ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರನ್ನು ಸೋಲಿಸಲು ನಾನು ಒಂದು ದಿನ ಕ್ಯಾಂಪೇನ್ ಮಾಡಿದ್ರೆ ಸಾಕು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಎಸ್‍ವೈ ತಿರುಗೇಟು ನೀಡಿದ್ದಾರೆ.
ನಗರದ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕಾರಿಪುರ ಕ್ಷೇತ್ರಕ್ಕೆ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರಿಗೆ ಸ್ವಾಗತ ಕೋರಿದ್ರು. ನಾನು ಶಿಕಾರಿಪುರ ಪ್ರಚಾರ ಮಾಡದೇ ಇದ್ದರೂ ಜನ ಗೆಲ್ಲಿಸ್ತಾರೆ ಎನ್ನುವ ವಿಶ್ವಾಸ ಇದೆ. ಆದ್ರೆ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೊದಲು ಗೆಲ್ಲಲಿ ಅಂತ ಸಿಎಂ ಗೆ ಪಂಥಾಹ್ವಾನ ನೀಡಿದರು.
Advertisement
ನಾನು ಶಿಕಾರಿಪುರ ಪ್ರಚಾರ ಮಾಡದೆ ಇದ್ರೂ ಜನ ನನ್ನ ಆಯ್ಕೆ ಮಾಡುತ್ತಾರೆ. ಒಮ್ಮೆ ನಾಮಪತ್ರ ಸಲ್ಲಿಸೋಕೆ ಹೋಗ್ತೇನೆ. ಆನಂತರ ಒಂದು ದಿನ ಮಾತ್ರ ಪ್ರಚಾರ ಮಾಡ್ತೇನೆ. ನನ್ನ ಜಿಲ್ಲೆಯ ಜನ ಈ ಹಿಂದೆ 3 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಿಸಿದ್ರು. ಸಿದ್ದರಾಮಯ್ಯಗೆ ಬೇರೆ ಕ್ಷೇತ್ರ ಇರಲಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೊದಲು ಗೆಲ್ಲಲಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ, ಎಚ್‍ಡಿಕೆಯನ್ನು ಸೋಲಿಸಲು ನಾನು ಒಂದು ದಿನ ಪ್ರಚಾರ ಮಾಡಿದ್ರೆ ಸಾಕು: ಸಿಎಂ
Advertisement
ಚಾಮುಂಡೇಶ್ವರಿಯಲ್ಲಿ ಸಿಎಂ ಸ್ಪರ್ಧಿಸೋಕೆ ಹಿಂದು-ಮುಂದು ನೋಡ್ತಿದ್ದಾರೆ. ಬೇರೆ ಕ್ಷೇತ್ರವನ್ನ ಹುಡುಕ್ತಿರೋದು ಯಾರು? ಅವರೇ ಆ ಚಿಂತನೆ ಮಾಡ್ತಿದ್ದಾರೆ. ಮೊದಲು ಸಿಎಂ ಚಾಮುಂಡೇಶ್ವರಿಯಲ್ಲಿ, ಅವರ ಪುತ್ರ ಯತೀಂದ್ರ ವರುಣಾದಲ್ಲಿ ಸ್ಪರ್ಧಿಸಿ ಗೆಲ್ಲಲಿ ಎಂದು ಬಿಎಸ್‍ವೈ ಸವಾಲು ಹಾಕಿದರು.
Advertisement
ಇದೇ ವೇಳೆ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಭೇಟಿ ವಿಚಾರದ ಕುರಿತು ಮಾತನಾಡಿದ ಅವರು, ರಾಜ್ಯಕ್ಕೆ ರಾಮ್ ಮಾಧವ್ ಬಂದಿದ್ದಾರೆ. ಚುನಾವಣೆ ಪ್ರಚಾರ ಕುರಿತು ಮುಖಂಡರ ಜೊತೆ ಚರ್ಚೆ ನಡೆಸಿದ್ದಾರೆ. ಬಿಜೆಪಿ ಪ್ರಮುಖ ನಾಯಕರಿಗೆ ಮಾಹಿತಿ ನೀಡಿಯೇ ರಾಜ್ಯಕ್ಕೆ ಬಂದಿದ್ದಾರೆ. ರಾಜ್ಯ ನಾಯಕರಿಗೆ ಮಾಹಿತಿ ನೀಡದೆ ಬಂದಿದ್ದಾರೆ ಅನ್ನೋದು ಸತ್ಯಕ್ಕೆ ದೂರವಾದುದು. ಮುಂದೆಯೂ ರಾಜ್ಯಕ್ಕೆ ಭೇಟಿ ನೀಡಿ ಚುನಾವಣೆ ಸಿದ್ಧತೆ ಕೈಗೊಳ್ಳಲಿದ್ದಾರೆ. ಅಮಿತ್ ಶಾ ಜೊತೆ ಸೇರಿ ಪಕ್ಷವನ್ನು ಗೆಲ್ಲಿಸುವಲ್ಲಿ ರಾಮ್ ಮಾಧವ್ ನಿಸ್ಸೀಮರು ಅಂತ ಹೇಳಿದ್ರು.