ನವದೆಹಲಿ: ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ವಿದೇಶಿ ಮಹಿಳೆಯೊಂದಿಗೆ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ ಯುವಕ ಮದುವೆ ವಿಷಯ ಪ್ರಸ್ತಾಪಿಸಿದ ಕೂಡಲೇ ಮಹಿಳೆಯ ನಂಬರ್ ಬ್ಲಾಕ್ ಮಾಡಿ ಎಸ್ಕೇಪ್ ಆಗಿದ್ದಾನೆ.
ದೆಹಲಿಯ ಸಮೀಪದಲ್ಲೇ ಇರುವ ಗುರುಗ್ರಾಮದಲ್ಲಿ ತೈವಾನ್ ಮೂಲದ ಮಹಿಳೆಯೊಂದಿಗೆ ರವೀಂದ್ರ ವಿಶ್ವಕರ್ಮ ಎಂಬ ವ್ಯಕ್ತಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಮದುವೆ ವಿಷಯ ಪ್ರಸ್ತಾಪಿಸಿದಾಗ ಆಕೆಯ ನಂಬರ್ ಬ್ಲಾಕ್ ಮಾಡಿ, ಎಸ್ಕೇಪ್ ಆಗಿದ್ದಾನೆ. ಇದರಿಂದ ಮದುವೆಯ ನೆಪದಲ್ಲಿ ಯುವಕ ಅತ್ಯಾಚಾರ ಎಸಗಿರುವುದಾಗಿ ಮಹಿಳೆ ಆರೋಪಿಸಿ ದೂರು ದಾಖಲಿಸಿದ್ದಾಳೆ. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಬೆಸ್ಕಾಂನಿಂದ ಗ್ರಾಹಕ ಸ್ನೇಹಿ ಡಿಜಿಟಲ್ ಮೀಟರ್ ಅಳವಡಿಕೆ
2017ರಲ್ಲಿ ಭಾರತಕ್ಕೆ ಬಂದ ತೈವಾನ್ ಮೂಲದ 55 ವರ್ಷದ ಮಹಿಳೆ ಅಂದಿನಿಂದ ದೆಹಲಿಯ ಗುರುಗ್ರಾಮ್‌ನ ಸೆಕ್ಟರ್-52ನಲ್ಲಿ ವಾಸಿಸುತ್ತಿದ್ದರು. ಎನ್‌ಜಿಒ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ತನಗೆ 29 ವರ್ಷದ ರವೀಂದ್ರ ವಿಶ್ವಕರ್ಮ ಎಂಬ ವ್ಯಕ್ತಿಯೊಂದಿಗೆ ಸ್ನೇಹವಾಗಿತ್ತು. ಇಬ್ಬರ ಗೆಳೆತನ ಪ್ರೀತಿಗೆ ತಿರುಗಿ ರವೀಂದ್ರ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಇದೇ ನೆಪದಲ್ಲಿ ಹಲವು ಬಾರಿ ಮಹಿಳೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ನಂತರ ಮಹಿಳೆ ಅವನನ್ನು ಮದುವೆಯಾಗುವುದಾಗಿ ಕೇಳಿದಾಗ ಅವನು ಹಿಂದೇಟು ಹಾಕಿದ್ದಾನೆ. ಕೂಡಲೇ ಆಕೆಯ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಾನೆ. ಇದರಿಂದ ವಿಚಲಿತಳಾದ ಮಹಿಳೆ ಆರೋಪಿ ರವೀಂದ್ರ ವಿರುದ್ಧ ಸೆಕ್ಟರ್-53 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ ಎಂದು ಎಂದು ಸಹಾಯಕ ಪಿಎಸ್‌ಐ ಚಂದ್ರಕಾಂತ್ ತಿಳಿಸಿದ್ದಾರೆ.
ಆರೋಪಿ ರವೀಂದ್ರ ವಿಶ್ವಕರ್ಮ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ಆರು ತಿಂಗಳ ಹಿಂದೆ ಇಬ್ಬರೂ ಭೇಟಿಯಾಗಿದ್ದರು. ಮಹಿಳೆಯ ಮನೆಯ ಸಮೀಪವೇ ರವೀಂದ್ರ ವಾಸವಾಗಿದ್ದ ಎಂದು ಹೇಳಿದ್ದಾರೆ. ಇದನ್ನೂ ಓದಿ: ಏಷ್ಯಾದಲ್ಲಿ ಭಾರತ ಹೊರತು ಪಡಿಸಿ 13 ದೇಶಗಳಲ್ಲಿ ಆರ್ಥಿಕ ಹಿಂಜರಿತ ಸಾಧ್ಯತೆ
ರವೀಂದ್ರ ವಿಶ್ವಕರ್ಮ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ತನ್ನ ವಿರುದ್ಧದ ಆರೋಪ ಒಪ್ಪಿಕೊಂಡಿದ್ದಾನೆ. ಆತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದೂ ಅವರು ವಿವರಿಸಿದ್ದಾರೆ.