ಮುಂಬೈ: ದೇಶಕ್ಕಾಗಿ ಆಟದಲ್ಲಿ ಪ್ರತಿನಿಧಿಸುವುದು ಹೆಮ್ಮೆಯ ವಿಚಾರವಾಗಿದ್ದು, ತಂಡಕ್ಕಾಗಿ ಓವರ್‌ನ 6 ಎಸೆತಗಳಲ್ಲಿಯೂ ಡೈವ್ ಮಾಡಲು ನಾನು ಸಿದ್ಧನಿದ್ದೇನೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಅಂತರಾಷ್ಟ್ರೀಯ ಪಂದ್ಯಗಳಲ್ಲಿ ದೇಶದ ಪರ ಆಡುವ ಸಂದರ್ಭದಲ್ಲಿ ಪ್ರತಿಯೊಂದು ರನ್‍ಗಾಗಿ ನಾವು ಪೂರ್ಣ ಪ್ರಮಾಣದ ಪರಿಶ್ರಮ ಹಾಕಬೇಕಿದೆ. ಏಕೆಂದರೆ ತಂಡಕ್ಕಾಗಿ ಓವರ್ ಒಂದರ 6 ಎಸೆತಗಳಲ್ಲಿ ಡೈವ್ ಮಾಡಲು ನಾನು ಸಿದ್ಧ. ಇದು ಆಟಗಾರನಾಗಿ ನನ್ನ ಕರ್ತವ್ಯ ಎಂದು ಬಿಸಿಸಿಐ ನೀಡಿರುವ ಸಂದರ್ಶನದಲ್ಲಿ ಕೊಹ್ಲಿ ಹೇಳಿದ್ದಾರೆ.
Advertisement
SPECIAL: India captain @imVkohli speaks about scaling mount 10K and why the team will always hold prime importance before personal milestones. DO NOT MISS THIS – by @Moulinparikh #TeamIndia #INDvWI
Interview Link ????️ ???? – https://t.co/IFmGUsG6uB pic.twitter.com/aWlyUNSbjz
— BCCI (@BCCI) October 25, 2018
Advertisement
ತಂಡದ ಪರ ರನ್ ಗಳಿಸುವುದು ನಾನು ಬೇರೊಬ್ಬರ ಪರವಾಗಿ ಆಡಿದಂತೆ ಅಲ್ಲ ಅಥವಾ ನಾನು ಸಂಪೂರ್ಣ ಆಟಕ್ಕೆ ಬದ್ಧರಾಗಿದ್ದೇನೆ ಎಂದು ತೋರಿಸುವುದು ಅಲ್ಲ. ಕೇವಲ ತಂಡಕ್ಕಾಗಿ ಒಂದು ರನ್ ಅಧಿಕವಾಗಿ ಗಳಿಸುವುದು ಮಾತ್ರ ಇದರ ಉದ್ದೇಶವಾಗಿರುತ್ತದೆ. ಇದುವೇ ನನ್ನ ಉದ್ದೇಶವೂ ಆಗಿತ್ತು ಎಂದು ಸ್ಪಷ್ಟಪಡಿಸಿದರು. ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಡೈವ್ ಮಾಡಿ 150 ರನ್ ಪೂರ್ಣಗೊಳಿಸಿದ್ದರು.
Advertisement
ಇದೇ ವೇಳೆ ತಮ್ಮ ದಾಖಲೆ ಕುರಿತು ಪ್ರತಿಕ್ರಿಯೆ ನೀಡಿದ ಕೊಹ್ಲಿ, ಅವು ಜೀವನದಲ್ಲಿ ಅಲ್ಪ ಭಾಗವಷ್ಟೇ. ಆದರೆ ಅವುಗಳನ್ನು ನೀವು ಎಲ್ಲಿಂದ ಆರಂಭಿಸಿದ್ದೀರಿ ಎನ್ನುವುದನ್ನು ಹೇಳುತ್ತದೆ. 10 ವರ್ಷಗಳಿಂದ ಆಡುತ್ತಿರುವುದು ವಿಶೇಷ ಎನಿಸುತ್ತಿದೆ. ನಾನು ನನ್ನ ಆಟವನ್ನು ಪ್ರೀತಿಸುತ್ತೇನೆ ಎಂದರು.
Advertisement
INTERVIEW: I’ll dive six times in an over for my team: @imVkohli tells @Moulinparikh
Read the full interview here ▶️ https://t.co/NBEmdSWu8i #INDvWI pic.twitter.com/uNCtgQyIhL
— BCCI (@BCCI) October 26, 2018
ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‍ನಲ್ಲಿ ವೇಗವಾಗಿ 10 ಸಾವಿರ ರನ್ ಪೂರೈಸಿದ ಆಟಗಾರ ಎಂಬ ದಾಖಲೆ ಬರೆದಿದ್ದರು. ಅಲ್ಲದೇ ಪಂದ್ಯದಲ್ಲಿ 157 ರನ್ ಸಿಡಿಸಿ ಹಲವು ಸಾಧನೆಗಳನ್ನು ಮಾಡಿದ್ದರು. ಇದನ್ನು ಓದಿ : ಒಂದೇ ಪಂದ್ಯದಲ್ಲಿ ಕೊಹ್ಲಿ 3 ವಿಶೇಷ ಸಾಧನೆ ನಿರ್ಮಾಣ!
ವೆಸ್ಟ್ ಇಂಡೀಸ್ ವಿರುದ್ಧ 5 ಪಂದಗಳ ಏಕದಿನ ಟೂರ್ನಿಯಲ್ಲಿ ಮುಂದಿನ 3 ಪಂದ್ಯಗಳಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದ್ದು, ಭುವನೇಶ್ವರ್ ಕುಮಾರ್, ಬುಮ್ರಾ ತಂಡಕ್ಕೆ ಆಯ್ಕೆ ಆಗಿದ್ದಾರೆ. ಉಳಿದಂತೆ ಮೊಹಮ್ಮದ್ ಶಮಿ ಅವರನ್ನು ತಂಡದಿಂದ ಕೈ ಬಿಡಲಾಗಿದೆ. 3ನೇ ಏಕದಿನ ಪಂದ್ಯ ಶನಿವಾರ ಪುಣೆಯಲ್ಲಿ ನಡೆಯಲಿದೆ.
Announcement: #TeamIndia for last three ODIs against Windies announced. Jasprit Bumrah & Bhuvneshwar Kumar are back in the side #INDvWI pic.twitter.com/jzuJw4Sana
— BCCI (@BCCI) October 25, 2018