ಬೆಂಗಳೂರು: ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುತ್ತಿರುವ ಸಚಿವ ಉಮೇಶ್ ಕತ್ತಿ ವಿರುದ್ಧ ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದ್ದಾರೆ. ನಾನು ಸಿಎಂ ಆಗಿದ್ದರೆ ಉಮೇಶ್ ಕತ್ತಿಯನ್ನ ನಿಮ್ಹಾನ್ಸ್‌ಗೆ ಸೇರಿಸುತ್ತಿದ್ದೆ ಅಂತ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನೇ ಮುಖ್ಯಮಂತ್ರಿ ಆಗಿದ್ರೆ ಉಮೇಶ್ ಕತ್ತಿಯನ್ನ ನಿಮ್ಹಾನ್ಸ್ ಸೇರಿಸುತ್ತಿದ್ದೆ. ಉಮೇಶ್ ಕತ್ತಿಗೆ ಬುದ್ಧಿ ಇಲ್ಲ. ಕರ್ನಾಟಕದಲ್ಲಿ ಇರೋದ್ರಿಂದ ಅವರು ರಾಜಕಾರಣಿ ಆಗಿ ಉಳಿದಿದ್ದಾರೆ. ಇಲ್ಲದೇ ಹೋಗಿದ್ರೆ ಮರಾಠಿಗರು ಅವರನ್ನು ತಿಂದು ತೇಗುತ್ತಿದ್ದರು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಫ್ಯಾಕ್ಟರಿ ಸ್ಫೋಟ – 4 ದಿನ ಕಳೆದರೂ ಪತ್ತೆಯಾಗದ ಮಾಲೀಕ
Advertisement
Advertisement
ಕರ್ನಾಟಕ ಯಾವುದೇ ಕಾರಣಕ್ಕೂ ಇಬ್ಭಾಗ ಆಗಬಾರದು. ಎಲ್ಲಾ ಭಾಗಗಳನ್ನ ಸರ್ಕಾರ ಅಭಿವೃದ್ಧಿ ಮಾಡಬೇಕು. ಉತ್ತರ ಕರ್ನಾಟಕ, ಹೈದರಾಬಾದ್ ಕಲ್ಯಾಣ ಅಭಿವೃದ್ಧಿ ಆಗಬೇಕು. ಅದನ್ನ ಹೇಳಲಿ, ಅದು ಬಿಟ್ಟು ಬೇಜವಾಬ್ದಾರಿಯಾಗಿ ಯಾರು ಮಾತಾಡಬಾರದು ಅಂತಾ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: 55ರ ಮಹಿಳೆಯೊಂದಿಗೆ 29ರ ಯುವಕ ರೊಮ್ಯಾನ್ಸ್ – ಮದುವೆ ಎಂದೊಡನೇ ಯುವಕ ಎಸ್ಕೇಪ್
Advertisement
Advertisement
ಮಂತ್ರಿಯಾಗಿ ಉಮೇಶ್ ಕತ್ತಿ ಏನ್ ಕೆಲಸ ಮಾಡಿದ್ದಾರೆ? ಎಷ್ಟು ಕಾಡು ಉಳಿಸಿದ್ದಾರೆ? ಗೊತ್ತಿಲ್ಲ. ಪದೇ ಪದೇ ಪ್ರತ್ಯೇಕ ರಾಜ್ಯದ ಬಗ್ಗೆ ಮಾತಾಡುತ್ತಾರೆ. ಉತ್ತರ ಕರ್ನಾಟಕದ ರಾಜಕಾರಣಿಗಳಿಗೆ ಬುದ್ದಿ ಇಲ್ಲ. ಯಾವುದೇ ಕಾರಣಕ್ಕೂ ಪ್ರತ್ಯೇಕ ರಾಜ್ಯದ ಬಗ್ಗೆ ಮಾತಾಡಬಾರದು ಅಂತ ಅಗ್ರಹ ಮಾಡಿದರು.