ಗುಡ್‌ನ್ಯೂಸ್ – ಪೀಣ್ಯ ಫ್ಲೈಓವರ್‌ನಲ್ಲಿ ಹೆವಿ ವೆಹಿಕಲ್ ಸಂಚಾರಕ್ಕೆ ಗ್ರೀನ್ ಸಿಗ್ನಲ್
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದಿಂದ ಕತ್ತಿಯನ್ನು ಕೆಳಗಿಳಿಸುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವುದು ಬ್ಯಾಂಕ್‌ನಲ್ಲಿ ಚರ್ಚೆಗೆ ಬಂದಿಲ್ಲ. ನಮ್ಮ ನಿರ್ದೇಶಕರ ಗಮನಕ್ಕೂ ಬಂದಿಲ್ಲ. ಎಲ್ಲರು ಸೇರಿಕೊಂಡು ಸಭೆ ಮಾಡಿದ್ದೇವೆ. ಎಲ್ಲೋ ಊಹಾಪೋಹದಿಂದ ಆಗಿರುವ ಲೋಪ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಂಬೇಡ್ಕರ್ ನಾಮಫಲಕ ವಿಚಾರ – ಎರಡು ಗುಂಪುಗಳ ನಡುವೆ ಘರ್ಷಣೆ
ಜಗದೀಶ್ ಶೆಟ್ಟರ್ ಬಿಜೆಪಿಗೆ ಮರು ಸೇರ್ಪಡೆಯಾದ ಕುರಿತು ಪ್ರತಿಕ್ರಿಯಿಸಿ, ಜಗದೀಶ್ ಶೆಟ್ಟರ್ ಅವರು ಎಂಟು ತಿಂಗಳಿಂದ ಅಲ್ಲಿದ್ರೂ ಅವರ ಮನಸ್ಸು ಬಿಜೆಪಿಯಲ್ಲಿತ್ತು. ಅವರು ದೈಹಿಕವಾಗಿ ಅಲ್ಲಿದ್ದರು. ಅವರು ಬಂದಿದ್ದು ಒಳ್ಳೆಯದಾಯಿತು. ಶಕ್ತಿ ತುಂಬಿದರು. ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರಿಗೆ ಅಭಿನಂದನೆ ಹೇಳುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೆ.ಎನ್.ರಾಜಣ್ಣ, ಶಾಮನೂರು ಶಿವಶಂಕರಪ್ಪಗೆ ಕೈ ಹೈಕಮಾಂಡ್ ವಾರ್ನಿಂಗ್