ನಾನು ಅಕ್ರಮವಾಗಿ ಸಂಪಾದನೆ ಮಾಡಿದ್ರೆ, ಅಷ್ಟೂ ಆಸ್ತಿ ದಾನ ಮಾಡ್ತೀನಿ – ಸಿ.ಟಿ ರವಿ

Public TV
2 Min Read
CT Ravi 4

ಬೆಳಗಾವಿ: ಸೈದ್ಧಾಂತಿಕವಾಗಿ ನನ್ನನ್ನು ಎದುರಿಸುವವರು ಸುಳ್ಳು ಹೇಳ್ತಾರೆ. ನಾನು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದೇನೆ ಅನ್ನೋದನ್ನ ಕಾಂಗ್ರೆಸ್ (Congress) ಸಾಬೀತು ಮಾಡಿದ್ರೆ, ಅಷ್ಟೆಲ್ಲಾ ಆಸ್ತಿಯನ್ನ ದಾನ ಮಾಡ್ತೀನಿ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಹೇಳಿದ್ದಾರೆ.

global college

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಎಸ್‌ವೈ (BS Yediyurappa) ಸಂಪುಟದಲ್ಲಿ 7 ತಿಂಗಳು ಕೋವಿಡ್‌ನಲ್ಲಿ (Covid) ಹೋಯ್ತು. ನಾನೆಲ್ಲಿ ಅಕ್ರಮ ಮಾಡಿದ್ದೇನೆ. ನಾನು ನನ್ನ ಆಸ್ತಿ ವಿವರವನ್ನ ಲೋಕಾಯುಕ್ತಕ್ಕೆ ಅಪ್ಡೇಟ್ ಮಾಡ್ತೀನಿ. ನಾನು ಘೋಷಣೆ ಮಾಡಿದಕ್ಕಿಂತ ಬೇರೆ ಆಸ್ತಿ ಇದೆ ಎಂದಾದ್ರೆ, ಅಕ್ರಮ ಆಸ್ತಿ ಗಳಿಸಿದ್ದೇನೆ ಎಂಬುದನ್ನ ಕಾಂಗ್ರೆಸ್ ಸಾಬೀತು ಮಾಡಿದ್ರೆ, ಅಷ್ಟನ್ನೂ ದಾನ ಮಾಡ್ತೀನಿ ಎಂದಿದ್ದಾರೆ. ಇದನ್ನೂ ಓದಿ: ಶಾಲಾ ಪ್ರವಾಸಕ್ಕೆ ಹೋಗುತ್ತಿದ್ದ ಬಸ್‌ಗಳ ಭೀಕರ ಅಪಘಾತ – 15 ವಿದ್ಯಾರ್ಥಿಗಳು ಸಾವು

DKSHI 2

ಯಾರು ಬೀಫ್ ರಫ್ತು ಮಾಡ್ತಿದ್ದಾರೆ?
ಹಲಾಲ್ (Halal) ಬಿಲ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವ ಬಿಜೆಪಿ ನಾಯಕರು ಬೀಫ್ ರಫ್ತು ಮಾಡ್ತಿದ್ದಾರೆ? ಗಾಂಧಿ ಆಶಯಕ್ಕೆ ವಿರುದ್ಧವಾಗಿ ಬೀಫ್ ರಫ್ತು ಮಾಡ್ತಿರೋದು ಕಾಂಗ್ರೆಸ್‌ನವರು. ಸಂವಿಧಾನದಲ್ಲಿ ಪ್ರತ್ಯೇಕ ಮಾಡುವ ಅವಕಾಶವಿಲ್ಲ. ಎಲ್ಲರ ಮೇಲೆ ಹಲಾಲ್ ಹೇರಬೇಕಿಲ್ಲ, ಹಲಾಲ್ ಎಲ್ಲ ಉತ್ಪನ್ನಗಳಲ್ಲೂ ಬಂದಿದೆ. ವ್ಯಾಪಾರವನ್ನು ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವ ಷಡ್ಯಂತ್ರವಿದೆ. ಅದು ಯಶಸ್ವಿಯಾದ್ರೆ ದೇಶಕ್ಕೆ ಮಾರಕ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಆ್ಯಪ್‌ಗಳಲ್ಲಿ ಸಾಲ ಪಡೆವ ಮುನ್ನ ಹುಷಾರ್ – ಸಾಲ ತೀರಿಸಿದ್ರೂ ಕಿರುಕುಳ, ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

