ಮೈಸೂರು: ಯಡಿಯೂರಪ್ಪ ಹಾಗೂ ಕುಮಾರಸ್ವಾಮಿಯನ್ನು ನಾನೂ ಸೋಲಿಸುತ್ತೇನೆ. ನನಗೂ ಆ ಶಕ್ತಿ ಇದೆ. ಅವರನ್ನ ಸೋಲಿಸಲು ನಾನೂ ಒಂದು ದಿನ ಕ್ಯಾಂಪೇನ್ ಮಾಡಿದರೆ ಸಾಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನನ್ನ ಸ್ಪರ್ಧೆ ಚಾಮುಂಡೇಶ್ವರಿಯಲ್ಲೇ, ಚಾಮುಂಡೇಶ್ವರಿಯಲ್ಲೇ, ಚಾಮುಂಡೇಶ್ವರಿಯಲ್ಲೇ ಎಂದು ಮೂರು ಬಾರಿ ಉಚ್ಚರಿಸಿದ ಸಿಎಂ, ನಾನು ಚಾಮುಂಡೇಶ್ವರಿಯಲ್ಲಿ ಮಾತ್ರ ಸ್ಪರ್ಧಿಸುತ್ತೇನೆ. ಬೇರೆ ಯಾವುದೇ ಕ್ಷೇತ್ರಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
ಇನ್ನೂ ಎಷ್ಟು ಬಾರಿ ನಾನು ಇದನ್ನು ನಿಮಗೆ ಹೇಳಲಿ. ಅವರಿವರು ಕೇಳಿದರು ಎಂದು ಎಷ್ಟು ಬಾರಿ ಸ್ಪಷ್ಟನೆ ನೀಡಲಿ. ನಾನು ಚಾಮುಂಡೇಶ್ವರಿಯಲ್ಲಿ ಮಾತ್ರ ಸ್ಪರ್ಧಿಸುತ್ತೇನೆ. ಬೇರೆ ಯಾವುದೇ ಕ್ಷೇತ್ರಕ್ಕೆ ಹೋಗುವುದಿಲ್ಲ. ಚಾಮುಂಡೇಶ್ವರಿಯಲ್ಲೇ ನನ್ನ ಸ್ಪರ್ಧೆ ಅಂತ ಹಿಂದೆ ಹಲವಾರು ಬಾರಿ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಈ ಬಗ್ಗೆ ಸ್ಪಷ್ಟನೆ ನೀಡುವ ಅಗತ್ಯವೇನಿದೆ ಎಂದು ಮಾಧ್ಯಮದವರಿಗೆ ಸಿಎಂ ಪ್ರಶ್ನೆ ಮಾಡಿದರು.
Advertisement
ಕುಮಾರ ಸ್ವಾಮಿಯವರ ಅಪ್ಪನ ಆಣೆಯಾಗಲೂ ಚಾಮುಂಡೇಶ್ವರಿಯಲ್ಲಿ ಅವರು ಗೆಲ್ಲೋದಿಲ್ಲ ಎಂದು ಮತ್ತೊಮ್ಮೆ ಸಿಎಂ ಸ್ಪಷ್ಟಪಡಿಸಿದರು.
Advertisement
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾಮಠಕ್ಕೆ ಪುತ್ರ ಯತೀಂದ್ರ ಜೊತೆ ಸಿಎಂ ಭೇಟಿ ನೀಡಿದರು. ಸಿದ್ದರಾಮಯ್ಯನವರು ಆಗಮಿಸುತ್ತಿದ್ದಂತೆ ಸುತ್ತೂರು ಶ್ರೀಗಳು ತಲೆಗೆ ಪೆಟ್ಟಾಗಿದ್ದರ ಬಗ್ಗೆ ವಿಚಾರಿಸಿದರು. ಸ್ಕ್ಯಾನಿಂಗ್ ಮಾಡಿಸಿದ್ದೇನೆ ಎಂದ ಸಿದ್ದರಾಮಯ್ಯ ತಿಳಿಸಿದರು. ಸುತ್ತೂರು ಶ್ರೀಗಳ ಜೊತೆ ಕುಶಲೋಪರಿ ಮಾತುಕತೆ ನಡೆಸಿದ ಸಿಎಂ ನಂತರ ಗೌಪ್ಯ ಮಾತುಕತೆಗಾಗಿ ಮಾಧ್ಯಮಗಳನ್ನ ಹೊರಕಳುಹಿಸಿದರು. ಸುತ್ತೂರು ಶ್ರೀಗಳೊಂದಿಗೆ ಸಿಎಂ ಹಾಗೂ ಪುತ್ರ ಯತೀಂದ್ರ ಗೌಪ್ಯ ಮಾತುಕತೆ ನಡೆಸಿದರು.