MANGALURU SHARIQ 2

ಹಿಂದೂ ಭಯೋತ್ಪಾದಕ ಆಗಲಾರ:
ಬದಲಾವಣೆ ಜಗದ ನಿಯಮ, ಆದ್ರೆ ಬದಲಾವಣೆ ಚುನಾವಣೆಗೆ ಆಗಬಾರದು. ಹಿಂದೂ ಎಂದಿಗೂ ಭಯೋತ್ಪಾದಕ ಆಗಲಾರ. ಹಿಂದೂ ರಕ್ತದಲ್ಲಿ ಸರ್ವಧರ್ಮ ಸಹಬಾಳ್ವೆ ಇದೆ. ಭಯೋತ್ಪಾದನೆ ಮಾಡುವವರನ್ನ ಕಂಡರೆ ಅವರಿಗೆ ಭಯ ಇರಬೇಕು. ವೋಟಿನ ಆಸೆಗೆ ಅಂತಹವರನ್ನ ಬೆಳೆಸುವ ಕೆಲಸ ಆಗಬಾರದು. ಕುಂಕುಮದ ಬಗ್ಗೆ ಪ್ರೀತಿ ಶಾಶ್ವತವಾಗಿರಬೇಕು ಎಂದು ಸಲಹೆ ನೀಡಿದ್ದಾರೆ.

NIA

ಕುಕ್ಕರ್‌ನಲ್ಲಿ ಬಾಂಬ್ ಅಲ್ಲದೇ ಬಿರಿಯಾನಿ ಇತ್ತಾ?
ಶಾರಿಕ್ (Shariq) ಪರ ಡಿಕೆಶಿ (DK Shivakumar) ಹೇಳಿಕೆಗೆ ಪ್ರತಿಕ್ರಿಯಿಸಿ, ಶಾರಿಕ್ ಕುಕ್ಕರ್‌ನಲ್ಲಿ ಬಾಂಬ್ ಅಲ್ಲದೇ ಬಿರಿಯಾನಿ ತೆಗೆದುಕೊಂಡು ಹೋಗ್ತಿದ್ದನ್ರಾ? ಜನರ ಮಧ್ಯೆ ಬ್ಲಾಸ್ಟ್ ಆಗಿದ್ರೆ ಎಷ್ಟು ಸಾವಾಗ್ತಿತ್ತು? ನಮ್ಮ-ದೇಶ ಭಯೋತ್ಪಾದನೆಯಿಂದ ಕಹಿ ಏಟು ತಿಂದಿದೆ. ಒಂದು ಪಕ್ಷದ ಅಧ್ಯಕ್ಷರಾಗಿ ಭಯೋತ್ಪಾದಕರ ಪರವಾಗಿ ಮಾತನಾಡೋದು ಸರಿಯಲ್ಲ. ಇದು ಅವರ ಸ್ಥಾನಕ್ಕೆ ಶೋಭೆ ತರಲ್ಲ ಎಂದು ತಿರುಗೇಟು ನೀಡಿದ್ದಾರೆ.

CBI 1

`ಸಿಬಿಐ ದಾಳಿ (CBI Raid) ರಾಜಕೀಯ ಪ್ರೇರಿತ’ ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ ರವಿ, ಇ.ಡಿ, ಐಟಿ, ಸಿಬಿಐ ಬಿಜೆಪಿ ಬಂದ ಮೇಲೆ ಪ್ರಾರಂಭವಾಗಿದ್ಯಾ? ಪ್ರಾಮಾಣಿಕರು ಭಯ ಪಡುವ ಅವಶ್ಯಕತೆ ಇಲ್ಲ. ಪ್ರಾಮಾಣಿಕರಿಗೆ ಸಿಬಿಐ, ಇ.ಡಿ ಏನು ಮಾಡುತ್ತೆ? ಪ್ರಾಮಾಣಿಕವಾಗಿದ್ದರೆ ಡಿಕೆಶಿ ಹೆದರುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article